ಶ್ರೀ ಮಹಾಭಾರತತಾತ್ಪರ್ಯನಿರ್ಣಯಃ - ಮೊದಲನೆಯ ಅಧ್ಯಾಯ
Sources:
1) Dr. Vyasanakere Prabhanjanacharya,
Sri VyasaMadhwa Samshodhana PratishThAna, Bengaluru
2) Madhwa Yuva Parishat (MYP), Yahoo group
Courtesy of Sri Govind Kulkarni and Sri Harish D Rao of MYP
ಶ್ರೀಮದಾನಂದತೀರ್ಥಭಗವತ್ಪಾದಪ್ರಣೀತ
ಮಹಾಭಾರತತಾತ್ಪರ್ಯನಿರ್ಣಯಃ
||ಶ್ರೀಮದ್ಧನುಮದ್ಭೀಮಮಧ್ವಾಂರ್ಗತರಾಮಕೃಷ್ಣವೇದವ್ಯಾಸಾತ್ಮಕಶ್ರೀಲಕ್ಷ್ಮೀಹಯಗ್ರೀವಾಯ ನಮಃ||
ಅಧ್ಯಾಯ - 1 ಸರ್ವಶಾಸ್ತ್ರಾರ್ಥನಿರ್ಣಯಃ
(ಸೃಷ್ಟಿಯ ಪ್ರಾರಂಭ, ಶ್ರೀಹರಿಯ ಅಪೂರ್ವ ಮಹಿಮೆ, ಸಚ್ಛಾಸ್ತ್ರಗಳು, ಭಗತತ್ವಗಳು, ಪಂಚಭೇದಗಳು, ಮೋಕ್ಷ ಸಾಧನಗಳು, ತಾರತಮ್ಯ)
ಮಂಗಲಾಚರಣೆ
ನಾರಾಯಣಾಯ ಪರಿಪೂರ್ಣಗುಣಾರ್ಣವಾಯ ವಿಶ್ವೋದಯಸ್ಥಿತಿಲಯೋನ್ನಿಯತಿಪ್ರದಾಯ|
ಜ್ಞಾನಪ್ರದಾಯ ವಿಬುಧಾಸುರಸೌಖ್ಯದುಃಖಸತ್ಕಾರಣಾಯ ವಿತತಾಯ ನಮೋ ನಮಸ್ತೇ ||೧||
नारायणाय परिपूर्णगुणार्णवाय विश्वोदयस्थितिलयोन्नियतिप्रदाय ।
ज्ञानप्रदाय विबुधासुरसौख्यदुःखसत्कारणाय वितताय नमो नमस्ते ॥१॥
ಅನುವಾದ
ಪರಿಪೂರ್ಣಗುಣಸಾಗರನೂ, ಜಗತ್ತಿಗೆ ಸೃಷ್ಟಿ, ಸ್ಥಿತಿ, ಪ್ರಲಯ ಮತ್ತು ಉತ್ಕೃಷ್ಟಪ್ರೇರಣೆಗಳನ್ನು ಉಂಟುಮಾಡುವವನೂ,
ಜ್ಞಾನನೀಡುವವನೂ, ಸುರರಿಗೆ ಸುಖಕ್ಕೂ ಅಸುರರಿಗೆ ದುಃಖಕ್ಕೂ(ಮಿಶ್ರರಿಗೆ ದುಃಖಸಹಿತಸುಖಕ್ಕೂ) ಮುಖ್ಯಕಾರಣನೂ,
ವಿಶಿಷ್ಟವೂ ವಿಲಕ್ಷಣವೂ ಆದ ರೀತಿಯಲ್ಲಿ ಸರ್ವತ್ರ ವ್ಯಾಪ್ತನೂ ಆದ ನಾರಾಯಣನೆ ನಿನಗೆ ವಂದನೆ, ವಂದನೆ.
ಶ್ಲೋಕ 2 - ಸೃಷ್ಟಿಯ ಆದಿಯಲ್ಲಿ ಭಗವತ್ಸ್ಥಿಯ ವರ್ಣನೆ
ಆಸೀದುದಾರಗುಣವಾರಿಧಿರಪ್ರಮೇಯೋ ನಾರಾಯಣಃ ಪರತಮಃ ಪರಮಾತ್ ಸ ಏಕಃ |
ಸಂಶಾತಸಂವಿದಖಿಲಂ ಜಠರೇ ನಿಧಾಯ ಲಕ್ಷ್ಮೀಭುಜಾಂತರಗತಃ ಸ್ವರತೋsಪಿ ಚಾಗ್ರೇ ||೧.೨||
ಅನುವಾದ
ಅಪ್ರಮೇಯನೂ, ಉತ್ತಮರಾದ ಬ್ರಹ್ಮಾದಿಗಳಿಗಿಂತಲೂ ಉತ್ತಮರಾದ ಮಹಾಲಕ್ಷ್ಮಿಗಿಂತ ಶ್ರೇಷ್ಠನೂ ಆದ ನಾರಾಯಣನು ತಾನೊಬ್ಬನೇ ಸಕಲಜಗತ್ತಿನ ಸೃಷ್ಟಿಗಿಂತ ಮುಂಚೆ ತನ್ನ ಬುದ್ಧಿಯಲ್ಲಿ ಅಡಗಿದ ಜ್ಞಾನ ಉಳ್ಳವನಾಗಿ ಸಕಲ ಜಗತ್ತನ್ನೂ ತನ್ನ ಉದರದಲ್ಲಿರಿಸಿಕೊಂಡವನಾಗಿ, ಮಹಾಲಕ್ಷ್ಮಿಯ ತೋಳುಗಳ ಮಧ್ಯೆ ಸ್ವರತನಾಗಿಯೇ ಇದ್ದ.
ಶ್ಲೋಕ 03 - ಭಗವದುದರದಲ್ಲಿ ತ್ರಿವಿಧ ಜೀವರು ಇರುವ ರೀತಿ
ತಸ್ಯೋದರಸ್ಥಜಗತಃ ಸದಮಂದಸಾಂದ್ರಸ್ವಾನಂದತುಷ್ಟವಪುಷೋsಪಿ ರಮಾರಮಸ್ಯ |
ಭೂತ್ಯೈ ನಿಜಾಶ್ರಿತಜನಸ್ಯ ಹಿ ಸೃಜ್ಯಸೃಷ್ಟಾವೀಕ್ಷಾ ಬಭೂವ ಪರನಾಮನಿಮೇಷಕಾಂತೇ ||೧.೩||
ಅನುವಾದ
ಸಕಲಜಗತ್ತನ್ನೂ ತನ್ನ ಉದರದಲ್ಲಿ ಧರಿಸಿದ ಆ ನಾರಾಯಣನಿಗೆ, ಅವನು ನಿರ್ದೋಷವೂ ಪೂರ್ಣವೂ ವ್ಯಾಪ್ತವೂ
ಸ್ವರೂಪಭೂತವೂ ಆದ ಆನಂದದಿಂದ ಸಂತೃಪ್ತ ದೇಹನಾದರೂ, ತನ್ನನ್ನು ಆಶ್ರಯಿಸಿಕೊಂಡಿರುವ ಸುಜೀವಸಮೂಹದ
ಕಲ್ಯಾಣಕ್ಕೋಸ್ಕರವಾಗಿ ವರ ಎಂಬ ಹೆಸರಿನ ಪ್ರಲಯಕಾಲದ ಕೊನೆಯಲ್ಲಿ, ಸೃಷ್ಟಿಗೆ ಯೋಗ್ಯವಾದ ವಸ್ತುಗಳನ್ನು
ಸೃಷ್ಟಿಸುವ ವಿಷಯದಲ್ಲಿ ಇಚ್ಛೆ ಉಂಟಾಯಿತು.
ಶ್ಲೋಕ 04
ದೃಷ್ಟ್ವಾ ಸ ಚೇತನಗಣಾನ್ ಜಠರೇ ಶಯನಾನಾನಂದಮಾತ್ರವಪುಷಃ ಸೃತಿವಿಪ್ರಮುಕ್ತಾನ್ |
ಧ್ಯಾನಂ ಗತಾನ್ ಸೃತಿಗತಾಂಶ್ಚ ಸುಷುಪ್ತಿಸಂಸ್ಥಾನ್ ಬ್ರಹ್ಮಾದಿಕಾನ್ ಕಲಿಪರಾನ್ ಮನುಜಾಂಸ್ತಥೈಕ್ಷತ್ ||೧.೪||
ಅನುವಾದ
ಆ ನಾರಾಯಣನು ತನ್ನ ಉದರದಲ್ಲಿ ಮಲಗಿದ್ದ ಚೇತನರ ಸಮುದಾಯವನ್ನು, ಪುನಃ ಸಂಸಾರದಿಂದ ಸಂಪೂರ್ಣವಾಗಿ ಮುಕ್ತರಾದಂತಹ ಕೇವಲ ಸ್ವರೂಪಾನಂದವನ್ನೇ ಶರೀರವನ್ನಾಗಿ ಉಳ್ಳ ಧ್ಯಾನನಿರತರಾದ ಉತ್ತಮಮುಕ್ತರನ್ನು, ಹಾಗೆಯೇ ಸಂಸಾರದಲ್ಲಿರುವ ಬ್ರಹ್ಮಾದಿ ಸಜ್ಜೀವರನ್ನೂ, ಕಲಿಪರ್ಯಂತರಾದ ಅಧಮಜೀವರನ್ನೂ, ಮಧ್ಯಮಜೀವರನ್ನೂ ನಿದ್ರಾನಿರತರನ್ನಾಗಿ ನೋಡಿದ; ಹಾಗೆಯೇ ಉಳಿದ ಮಧ್ಯಮ ಮತ್ತು ಅಧಮಮುಕ್ತರನ್ನು ಅವರು ಹೇಗಿದ್ದರೋ ಹಾಗೆಯೇ ನೋಡಿದ.
ಶ್ಲೋಕ 05 - ಸೃಷ್ಟಿಯ ಪ್ರಯೋಜನ
ಸ್ರಕ್ಷ್ಯೇ ಹಿ ಚೇತನಗಣಾನ್ ಸುಖದುಃಖಮಧ್ಯಸಂಪ್ರಾಪ್ತಯೇ ತನುಭೃತಾಂ ವಿಹೃತಿಂ ಮಮೇಚ್ಛನ್ |
ಸೋsಯಂ ವಿಹಾರ ಇಹ ಮೇ ತನುಭೃತ್ಸ್ವಭಾವಸಂಭೂತಯೇ ಭವತಿ ಭೂತಿಕೃದೇವ ಭೂತ್ಯಾಃ ||೧.೫||
ಅನುವಾದ
ನನ್ನ ವಿಹಾರವನ್ನು ಬಯಸಿ ನಾನು ಚೇತನಗಣಗಳನ್ನು ಅವರವರ ಸ್ವರೂಪಭೂತವಾದ ಸುಖ, ದುಃಖ ಮತ್ತು ದುಃಖಮಿಶ್ರಸುಖ
ಇವುಗಳ ಸಂಪ್ರಾಪ್ತಿಗಾಗಿ ಸೃಷ್ಟಿಸುವೆ. ಅಂತಹ ಈ ನನ್ನ ವಿಹಾರವು ಈ ಸಂಸಾರದಲ್ಲಿ ತ್ರಿವಿಧಜೀವರಿಗೆ ಅವರವರ ಸ್ವಭಾವದ
ಪೂರ್ಣಾಭಿವ್ಯಕ್ತಿಗೂ ಮಹಾಲಕ್ಷ್ಮಿಯ ಐಶ್ವರ್ಯಕ್ಕೂ ಸಾಧನವಾಗುವದು.
ಶ್ಲೋಕ 06 - ವಾಸುದೇವ - ಜಯಾ ರೂಪಗಳು
ಇತ್ಥಂ ವಿಚಿಂತ್ಯ ಪರಮಃ ಸ ತು ವಾಸುದೇವನಾಮಾ ಬಭೂವ ನಿಜಮುಕ್ತಿಪದಪ್ರದಾತಾ |
ತಸ್ಯಾsಜ್ಞಯೈವ ನಿಯತಾsಥ ರಮಾsಪಿ ರೂಪಂ ಬಭ್ರೇ ದ್ವಿತೀಯಮಪಿ ಯತ್ ಪ್ರವದಂತಿ ಮಾಯಾಮ್ ||೧.೬||
ಅನುವಾದ
ಹೀಗೆ ಆಲೋಚಿಸಿ ಸರ್ವೋತ್ತಮನಾದ ನಾರಾಯಣನು ತನ್ನವರಿಗೆ ನಿತ್ಯವಾದ ಮೋಕ್ಷಪದವನ್ನು ನೀಡುವ ವಾಸುದೇವ
ಎಂಬ ಹೆಸರುಳ್ಳ ರೂಪವುಳ್ಳವನಾದನು; ಅನಂತರ ಆ ಭಗವಂತನಿಗೆ ಅಧೀನರಾದ ಮಹಾಲಕ್ಷ್ಮಿಯು ನಾರಾಯಣನ ಆಜ್ಞೆಯಿಂದ
ಎರಡನೆಯ ರೂಪವನ್ನು ಧರಿಸಿದಳು; ಅದನ್ನು 'ಮಾಯಾ' ಎನ್ನುವರು.
ಶ್ಲೋಕ 07 - ಸಂಕರ್ಷಣ-ಪ್ರದ್ಯುಮ್ನ ರೂಪಗಳು
ಸಂಕರ್ಷಣಶ್ಚ ಸ ಬಭೂವ ಪುನಃ ಸುನಿತ್ಯಃ ಸಂಹಾರಕಾರಣವಪುಸ್ತದನುಜ್ಞಯೈವ |
ದೇವೀ ಜಯೇತ್ಯನು ಬಭೂವ ಸ ಸೃಷ್ಟಿಹೇತೋಃ ಪ್ರದ್ಯುಮ್ನತಾಮುಪಗತಃ ಕೃತಿತಾಂ ಚ ದೇವೀ ||1.7||
ಅನುವಾದ
ಆ ನಾರಯಣನು ಪುನಃ ಸನಾತನವೂ, ಸಂಹಾರಕಾರಣವೂ ಆದ 'ಸಂಕರ್ಷಣ' ರೂಪಿಯಾದ; ಅವನನ್ನುಸರಿಸಿ,
ಅವನ ಆಜ್ಞೆಯಿಂದಲೇ ರಮಾದೇವಿಯು 'ಜಯಾ' ಎಂಬ ರೂಪವನ್ನು ಧರಿಸಿದರು; ಅನಂತರ ಆ ನಾರಾಯಣನು
ಸೃಷ್ಟಿಕಾರ್ಯಕ್ಕೆಂದು 'ಪ್ರದ್ಯುಮ್ನ' ರೂಪವನ್ನು ಹೊಂದಿದ; ಮತ್ತು ಮಹಾಲಕ್ಷ್ಮಿಯು 'ಕೃತಿ' ಎಂಬ ರೂಪವನ್ನು ಧರಿಸಿದರು.
ಶ್ಲೋಕ 8 - ಅನಿರುದ್ಧ ರೂಪ
ಸ್ಥಿತ್ಯೈ ಪುನಃ ಸ ಭಗವಾನನಿರುದ್ಧನಾಮಾ ದೇವೀ ಚ ಶಾಂತಿರಭವಚ್ಚರದಾಂ ಸಹಸ್ರಮ್|
ಸ್ಥಿತ್ವಾ ಸ್ವಮೂರ್ತಿಭಿರಮೂಭಿರಚಿಂತ್ಯಶಕ್ತಿಃ ಪ್ರದ್ಯುಮ್ನರೂಪಕ ಇಮಾಂಶ್ಚರಮಾತ್ಮನೇsದಾತ್ ||೧.೮||
ಅನುವಾದ:
ಆ ನಾರಾಯಣನು ಪುನಃ ವಿಶ್ವಪಾಲನೆಗಾಗಿ ಅನಿರುದ್ಧರೂಪನಾದ; ಮಹಾಲಕ್ಶ್ಮಿಯು ಶಾಂತಿ ಎಂಬ ರೂಪವನ್ನು ಧರಿಸಿದರು; ಸಹಸ್ರ ವರ್ಷಗಳ ಕಾಲ ತನ್ನ ಈ ರೂಪದೊಂದಿಗೆ ಇದ್ದು ಅಚಿಂತ್ಯ ಶಕ್ತಿಶಾಲಿಯಾದ ಪ್ರದ್ಯುಮ್ನ ರೂಪದ ನಾರಾಯಣ ಸೃಷ್ಟಿಗೆ ಅರ್ಹರಾದ ಜೀವರನ್ನು ಕೊನೆಯದಾದ ಅನಿರುದ್ಧ ರೂಪಕ್ಕೆ ನೀಡಿದ.
ಶ್ಲೋಕ ೯ - ಅನಿರುದ್ಧಸೃಷ್ಟಿಯ ಉಪಕ್ರಮ
ನಿರ್ದೇಹಕಾನ್ ಸ ಭಗವಾನನಿರುದ್ಧನಾಮಾ ಜೀವಾನ್ ಸ್ವಕರ್ಮಸಹಿತಾನುದರೇ ನಿವೇಶ್ಯ |
ಚಕ್ರೇsಥ ದೇಹಸಹಿತಾನ್ ಕ್ರಮಶಃ ಸ್ವಯಂಭು ಪ್ರಾಣಾತ್ಮಶೇಷಗರುಡೇಶಮುಖಾನ್ ಸಮಗ್ರಾನ್ ||೧.೯||
ಅನುವಾದ
ಅನಿರುದ್ಧನಾಮಕನಾದ ಆ ಶ್ರೀಹರಿ ಲಿಂಗದೇಹವ್ಯತಿರಿಕ್ತವಾದ ಅನ್ಯದೇಹವನ್ನು ಹೊಂದಿರದವರೂ, ತಮ್ಮ ಕರ್ಮಗಳಿಂದ ಯುಕ್ತರೂ ಆದ ಆ ಚತುರ್ಮುಖ ಬ್ರಹ್ಮ, ವಾಯು, ಶೇಷ, ಗರುಡ, ರುದ್ರ ಮೊದಲಾದ ಜೀವರನ್ನು ತನ್ನ ಉದರದಲ್ಲಿ ಇರಿಸಿಕೊಂಡು ಅವರೆಲ್ಲರನ್ನೂ ಕ್ರಮವಾಗಿ ದೇಹಯುಕ್ತರನ್ನಾಗಿ ಮಾಡಿದ.
ಶ್ಲೋಕ ೧೦ - ಭಗವಂತನ ಬಗೆಬಗೆಯ ರೂಪಗಳು
ಪಂಚಾತ್ಮಕಃ ಸ ಭಗವಾನ್ ದ್ವಿಷಡಾತ್ಮಕೋsಭೂತ್ ಪಂಚದ್ವಯೀ ಶತಸಹಸ್ರಪರೋsಮಿತಶ್ಚ |
ಏಕಃ ಸಮೋsಪ್ಯಖಿಲದೋಷಸಮುಜ್ಝಿತೋsಪಿ ಸರ್ವತ್ರ ಪೂರ್ಣಗುಣಕೋsಪಿ ಬಹೂಪಮೋsಭೂತ್ ||೧.೧೦||
ಅನುವಾದ
(ನಾರಾಯಣಾದಿ) ಪಂಚರೂಪಿಯಾದ ಆ ಭಗವಂತನು, (ಕೇಶವಾದಿ) ದ್ವಾದಶ ರೂಪನಾದನು; ಮತ್ತು (ಮತ್ಸ್ಯಾದಿ)ದಶರೂಪಿಯೂ, (ನಾರಾಯಣಾದಿ) ಶತರೂಪಿಯೂ, (ವಿಶ್ವಾದಿ) ಸಹಸ್ರರೂಪಿಯೂ, (ಪರಾದಿ) ಬಹುರೂಪಿಯೂ (ಅಜಾದಿ) ಅನಂತರೂಪಿಯೂ ಆದನು; ಅವನು ಒಬ್ಬನೇ ಆದರೂ ಸರ್ವರೂಪಗಳಲ್ಲೂ ಸಮನೇ ಆದರೂ, ಸಕಲ ರೂಪಗಳಲ್ಲೂ ಸಕಲದೋಷರಹಿತನೂ ಪೂರ್ಣಗುಣಶಾಲಿಯೂ ಆದರೂ ಬಹುವಾದಂತೆ ಆದನು.
ಶ್ಲೋಕ - ೧೧ ಶ್ರೀಹರಿಯ ಅಪೂರ್ವ ಮಹಿಮೆ
ನಿರ್ದೋಷಪೂರ್ಣಗುಣವಿಗ್ರಹ ಆತ್ಮತಂತ್ರೋ ನಿಶ್ಚೇತನಾತ್ಮಕಶರೀರಗುಣೈಶ್ಚ ಹೀನಃ|
ಆನಂದಮಾತ್ರಕರಪಾದಮುಖೋದರಾದಿಃ ಸರ್ವತ್ರ ಚ ಸ್ವಗತಭೇದವಿವರ್ಜಿತಾತ್ಮಾ ||೧.೧೧||
ಅನುವಾದ ಆ ಪರಮಾತ್ಮನು ದೋಷರಹಿತವೂ ಪೂರ್ಣವೂ ಆದ ಗುಣಗಳನ್ನೇ ದೇಹವನ್ನಾಗಿ ಉಳ್ಳವನು; ಸ್ವತಂತ್ರನು; ಜಡಶರೀರರಹಿತನು ಮತ್ತು ಪ್ರಕೃತಿಯ ಗುಣಗಳಿಂದ ರಹಿತನು;ಕೇವಲ ಆನಂದಸ್ವರೂಪವಾದ ಹಸ್ತ, ಪಾದ, ಮುಖ, ಉದರಾದಿಗಳನ್ನು ಹೊಂದಿರುವವನು; ಮತ್ತು ಸರ್ವತ್ರ ಸ್ವಗತಭೇದವಿವರ್ಜಿತನು.
ಶ್ಲೋಕ - ೧೨ ಶ್ರೀಹರಿಯು ದೇಶತಃ, ಕಾಲತಃ, ಗುಣತಃ ಅನಂತ
ಕಾಲಾಚ್ಚ ದೇಶಗುಣತೋsಸ್ಯ ನ ಚಾದಿರಂತೋ ವೃದ್ಧಿಕ್ಷಯೌ ನ ತು ಪರಸ್ಯ ಸದಾತನಸ್ಯ |
ನೈತಾದೃಶಃ ಕ್ವ ಚ ಬಭೂವ ನ ಚೈವ ಭಾವ್ಯೋ ನಾಸ್ತ್ಯುತ್ತರಃ ಕಿಮು ಪರಾತ್ ಪರಮಸ್ಯ ವಿಷ್ಣೋಃ ||೧.೧೨||
ಅನುವಾದ
ಸದಾ ಒಂದೇ ತೆರನಾಗಿರುವ ಸರ್ವೋತ್ತಮನಾದ ಈ ಭಗವಂತನಿಗೆ ಕಾಲದಿಂದಾಗಲೀ, ದೇಶ ಮತ್ತು ಗುಣಗಳಿಂದಾಗಲೀ, ಮೊದಲಾಗಲೀ ಕೊನೆಯಾಗಲೀ ಇಲ್ಲ; ವೃದ್ಧಿ ಮತ್ತು ಕ್ಷಯಗಳೂ ಇಲ್ಲ; ಬ್ರಹ್ಮಾದಿಗಳಿಗಿಂತ ಉತ್ತಮಳಾದ ಮಹಾಲಕ್ಷ್ಮಿಗೂ ಮಿಗಿಲಾದ ಈ ವಿಷ್ಣುವಿಗೆ ಸಮನಾದವನು ಎಲ್ಲೂ ಈ ಹಿಂದೆ ಆಗಿಲ್ಲ; ಮುಂದೆ ಆಗುವದಿಲ್ಲ; ಈಗಲೂ ಇಲ್ಲವೇ ಇಲ್ಲ; ಹೀಗೆ ಸಮನೇ ಇಲ್ಲದಿರುವಾಗ ಉತ್ತಮನು ಇಲ್ಲ ಎಂದು ಹೇಳಬೇಕೆ?
ಶ್ಲೋಕ - ೧೩ ಶ್ರೀಹರಿಯು ಸ್ವತಂತ್ರ - ಇತರರು ಅಸ್ವತಂತ್ರರು
ಸರ್ವಜ್ಞ ಈಶ್ವರತಮಃ ಸ ಚ ಸರ್ವಶಕ್ತಿಃ ಪೂರ್ಣಾವ್ಯಯಾತ್ಮಬಲಚಿತ್ಸುಖವೀರ್ಯಸಾರಃ |
ಯಸ್ಯಾಜ್ಞಯಾರಹಿತಮಿಂದರಯಾ ಸಮೇತಂ ಬ್ರಹ್ಮೇಶಪೂರ್ವಕಮಿದಂ ನ ತು ಕಸ್ಯ ಚೇಶಮ್ ||೧.೧೩||
ಅನುವಾದ
ಆ ಭಗವಂತ ಸರ್ವಜ್ಞ; ನಿಯಾಮಕರಾದ ಲಕ್ಷ್ಮೀ ಬ್ರಹ್ಮಾದಿಗಳಿಗೂ ನಿಯಾಮಕ; ಸರ್ವಸಮರ್ಥ; ಪರಿಪೂರ್ಣವೂ, ನಾಶರಹಿತವೂ, ಸ್ವರೂಪಭೂತವೂ ಆದ ಬಲ, ಜ್ಞಾನ, ಆನಂದ, ವೀರ್ಯ ಮೊದಲಾದುವುಗಳಿಂದಾಗಿ ಸರ್ವಶ್ರೇಷ್ಠ; ಅವನ ಅಪ್ಪಣೆ ಇಲ್ಲದೆ ಮಹಾಲಕ್ಷ್ಮೀಸಮೇತವಾದ ಬ್ರಹ್ಮರುದ್ರಾದಿ ಮೊದಲಾದವರಿಂದ ಕೂಡಿದ ಈ ಸಮಸ್ತಜಗತ್ತು, ಯಾವುದಕ್ಕೂ ಸಮರ್ಥವಾಗದು.
ಶ್ಲೋಕ - ೧೪ ಶ್ರೀಹರಿ ಹಾಗೂ ಜೀವರ ಬಿಂಬ ಪ್ರತಿಬಿಂಬ ಭಾವ
ಆಭಾಸಕೋsಸ್ಯ ಪವನಃ ಪವನಸ್ಯ ರುದ್ರಃ ಶೇಷಾತ್ಮಕೋ ಗರುಡ ಏವ ಚ ಶಕ್ರಕಾಮೌ |
ವೀಂದ್ರೇಶಯೋಸ್ತದಪರೇ ತ್ವನಯೋಶ್ಚ ತೇಷಾಮೃಷ್ಯಾದಯ: ಕ್ರಮಶ ಊನಗುಣಾಃ ಶತಾಂಶಾತ್ ||೧.೧೪||
ಅನುವಾದ
ಶ್ರೀಹರಿಗೆ ಶ್ರೀವಾಯುದೇವರು ಪ್ರತಿಬಿಂಬ; ಶ್ರೀವಾಯುದೇವರಿಗೆ ಮುಂದೆ ಶೇಷಪದವಿಗೆ ಬರುವ ರುದ್ರ ಮತ್ತು ಗರುಡ ಇಬ್ಬರೂ ಪ್ರತಿಬಿಂಬರು; ರುದ್ರ ಮತ್ತು ಗರುಡರಿಗೆ ಇಂದ್ರ ಮತ್ತು ಕಾಮರು ಪ್ರತಿಬಿಂಬರು; ಅವರಿಗೆ ಋಷಿಗಳೇ ಮೊದಲಾದವರು ಪ್ರತಿಬಿಂಬರು; ಪ್ರತಿಬಿಂಬರೆನಿಸುವವರು ಬಿಂಬರಾದವರಿಗಿಂತ ಗುಣತಃ ಶತಾಂಶ ನ್ಯೂನರು.
ಶ್ಲೋಕ - ೧೫ ಲಕ್ಷ್ಮ್ಯಾದಿಗಳ ಪ್ರತಿಬಿಂಬ ಭಾವ
ಆಭಾಸಕಾ ತ್ವಥ ರಮಾsಸ್ಯ ಮರುತ್ಸ್ವರೂಪಾತ್ ಶ್ರೇಷ್ಠಾsಪ್ಯಜಾತ್ ತದನು ಗೀಃ ಶಿವತೋ ವರಿಷ್ಠಾ |
ತಸ್ಯಾ ಉಮಾ ವಿಪತಿನೀ ಚ ಗಿರಸ್ತಯೋಸ್ತು ಶಚ್ಯಾದಿಕಾಃ ಕ್ರಮಶ ಏವ ಯಥಾ ಪುಮಾಂಸಃ ||೧.೧೫||
ಅನುವಾದ
ಬ್ರಹ್ಮದೇವರಿಗಿಂತಲೂ ಶ್ರೇಷ್ಠಳಾದ ಮಹಾಲಕ್ಷ್ಮಿಯು ಸ್ತ್ರೀಯರಲ್ಲಿ ಪರಮಾತ್ಮನ ಮುಖ್ಯ ಪ್ರತಿಬಿಂಬ; ರುದ್ರದೇವರಿಗಿಂತ ಶ್ರೇಷ್ಠರಾಗಿರುವ ಸರಸ್ವತಿಭಾರತಿಯರು ಆ ಮಹಾಲಕ್ಷ್ಮಿಗೆ ಪ್ರತಿಬಿಂಬರು; ಸರಸ್ವತಿಭಾರತಿಯರಿಗೆ ಪಾರ್ವತೀ, ಸುಪರ್ಣಿಯರು ಪ್ರತಿಬಿಂಬರು; ಅವರಿಗೆ ಶಚಿದೇವಿಯೇ ಮೊದಲಾದ ಸ್ತ್ರೀಯರು, ಪುರುಷರು ಹೇಗೆ ಗುಣಕ್ರಮಾನುಸಾರವಾಗಿ ಸ್ವೋತ್ತಮರಾದವರಿಗೆ ಪ್ರತಿಬಿಂಬರಾಗಿರುವರೋ, ಹಾಗೆಯೇ ಬಿಂಬ-ಪ್ರತಿಬಿಂಬ ಭಾವದಿಂದ ಕೂಡಿರುವರು.
ಶ್ಲೋಕ - ೧೬ ಗುಣತಾರತಮ್ಯದ ಬಗೆ
ತಾಭ್ಯಶ್ಚತೇ ಶತಗುಣೈರ್ದಶತೋ ವರಿಷ್ಠಾಃ ಪಂಚೋತ್ತರೈರಪಿ ಯಥಾ ಕ್ರಮಶಃ ಶ್ರುತಿಸ್ಥಾಃ |
ಶಬ್ದೋ ಬಹುತ್ವವಚನಃ ಶತಮಿತ್ಯತಶ್ಚ ಶ್ರುತ್ಯಂತರೇಷು ಬಹುಧೋಕ್ತಿವಿರುದ್ಧತಾ ನ ||೧.೧೬||
ಅನುವಾದ
ಆ ಪುರುಷರಲ್ಲಿ ಕೆಲವರು ಸ್ತ್ರೀಯರಿಗಿಂತ ನೂರುಗುಣ ಅಧಿಕರು; ಇನ್ನೂ ಕೆಲವರು ಹತ್ತುಗುಣಗಳಿಂದ ಶ್ರೇಷ್ಠರು; ಮತ್ತೆ ಕೆಲವರು ಹದಿನೈದುಗುಣಗಳಿಂದ ಉತ್ತಮರು; ಈ ಶ್ರೇಷ್ಠ್ಯಕ್ರಮವನ್ನು ಶ್ರುತಿಯಲ್ಲಿ ಹೇಳಿರುವಂತೆ ತಿಳಿಯಬೇಕು; ಶತ ಎಂಬ ಶಬ್ದಕ್ಕೆ ಬಹುತ್ವವೆಂದು ಅರ್ಥವನ್ನು ತಿಳಿದಾಗ, ವಿಭಿನ್ನಶ್ರುತಿಗಳಲ್ಲಿ ಗುಣಗಳ ವ್ಯತ್ಯಾಸವನ್ನು ಅನೇಕ ರೀತಿಯಲ್ಲಿ ಹೇಳಿದ್ದರೂ ವಿರೋಧಕ್ಕೆ ಅವಕಾಶವಿರುವದಿಲ್ಲ.
ಶ್ಲೋಕ - ೧೭ ಮುಕ್ತಿಯಲ್ಲೂ ತಾರತಮ್ಯ
ತೇಷಾಂ ಸ್ವರೂಪಮಿದಮೇವ ಯತೋsಥ ಮುಕ್ತಾ-ವಪ್ಯೇವಮೇವ ಸತತೋಚ್ಚವಿನೀಚರೂಪಾಃ |
ಶಬ್ದಃ ಶತಂ ದಶ ಸಹಸ್ರಮಿತಿ ಸ್ಮ ಯಸ್ಮಾತ್ ತಸ್ಮಾನ್ನ ಹೀನವಚನೋsಥ ತತೋsಗ್ರ್ಯರೂಪಾಃ ||೧.೧೭||
ಅನುವಾದ
ಈ ತಾರತಮ್ಯ ಅವರ ಸ್ವರೂಪಭೂತವೇ ಆಗಿರುವದರಿಂದ ಮುಕ್ತಿಯಲ್ಲೂ ಅವರು ನೀಚೋಚ್ಚ ಭಾವದಿಂದಲೇ ಇರುವರು; ’ದಶ ಶತಂ ಸಹಸ್ರಂ’ ಎಂದು ಶ್ರುತಿಯೇ ಇರುವದರಿಂದ ’ಶತ’ ಎಂಬ ಶಬ್ದವು ಅಲ್ಪತ್ವವಾಚಕವಾಗಿಲ್ಲ; ಆದ್ದರಿಂದ ತುಂಬಾ ಗುಣಾಧಿಕರು ಎಂದಷ್ಟೇ ಕೆಲವಡೆ ಕರೆದಿದ್ದರೂ ಅವರು ಶ್ರ್‍ಏಷ್ಠವಾದ ಸ್ವರೂಪದವರೇ ಆಗಿರುವರು.
ಶ್ಲೋಕ - ೧೮ ಜೀವ ತ್ರೈವಿಧ್ಯ
ಏವಂ ನರೋತ್ತಮಪರಾಸ್ತು ವಿಮುಕ್ತಿಯೋಗ್ಯಾ ಅನ್ಯೇ ಚ ಸಂಸೃತಿಪರಾ ಅಸುರಾಸ್ತಮೋಗಾಃ |
ಏವಂ ಸದೈವ ನಿಯಮಃ ಕ್ವಚಿದನ್ಯಥಾ ನ ಯಾವನ್ನ ಪೂರ್ತಿರುತ ಸಂಸೃತಿಗಾಃ ಸಮಸ್ತಾಃ ||೧.೧೮||
ಅನುವಾದ
ಹೀಗೆ ವಾಯುದೇವರನ್ನು ಆಶ್ರಯಿಸುವವರು ಮುಕ್ತಿಯೋಗ್ಯರು, ಇತರರು ನಿತ್ಯಸಂಸಾರಿಗಳು; ಅಸುರರು ತಮೋಯೋಗ್ಯರು. ಇದು ಸದಾ ಇರುವ ನಿಯಮ; ಎಲ್ಲೂ ಬದಲಾಗದು. ಸಾಧನೆ ಪೂರೈಸುವವರೆಗೂ ಸಕಲರೂ ಸಂಸಾರದಲ್ಲಿರುವರು.
ಶ್ಲೋಕ - ೧೯ ಜೀವರು ಅನಂತ
ಪೂರ್ತಿಶ್ಚ ನೈವ ನಿಯಮಾದ್ಭವಿತಾ ಹಿ ಯಸ್ಮಾತ್ ತಸ್ಮಾತ್ ಸಮಾಪ್ತಿಮಪಿ ಯಾಂತಿ ನ ಜೀವಸಂಘಾಃ |
ಅನಂತ್ಯಮೇವ ಗಣಶೋsಸ್ತಿ ಯತೋ ಹಿ ತೇಷಾ- ಮಿತ್ಥಂ ತತಃ ಸಕಲಕಾಲಗತಾ ಪ್ರವೃತ್ತಿಃ ||೧.೧೯||
ಅನುವಾದ ಸಾಧನಸಂಪೂರ್ತಿಯು ಸಕಲರಿಗೂ ಶ್ರೀಹರಿಯನಿಯಮದಿಂದಾಗಿ ಏಕಕಾಲಕ್ಕೆ ಆಗುವುದಿಲ್ಲವಾದ್ದರಿಂದ ಜೀವರ ಸಮೂಹಗಳು ಸಮಾಪ್ತಿಯನ್ನು ಎಂದೂ ಹೊಂದುವದೇ ಇಲ್ಲ; ಜೀವರಿಗೆ ಅನಂತ್ಯವು ಗಣಶಃ ಇರುವುದರಿಂದಾಗಿ, ಹೀಗೆ ಸೃಷ್ಟ್ಯಾದಿರೂಪ ಪ್ರವೃತ್ತಿಯು ಸಕಲಕಾಲಗಳಲ್ಲಿಯೂ ಇದ್ದೇ ಇರುವದು.
ಶ್ಲೋಕ - ೨೦ ಶ್ರೀಹರಿಯ ಗುಣಗಳು ಅನಂತ
ಏತೈಃ ಸುರಾದಿಭಿರತಿಪ್ರತಿಭಾದಿಯುಕ್ತೈರ್ಯುಕ್ತೈಸ್ಸಹೈವ ಸತತಂ ಪ್ರವಿಚಿಂತಯದ್ಭಿಃ |
ಪೂರ್ತೇರಚಿಂತ್ಯಮಹಿಮಃ ಪರಮಃ ಪರಾತ್ಮಾ ನಾರಾಯಣೋsಸ್ಯ ಗುಣವಿಸ್ತೃತಿರನ್ಯಗಾ ಕ್ವ ||೧.೨೦||
ಅನುವಾದ
ಅತ್ಯಂತ ಹೆಚ್ಚಿನ ಪ್ರತಿಭೆ ಮೊದಲಾದ ಗುಣಗಳಿಂದ ಕೂಡಿದಂತಹ ಇಂತಹ ಸಕಲದೇವತೆಗಳೂ ಸತತವಾಗಿ ಚಿಂತಿಸುತ್ತಿದ್ದರೂ ಪೂರ್‍ಣನಾದ್ದರಿಂದ ಸರ್ವೋತ್ತಮನೂ ಸರ್ವಸ್ವಾಮಿಯೂ ಆದ ಶ್ರೀಹರಿಯು ಅವರ ಚಿಂತನೆಗೂ ಎಟುಕದ ಮಹಾಮಹಿಮನಾಗಿರುವನು; ಇಂತಹ ಅವನ ಗುಣವಿಸ್ತಾರವು ಇತರೆಡೆಗಳಲ್ಲಿ ಎಂತಿರುವದು?
ಶ್ಲೋಕ - ೨೧ ಹರಿಯೊಂದಿಗೆ ಇತರರಿಗೆ ಸಾಮ್ಯ ಐಕ್ಯಗಳು ಅಸಾಧ್ಯ
ಸಾಮ್ಯಂ ನ ಚಾಸ್ಯ ಪರಮಸ್ಯ ಚ ಕೇನ ಚಾಪ್ಯಂ ಮುಕ್ತೇನ ಚ ಕ್ವಚಿದತಸ್ತ್ವಭಿದಾ ಕುತೋSಸ್ಯ |
ಪ್ರಾಪ್ಯೇತ ಚೇತನಗಣೈಃ ಸತತಾಸ್ವತಂತ್ರೈಃ ನಿತ್ಯಸ್ವತಂತ್ರವಪುಶ್ ಹಃ ಪರಮಾತ್ ಪರಸ್ಯ ||೧.೨೧||
ಅನುವಾದ
ಈ ಪರಮಾತ್ಮನೊಂದಿಗೆ ಸಾಮ್ಯವನ್ನು ಜೀವೋತ್ತಮನಾದ ಮುಕ್ತಬ್ರಹ್ಮನೂ, ಎಂದೂ ಹೊಂದಲಾರ; ಎಂದ ಮೇಲೆ ಸದಾ ಅಸ್ವತಂತ್ರ ಇತರ ಚೇತನಸಮುದಾಯಗಳು ನಿತ್ಯ ಸ್ವತಂತ್ರದೇಹನೂ ಬ್ರಹ್ಮಾದಿಗಳಿಗಿಂತ ಶ್ರೇಷ್ಠಳಾದ ಮಹಾಲಕ್ಷ್ಮಿಗಿಂತಲೂ ಉತ್ತಮನೂ ಆದ ಇವನೊಂದಿಗೆ ಅಭೇದವನ್ನು ಹೇಗೆ ತಾನೆ ಹೊಂದಿಯಾವು?
ಶ್ಲೋಕ - ೨೨ ಸಕಲ ಶಾಸ್ತ್ರಗಳ ಸಾರ ಶ್ರೀಹರಿಯ ಪಾರಮ್ಯವೇ
ಅರ್ಥೋsಯಮೇವ ನಿಖಿಲೈರಪಿ ವೇದವಾಕ್ಯೈ ರಾಮಾಯಣೈಃ ಸಹಿತಭಾರತಪಂಚ ರಾತ್ರೈಃ |
ಅನ್ಯೈಶ್ಚ ಶಾಸ್ತ್ರವಚನೈಃ ಸಹತತ್ತ್ವಸೂತ್ರೈರ್ನಿರ್ಣೀಯತೇ ಸಹೃದಯಂ ಹರಿಣಾ ಸದೈವ ||೧.೨೨||
ಅನುವಾದ
ಈ ವಿಷಯವೇ ಸಕಲವೇದವಾಕ್ಯಗಳ್ ಇಂದಲೂ ಭಾರತಪಂಚರಾತ್ರ ರಾಮಾಯಣಗಳಿಂದ್ ಅಲೂ, ತತ್ತ್ವಸೂತ್ರಸಮೇತವ ಅದ ಇತರ ಶಾಸ್ತ್ರವಚನಗಳಿಂ ದಲೂ, ಸದಾ ಶ್ರೀಹರಿಯಿಂದ ಸಾಭಿಪ್ರಾಯವಾಗಿ ನಿರ್ಣಯಿಸಲ್ಪಟ್ಟಿದೆ.
ಶ್ಲೋಕ - ೨೩ ಶ್ರೀಹರಿ ಸರ್ವೋತ್ತಮತ್ತಮತ್ವಾ ದಿಗಳ ಬಗೆ ಪ್ರಮಾಣ ಸಂಕಲನ (೧/೫)
ನಾರಾಯಣಸ್ಯ ನ ಸಮಃ ಪುರುಷೋತ್ತಮೋsಹಂ ಜೀವಾಕ್ಷರೇ ಹ್ಯಧಿಗತೋsಸ್ಮಿ ತತೋsನ್ಯದಾರ್ತಮ್ |
ಮುಕ್ತೋಪಸೃಪ್ಯ ಇಹ ನಾಸ್ತಿ ಕುತಶ್ಚ ಕಶ್ಚಿನ್ನಾನೇವ ಧರ್ಮಪೃಥಗಾತ್ಮದ್ ಋಗೇತ್ಯಧೋ ಹಿ ||೧.೨೩||
ಅನುವಾದ
’ನಾರಾಯಣನಿಗೆ ಸಮರಿಲ್ಲ’, ’ಸಕಲ ಜೀವರ ಮತ್ತು ಮಹಾಲಕ್ಷ್ಮಿಯ ಹೃದಯದಲ್ಲಿ ಅವರಿಗಿಂತ ಉತ್ತಮನಾಗಿ ನೆಲೆಸಿರುವದರಿಂದ ನಾನೇ ಪುರುಷೋತ್ತಮನಾಗಿರು ವೆ’, ’ಅವನನ್ನು ಬಿಟ್ಟು ಇತರರೆಲ್ಲ ದುಃಖಿಗಳು’, ’ಮುಕ್ತಜೀವರು ಇವನನ್ನು ಹೊಂದುವರು’, ’ಇವನು ಸ್ವಗತಭೇದವಿವರ್ಜಿತ್ ಅ’, ’ಇವನಲ್ಲಿ ಭೇದ ಕಾಣುವವನು ಮತ್ತು ಇವನಿಗೂ ಇವನ ಧರ್ಮಾದಿಗಳಿಗೂ ಭೇದಕಾಣುವವನೂ ಅಧೋಗತಿಯನ್ನೇ ಹೊಂದುವನು.
ಶ್ಲೋಕ - ೨೪ ಶ್ರೀಹರಿ ಸರ್ವೋತ್ತಮತ್ತಮತ್ವಾ ದಿಗಳ ಬಗೆ ಪ್ರಮಾಣ ಸಂಕಲನ (೨/೫)
’ಆಭಾಸ ಏವ’ ಪೃಥಗೀಶತ ಏಷ ಜೀವೋ ಮುಕ್ತಸ್ಯ ನಾಸ್ತಿ ಜಗತೋ ವಿಷಯೇ ತು ಶಕ್ತಿಃ |
ಮಾತ್ರಾ ಪರೋ॓ಸಿ ನ ತು ತೇ॓ಶ್ನುವತೇ ಮಹಿತ್ವಂ ಷಾಡ್ಗುಣ್ಯವಿಗ್ರಹಸು ಪೂರ್‍ಣಗುಣೈಕದೇಹ್ ಅ ||೧.೨೪||
ಅನುವಾದ
’ಜೀವನು ಪರಮಾತ್ಮನ ಪ್ರತಿಬಿಂಬನು’, ’ಅವನಿಗಿಂತ ಭಿನ್ನನು’, ’ಮುಕ್ತಜೀವನಿಗೆ ಜಗನ್ನಿರ್ಮಾಣಾದಿ ಸಾಮರ್ಥ್ಯವಿರುವದಿಲ್ ಲ’; ’ಪರಮಾತ್ಮನೇ ನೀನು ದೇಶಕಾಲಗಳಿಗೆ ಅತೀತನಾದವನು’; ’ಈಜೀವರೆಂದೂ ನಿನ್ನ ಮಹಿಮೆಯನ್ನು ಹೊಂದಲಾರರು’; ’ಐಶ್ವರ್ಯಾದಿ ಷಡ್ಗುಣಮಯದೇಹನೇ! ಪರಿಪೂರ್ಣಗುಣಗಳನ್ ನೇ ಶರೀರವನ್ನಾಗಿ ಹೊಂದಿರುವವನೇ!’
ಶ್ಲೋಕ - ೨೫ ಶ್ರೀಹರಿ ಸರ್ವೋತ್ತಮತ್ತಮತ್ವಾ ದಿಗಳ ಬಗೆ ಪ್ರಮಾಣ ಸಂಕಲನ (೩/೫)
ಮಾಹಾತ್ಮ್ಯದೇಹ ಸೃತಿಮುಕ್ತಿಗತೇ ಶಿವಶ್ಚ ಬ್ರಹ್ಮಾ ಚ ತದ್ಗುಣಗತೌ ನ ಕಥಂಚನೇಶೌ |
ನ ಶ್ರೀಃ ಕುತಸ್ತದಪರೇsಸ್ಯ ಸುಖಸ್ಯ ಮಾತ್ರಾಮಶ್ನಂತಿ ಮುಕ್ತಸುಗಣಾಶ್ಚ ಶತಾವರೇಣ ||೧.೨೫||
ಅನುವಾದ
"ಮಹಾಮಾಯುಕ್ತವಾದ ಶರೀರವುಳ್ಳವನೇ"! "ಸಂಸಾರ ಮತ್ತು ಮೋಕ್ಷ ಈ ಎರಡಕ್ಕೂ ಸ್ವಾಮಿಯೇ", "ರಮಾದೇವಿಯಾಗಲಿ, ಬ್ರಹ್ಮನಾಗಲೀ, ರುದ್ರನಾಗಲೀ ಅವನ ಗುಣಗಳನ್ನು ಪೂರ್ಣವಾಗಿ ಅರಿಯುವಲ್ಲಿ ಯಾವ ರೀತಿಯಲ್ಲೂ ಸಮರ್ಥರಲ್ಲ ಉಳಿದವರ ಪಾಡೇನು?" ಮುಕ್ತರ ಗುಂಪುಗಳು ಸಹ ಈ ಪರಮಾತ್ಮನ ಆನಂದಲೇಶವನ್ನೇ ಶತಗುಣಹೀನ ಕ್ರಮದಲ್ಲಿ ಅನುಭವಿಸುವವು.
ಶ್ಲೋಕ - ೨೬ ಶ್ರೀಹರಿ ಸರ್ವೋತ್ತಮತ್ತಮತ್ವಾ ದಿಗಳ ಬಗೆ ಪ್ರಮಾಣ ಸಂಕಲನ (೪/೫)
ಆಭಾಸಕಾಭಾಸಪರ್ ಆವಭಾಸ ರೂಪಾಣ್ಯಜಸ್ರಾಣಿ ಚ ಚೇತನಾನಾಮ್ |
ವಿಷ್ಣೋಃಸದೈವಾತಿವ ಶಾತ್ ಕದಾ॓ಪಿ ಗಚ್ಛಂತಿ ಕೇಶಾದಿಗಣಾ ನ ಮುಕ್ತೌ ||೧.೨೬||
ಅನುವಾದ
ವಿಷ್ಣುವಿಗೆ ಮುಖ್ಯಪ್ರತಿಬಿಂಬರಾದ್ ಅ ಶ್ರೀವಾಯುದೇವರು, ಅವರಿಗೆ ಪ್ರತಿಬಿಂಬರಾದ ಶ್ರೀರುದ್ರದೇವರು ಮತ್ತು ಅವರಿಗೆ ಪ್ರತಿಬಿಂಬರಾದ ಇಂದ್ರದೇವರು ಮತ್ತು ಅವರಿಗೆ ಪ್ರತಿಬಿಂಬರಾದ ಪ್ರಾಣ, ದಕ್ಷ ಮೊದಲಾದವರು ಇವೇ ಮೊದಲಾದ ಚೇತನರ ರೂಪಗಳು ನಿತ್ಯವಾಗಿವೆ; ಬ್ರಹ್ಮ ರುದ್ರ ಮೊದಲಾದ ಜೀವರ ಸಮೂಹಗಳು ಮುಕ್ತಿಯಲ್ಲೂ ಸದಾ ವಿಷ್ಣುವಿಗೆ ಅತ್ಯಂತ ವಶವಾಗಿರುವದರಿಂ ದ ಅವರೆಲ್ಲಾ ಎಂದೂ ಅವನನ್ನು ಅತಿಕ್ರಮಿಸಿ ಹೋಗಲಾರರು.
ಶ್ಲೋಕ - ೨೭ ಶ್ರೀಹರಿ ಸರ್ವೋತ್ತಮತ್ತಮತ್ವಾ ದಿಗಳ ಬಗೆ ಪ್ರಮಾಣ ಸಂಕಲನ (೫/೫)
ಯಸ್ಮಿನ್ ಪರೇ॓ನ್ಯೇ॓ಪ್ಯಜಜೀವ ಕೋಶಾ ನಾಹಂ ಪರಾಯುರ್ನ ಮರೀಚಿಮುಖ್ಯಾಃ |
ಜಾನಂತಿ ಯದ್ಗುಣಗಣಾನ್ ನ ರಮಾದಯೋ॓ಪಿ ನಿತ್ಯಃ ಸ್ವತಂತ್ರ ಉತ ಕೋsಸ್ತಿ ತದನ್ಯ ಈಶಃ ||೧.೨೭||
ಅನುವಾದ
ಆ ಸರ್ವೋತ್ತಮನಾದ ಶ್ರೀಹರಿಯಲ್ಲಿ ಇತರ ಅನಂತಬ್ರಹ್ಮಾಂಡಗಳ್ ಊ ನೆಲೆಸಿವೆ; ಅವನ ಗುಣರಾಶಿಗಳನ್ನು ನಾನಾಗಲೀ, ಬ್ರಹ್ಮನಾಗಲೀ, ಮರೀಚಿ ಮೊದಲಾದ ಮಹರ್ಷಿಗಳಾಗಲೀ ಎಂದೂ ಸಾಕಲ್ಯೇನ ತಿಳಿಯಲಾರೆವು; ಮಹಾಲಕ್ಷ್ಮಿ ಮೊದಲಾದವರು ಅರಿತಿಲ್ಲ. ಅವನ ಹೊರತು ನಿತ್ಯನೂ, ಸ್ವತಂತ್ರನೂ, ಸರ್ವಸಮರ್ಥನೂ ಆದವನು ಬೇರೆ ಯಾವನಿರುವನು?
ಶ್ಲೋಕ - ೨೮ ಜೀವೇಶ್ವರಭೇದ ಐದು ಕಾರಣದಿಂದಾದುದು
ನೈವೈಕ ಏವ ಪುರುಷಃ ಪುರುಷೋತ್ತಮೋ॓ ಸಾವೇಕಃ ಕುತಃ ಸ ಪುರುಷೋ ಯತ ಏವ ಜಾತ್ಯಾ |
ಅರ್ಥಾಚ್ಛ್ರು ತೇಶ್ಚ ಗುಣತೋ ನಿಜರೂಪತಶ್ಚನಿತ್ಯಾನ್ಯ ಏವ ಕಥಮಸ್ಮಿಸ ಇತ್ಯಪಿ ಸ್ಯಾತ್ ||೧.೨೮||
ಅನುವಾದ
ಚೇತನನು ಒಬ್ಬನೇ ಅಲ್ಲ; ಅನೇಕ ಚೇತನರಿರುವರು; ಶ್ರೀಹರಿಯೇ ಪುರುಷೋತ್ತಮ; ಅವನು ಈ ಜೀವರೊಂದಿಗೆ ಹೇಗೆ ಅಭಿನ್ನನಾದಾನು? ಅವನು ಈಶ್ವರಜಾತಿಗೆ ಸೇರಿದವನು, ಆಪ್ತಕಾಮ; ’ದ್ವಾಸುಪರ್ಣಾ’ ಇತ್ಯಾದಿ ಶ್ರುತಿಗಳಿಂದಲೂ ಭಿನ್ನನೆಂದೇ ಹೇಳಲ್ಪಟ್ಟವನು, ಅನಂತಗುಣಪೂರ್ಣ ಮತ್ತು ಸರ್ವತ್ರವ್ಯಾಪ್ತಸ್ವರ್ ಊಪನು ಈ ಕಾರಣಗಳಿಂದಾಗಿ ಸದಾ ಸಕಲಜೀವರಿಂದಲೂ ಭಿನ್ನನಾಗಿರುವನು; ಅಂತಹ ಭಗವಂತನೇ ನಾನಾಗಿರುವೆನು ಎಂದು ಹೇಳುವದು ಹೇಗೆ ಯುಕ್ತವಾದೀತು?
ಶ್ಲೋಕ - ೨೯ ಹರಿಸರ್ವೋತ್ತಮತ್ವಾದ್ ಇ ಪ್ರಮೇಯದ ಉಪಸಂಹಾರ
ಸರ್ವೋತ್ತಮೋ ಹರಿರಿದಂ ತು ತದಾಜ್ಞಯೈವ ಚೇತುಂ ಕ್ಷಮಂ ಸ ತು ಹರಿಃ ಪರಮಃ ಸ್ವತಂತ್ರಃ |
ಪೂರ್ಣಾವ್ಯಯಾಗಣಿತ ನಿತ್ಯಗುಣಾರ್ಣವೋsಸಾ-ವಿತ್ಯೇವ ವೇದವಚನಾನಿ ಪರೋಕ್ತಯಶ್ಚ ||೧.೨೯||
ಅನುವಾದ
ಶ್ರೀ ಹರಿಯು ಸರ್ವೋತ್ತಮ; ಈ ಸಕಲ ಜಗತ್ತು ಅವನ ಅಜ್ಞೆಯಿಂದಲೇ ಜ್ಞಾನವನ್ನು ಪಡೆಯಲು ಸಮರ್ಥವಾಗಿದೆ, ಅವನಾದರೋ ಸರ್ವಶ್ರೇಷ್ಠನೂ, ಸ್ವತಂತ್ರನೂ, ಪೂರ್ಣವೂ, ಹ್ರಾಸರಹಿತವೂ, ಅನಂತವೂ, ನಿತ್ಯವೂ ಆದ ಗುಣಗಳಿಂದ ಸಾಗರ; ಈ ರೀತಿಯಾಗಿ ವೇದವಚನಗಳೂ, ಭಗವದುಕ್ತಿಗಳೂ ಸಾರುತ್ತಿವೆ.
ಶ್ಲೋಕ - ೩೦
ಋಗಾದಯಶ್ಚ ಚತ್ವಾರಃ ಪಂಚರಾತ್ರಂ ಚ ಭಾರತಮ್ |
ಮೂಲರಾಮಾಯಣಂ ಬ್ರಹ್ಮಸೂತ್ರಂ ಮಾನಂ ಸ್ವತಃ ಸ್ಮೃತಮ್ ||೧.೩೦||
ಶ್ಲೋಕ - ೩೧
ಅವಿರುದ್ಧಂ ತು ಯತ್ ತ್ವಸ್ಯ ಪ್ರಮಾಣಂ ತಚ್ಚ ನಾನ್ಯಥಾ |
ಏತದ್ವಿರುದ್ಧಂ ಯತ್ ತು ಸ್ಯಾನ್ನ ತನ್ಮಾನಂ ಕಥಂಚನ ||೧.೩೧||
ಅನುವಾದ
ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ ಎಂಬ ನಾಲ್ಕು, ಪಂಚರಾತ್ರ, ಮಹಾಭಾರತ, ಮೂಲರಾಮಾಯಣ ಮತ್ತು ಬ್ರಹ್ಮಸೂತ್ರ ಇವು ಸ್ವತಃ ಪ್ರಮಾಣವಾದ ಗ್ರಂಥಗಳು. ಇವಕ್ಕೆ ವಿರುದ್ಧವಾಗಿಲ್ಲದ ಅನುಕೂಲವಾದ ಸಕಲಗ್ರಂಥಗಳೂ ಪ್ರಮಾಣವೇ ಆಗಿವೆ; ಇವುಗಳಿಗೆ ವಿರುದ್ಧವಾದದ್ದು ಮಾತ್ರ ಯಾವರೀತಿಯಲ್ಲೂ ಪ್ರಮಾಣವಲ್ಲ.ವೈಷ್ಣವ ಪುರಾಣಗಳೂ, ಮನ್ವಾದಿ ಸ್ಮೃತಿಗಳೂ ಪ್ರಮಾಣವೇ
ಶ್ಲೋಕ - ೩೨
ವೈಷ್ಣವಾನಿ ಪುರಾಣಾನಿ ಪಂಚರಾತ್ರಾತ್ಮಕತ್ ವತಃ |
ಪ್ರಮಾಣಾನ್ಯೇವ ಮನ್ವಾದ್ಯಾಃ ಸ್ಮೃತಯೋsಪ್ಯನುಕೂಲತಃ ||೧.೩೨||
ಶ್ಲೋಕ - ೩೩
ಏತೇಷು ವಿಷ್ಣೋರಾಧಿಕ್ಯಮುಚ್ ಯತೇsನ್ಯಸ್ಯ ನ ಕ್ವಚಿತ್ |
ಅತಸ್ತದೇವ ಮಂತವ್ಯಂ ನಾನ್ಯಥಾ ತು ಕಥಂಚನ ||೧.೩೩||
ಅನುವಾದ
ಪಂಚರಾತ್ರೋಕ್ತ ವಿಷಯಗಳನ್ನೇ ಪ್ರತಿಪಾದಿಸುವ ಕಾರಣದಿಂದಾಗಿ ವೈಷ್ಣವ ಪುರಾಣಗಳು ಪ್ರಮಾಣಗಳೇ ಆಗಿವೆ. ಅದರಂತೆ, ವೇದಾದಿ ಸ್ವತಃಪ್ರಮಾಣಗ್ರಂತ್ ಹಗಳಿಗೆ ಅನುಕೂಲವಾಗಿರುವದರ್ ಇಂದ ಮನುಸ್ಮೃತಿ ಮೊದಲಾದ ಸ್ಮೃತಿಗಳು ಸಹ ಪ್ರಮಾಣಗಳೇ ಆಗಿವೆ. ಈ ಎಲ್ಲಾ ಗ್ರಂಥಗಳಲ್ಲೂ ವಿಷ್ಣುವಿನ ಸರ್ವೋತ್ತಮತ್ತ್ವವೇ ಪ್ರತಿಪಾದಿತವಾಗಿದೆ ; ಬೇರೆಯವುಗಳಿಗೆ ಅಂತಹ ಉತ್ತಮತ್ತ್ವವು ಎಲ್ಲೂ ಉಕ್ತವಾಗಿಲ್ಲ; ಆದ್ದರಿಂದ ವಿಷ್ಣುಸರ್ವೋತ್ತಮತ್ತ್ವ್ ಅವನ್ನೇ ತತ್ತ್ವವೆಂದು ತಿಳಿಯಬೇಕು; ಬೇರೆ ರೀತಿಯಲ್ಲಿ ಸರ್ವಥಾ ತಿಳಿಯಕೂಡದು.
ಶ್ಲೋಕ - ೩೪ ಇತರ ಶಾಸ್ತ್ರಗಳು ಮೋಹಕ
ಮೋಹಾರ್ಥನ್ಯನ್ಯಶಸ್ ತ್ರಾಣಿ ಕೃತಾನ್ಯೇವಾಜ್~ ಝಯಾ ಹರೇಃ |
ಅತಸ್ತೇಷೂಕ್ತಮಗ್ರಾ ಹ್ಯಮಸುರಾಣಾಂ ತಮೋಗತೇಃ ||೧.೩೪||
ಶ್ಲೋಕ - ೩೫
ಯಸ್ಮಾತ್ ಕೃತಾನಿ ತಾನೀಹ ವಿಷ್ಣುನೋಕ್ತೈಃ ಶಿವಾದಿಭಿಃ |
ಏಷಾಂ ಯನ್ನ ವಿರೋಧಿ ಸ್ಯಾತ್ ತತ್ರೋಕ್ತಂ ತನ್ನ ವಾರ್ಯತೇ ||೧.೩೫||
ಅನುವಾದ
ಮೋಹಕವಾದ ಪಾಶುಪತಾದಿ ಇತರ ಶಾಸ್ತ್ರಗಳು ಸಹ ಅಸುರರ ತಮಃಪ್ರಾಪಿಗೋಸ್ಕರ ಶ್ರೀಹರಿಯ ಆಜ್ಞೆಯಿಂದಲೇ ರಚಿತವಾಗಿವೆ; ಆದ್ದರಿಂದ ಅವುಗಳಲ್ಲಿ ಉಕ್ತವಾದದ್ದು ಅಗ್ರಾಹ್ಯ; ಅವು ವಿಷ್ಣುವಿನಿಂದ ಆಜ್ಞಪ್ತರಾದ ರುದ್ರಾದಿಗಳಿಂದ ಪ್ರಣೀತವಾದ್ದರಿಂದ , ಅವುಗಳಲ್ಲಿ ಬಂದಿರುವ ವೇದಾದಿ ಸಚ್ಛಾಸ್ತ್ರಗಳಿಗೆ ವಿರೋಧವಾಗದ ವಿಚಾರ ಏನಿದ್ದರೂ ಗ್ರಾಹ್ಯವೇ ಸರಿ ಎಂದು ಭಾವ.
ಶ್ಲೋಕ - ೩೬ ವೇದವಾಕ್ಯಗಳಿಗೂ ವಿಷ್ಣುಪರತ್ವವೇ ತಾತ್ಪರ್ಯ
ವಿಷ್ಣ್ವಾಧಿಕ್ಯವಿರೋದ್ ಹೀನಿ ಯಾನಿ ವೇದವಚಾಂಸ್ಯಪಿ |
ತಾನಿ ಯೋಜ್ಯಾನ್ಯಾನುಕೂಲ್ಯಾದ್ ವಿಷ್ಣ್ವಾಧಿಕ್ಯಸ್ಯ್ ಅ ಸರ್ವಶಃ ||೧.೩೬||
ಅನುವಾದ
ವಿಷ್ಣುಸರ್ವೋತ್ತಮತ್ವ ಕ್ಕೆ ವಿರೋಧಿಯಂತೆ ತೋರುವ ವೇದವಾಕ್ಯಗಳನ್ನು ಸಹ ಸರ್ವಪ್ರಕಾರದಿಂದಲ್ ಊ ವಿಷ್ಣುಸರ್ವೋತ್ತಮತ್ವ ಕ್ಕೆ ಅನುಕೂಲವಾಗುವಂತೆಯ್ ಏ ಯೋಜಿಸಿಕೊಳ್ಳಬೇಕು.
ಶ್ಲೋಕ - ೩೭ ಅವತಾರಗಳಲ್ಲಿ ಮೋಹಕಕಾರ್ಯ
ಅವತಾರೇಷು ಯತ್ಕಿಂಚಿದ್ದರ್ಶಯೇನ್ ನರವದ್ಧರಿಃ |
ತಚ್ಚಾಸುರಾಣಾಂ ಮೋಹಾಯ ದೋಷಾ ವಿಷ್ಣೋರ್ನ ಹಿ ಕ್ವಚಿತ್ ||೧.೩೭||
ಅನುವಾದ
ತನ್ನ ಅವತಾರಗಳಲ್ಲಿ ಶ್ರೀಹರಿಯು ಮನುಷ್ಯನಂತೆ ಕೆಲವೊಮ್ಮೆ ತನ್ನನ್ನು ತೋರಿಸಿಕೊಳ್ಳುವದುಂಟು. ಅದೆಲ್ಲ ಅಸುರ ಜನರಿಗೆ ಭ್ರಾಂತಿಯನ್ನುಂಟು ಮಾಡಲಿಕ್ಕೋಸ್ಕರವೇ ಆಗಿದೆ; ವಿಷ್ಣುವಿಗೆ ದೋಷಗಳು ಎಲ್ಲು ಇಲ್ಲವಷ್ಟೇ !
ಶ್ಲೋಕ - ೩೮ ಬಗೆಬಗೆಯ ಮೋಹಕ ಕಾರ್ಯಗಳು
ಅಜ್ಞತ್ವಂ ಪಾರವಶ್ಯಂ ವಾ ವೇಧಭೇದಾದಿಕಂ ತಥಾ |
ತಥಾ ಪ್ರಾಕೃತದೇಹತ್ವಂ ದೇಹತ್ಯಾಗಾದಿಕಂ ತಥಾ ||೧.೩೮||
ಶ್ಲೋಕ - ೩೯
ಅನೀಶತ್ವಂ ಚ ದುಃಖಿತ್ವಂ ಸಾಮ್ಯಮನ್ಯೈಶ್ಚಹೀ ನತಾಮ್ |
ಪ್ರದರ್ಶಯತಿ ಮೋಹಾಯ ದೈತ್ಯಾದೀನಾಂ ಹರಿಃ ಸ್ವಯಮ್ ||೧.೩೯||
ಅನುವಾದ
ಅಜ್ಞಾನ, ಪಾರತಂತ್ರ್ಯ, ವೇಧ, ಭೇದ ಇವುಗಳನ್ನು ಪ್ರಾಕೃತದೇಹ ಹೊಂದುವದು. ದೇಹತ್ಯಾಗ ಮೊದಲಾದವುಗಳನ್ನು ಅಸಾಮರ್ಥ್ಯ, ದುಃಖಿತ್ವ, ಇತರರೊಂದಿಗೆ ಸಾಮ್ಯ, ಹೀನತ್ವ ಇಂತವುಗಳನ್ನು ದೈತ್ಯಾದಿಗಳ ಮೋಹನಕ್ಕೆಂದು ಶ್ರೀಹರಿಯು ತಾನಾಗಿಯೇ ತೋರಿಸುವನು.
ಶ್ಲೋಕ - ೪೦ ಶ್ರೀಹರಿಯು ಸಕಲದೋಷದೂರ
ನ ತಸ್ಯ ಕಶ್ಚಿದ್ದೋsಸ್ತಿ ಪೂರ್ಣಾಖಿಲಗುಣೋ ಹ್ಯಸೌ |
ಸರ್ವದೇಹಸ್ಥರೂಪೇಶ್ ಹು ಪ್ರಾದುರ್ಭಾವೇಷು ಚೇಶ್ವರಃ ||೧.೪೦||
ಅನುವಾದ
ಶ್ರೀಹರಿಗೆ ಯಾವುದೇ ದೋಷವೂ ಇಲ್ಲ; ಅವನು ಸಕಲದೇಹಗತವಾದ ರೂಪಗಳಲ್ಲೂ ಮತ್ತು ಪ್ರಾದುರ್ಭಾವಗಳಲ್ಲ್ ಊ ಪರಿಪೂರ್ಣವಾದ ಸಕಲಗುಣಗಳನ್ನು ಹೊಂದಿರುವವನು.
ಶ್ಲೋಕ - ೪೧ ಶಾಸ್ತ್ರದ ಮಹಾತಾತ್ಪರ್ಯ
ಬ್ರಹ್ಮಾದ್ಯಭೇದಃ ಸಾಮ್ಯಂ ವಾ ಕುತಸ್ತಸ್ಯ ಮಹಾತ್ಮನಃ |
ಯದೇವಂ ವಾಚಕಂ ಶಾಸ್ತ್ರಂ ತದ್ಧಿ ಶಾಸ್ತ್ರಂ ಪರಂ ಮತಮ್ ||೧.೪೧||
ಅನುವಾದ
ಆ ಮಹಾಮಹಿಮನಾದ ಭಗವಂತನಿಗೆ ಬ್ರಹ್ಮಾದಿಗಳೊಂದಿಗೆ ಐಕ್ಯವಾಗಲೀ, ಸಾಮ್ಯವಾಗಲೀ ಎಲ್ಲಿಯದು? ಹೀಗೆ ಹೇಳುವ ಶಾಸ್ತ್ರವೇ ಉತ್ತಮವಾದ ಶಾಸ್ತ್ರವೆಂದು (ಬಲ್ಲವರ) ಅಭಿಮತ.
ಶ್ಲೋಕ - ೪೨ ಬ್ರಹ್ಮಸೂತ್ರಗಳು ನಿರ್ಣಾಯಕ
ನಿರ್ಣಯಾಯೈವ ಯತ್ ಪ್ರೋಕ್ತಂ ಬ್ರಹ್ಮಸೂತ್ರಂ ತು ವಿಷ್ಣುನಾ |
ವ್ಯಾಸರೂಪೇಣ ತದ್ಗ್ರಾಹ್ಯಂ ತತ್ರೋಕ್ತಾಃ ಸರ್ವನಿರ್ಣಯಾಃ ||೧.೪೨||
ಅನುವಾದ
ವೇದವ್ಯಾಸರೂಪದ ವಿಷ್ಣುವಿನಿಂದ ಸಕಲ ಶಾಸ್ತ್ರಗಳ ನಿರ್ಣಯಕ್ಕೆಂದೇ ರಚಿತವಾದ ಬ್ರಹ್ಮಸೂತ್ರವು ಸರ್ವರೀತಿಯಲ್ಲೂ ಗ್ರಾಹ್ಯವಾದ ಶಾಸ್ತ್ರ; ಅದರಲ್ಲಿ ಸಕಲನಿರ್ಣಯಗಳೂ ಉಕ್ತವಾಗಿವೆ.
ಶ್ಲೋಕ - ೪೩ ಬ್ರಹ್ಮಸೂತ್ರಗಳ ಹಿರಿಮೆ
ಯಥಾರ್ಥವಚನಾನಾಂ ಚ ಮೋಹಾರ್ಥಾನಾಂ ಚ ಸಂಶಯಮ್ |
ಅಪನೇತುಂ ಹಿ ಭಗವಾನ್ ಬ್ರಹ್ಮಸೂತ್ರಮಚೀಕ್ಲೃಪತ್ |
ತಸ್ಮಾತ್ ಸೂತ್ರಾರ್ಥಮಾಗೃಹ್ಯ ಕರ್ತವ್ಯಃ ಸರ್ವನಿರ್ಣಯಃ ||೧.೪೩||
ಅನುವಾದ
ಯತಾರ್ಥವಚನ ಹಾಗೂ ಮೋಹಕವಚನಗಳಿಂದ ಉಂಟಾಗುವ ಸಂಶಯವನ್ನು ಪರಿಹರಿಸಲೆಂದೇ ಭಗವಂತನು ಬ್ರಹ್ಮಸೂತ್ರವನ್ನು ರಚಿಸಿದ; ಆದ್ದರಿಂದ ಆ ಬ್ರಹ್ಮಸೂತ್ರದಲ್ಲಿ ಹೇಳಿದ ಅರ್ಥವನ್ನು ಚೆನ್ನಾಗಿ ತಿಳಿದುಕೊಂಡೇ ಇತರ ಸಕಲಶಾಸ್ತ್ರಗಳ ಅರ್ಥವನ್ನು ನಿರ್ಣಯಿಸಬೇಕು.
ಶ್ಲೋಕ - ೪೪ ಬ್ರಹ್ಮಸೂತ್ರಗಳ ಸಾರ(೧/೨)
ಸರ್ವದೋಷವಿಹೀನತ್ವ ಂ ಗುಣೈಃ ಸರ್ವೈರುದೀರ್ಣತಾ ||೧.೪೪||
ಶ್ಲೋಕ - ೪೫
ಅಭೇದಃ ಸರ್ವರೂಪೇಷು ಜೀವಭೇದಃ ಸದೈವ ಚ |
ವಿಷ್ಣೋರುಕ್ತಾನಿ ಸೂತ್ರೇಷು ಸರ್ವವೇದೇಡ್ಯತಾ ತಥಾ ||೧.೪೫||
ಶ್ಲೋಕ - ೪೬
ತಾರತಮ್ಯಂ ಚ ಮುಕ್ತಾನಾಂ ವಿಮುಕ್ತಿರ್ವಿದ್ಯಯಾ ತಥಾ |
ತಸ್ಮಾದೇತದ್ವಿರುದ್ಧ ಂ ಯನ್ಮೋಹಾರ್ಥಂ ತದುದಾಹೃತಮ್ ||೧.೪೬||
ಅನುವಾದ
ಸಕಲದೋಷರಹಿತತ್ವ್ ಅ, ಸರ್ವಗುಣಪರಿಪೂರ್ಣ ತ್ವ, ತನ್ನ ಸಕಲರೂಪಗಳಲ್ಲೂ ಅಭೇದ, ಸರ್ವದಾ ಸರ್ವಜೀವರಿಂದ ಭಿನ್ನತ್ವ, ಸರ್ವವೇದಪ್ರತಿಪಾದ ತ್ವ, ಮುಕ್ತರಲ್ಲೂ ತಾರತಮ್ಯ, ಜ್ಞಾನದಿಂದಲೇ ಮೋಕ್ಷ ಈ ಪ್ರಮೇಯಗಳು ಬ್ರಹ್ಮಸೂತ್ರಗಳಲ್ಲಿ ಹೇಳಲ್ಪಟ್ಟಿವೆ; ಆದ್ದರಿಂದ ಇವುಗಳಿಗೆ ವಿರುದ್ಧವಾದದ್ದು ಮೋಹನದ ಉದ್ದೇಶದಿಂದ ಕೂಡಿದ ಮಾತು ಎಂದು ಹೇಳಲ್ಪಟ್ಟಿದೆ.
ಶ್ಲೋಕ - ೪೭ ಬ್ರಹ್ಮಸೂತ್ರಗಳ ಸಾರ (೨/೨)
ತಸ್ಮಾದ್ಯೇ ಯೇ ಗುಣಾ ವಿಷ್ಣೋರ್ಗ್ರಾಹ್ಯಾಸ್ತೇ ಸರ್ವ ಏವ ತು |
ಇತ್ಯಾದ್ಯುಕ್ತಂ ಭಗವತಾ ಭವಿಷ್ಯತ್ಪರ್ವಣಿ ಸ್ಫುಟಮ್ ||೧.೪೭||
ಅನುವಾದ
ಆದ್ದರಿಂದ ವಿಷ್ಣುವಿನ ಗುಣಗಳು ಎಂಬುದಾಗಿ ಯಾವವು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿವೆಯೋ ಅವೆಲ್ಲವೂ ಗ್ರಾಹ್ಯವೇ; ಇವೇ ಮೊದಲಾಗಿ ಭಗವಂತನಾದ ಶ್ರೀವೇದವ್ಯಾಸರಿಂದ್ ಅ ಭವಿಷ್ಯತ್ಪರ್ವದಲ್ಲ್ ಇ ಸ್ಫುಟವಾಗಿ ಉಕ್ತವಾಗಿವೆ.
ಶ್ಲೋಕ - ೪೮,೪೯,೫೦,೫೧ ಮೋಹಶಾಸ್ತ್ರದ ಬಗ್ಗೆ ವರಾಹ ಹಾಗೂ ಬ್ರಹ್ಮಾಂಡಪುರಾಣಗಳ್ ಅ ಆಧಾರ
ಏಷ ಮೋಹಂ ಸೃಜಾಮ್ಯಾಶು ಯೋ ಜನಾನ್ ಮೋಹಯಿಷ್ಯತಿ |
ತ್ವಂ ಚ ರುದ್ರ ಮಹಾಬಾಹೋ ಮೋಹಶಾಸ್ತ್ರಾಣಿ ಕಾರಯ ||೧.೪೮||
ಅತಥ್ಯಾನಿ ವಿತಥ್ಯಾನಿ ದರ್ಶಯಸ್ವ ಮಹಾಭುಜ |
ಪ್ರಕಾಶಂ ಕುರು ಚಾತ್ಮಾನಮಪ್ರಕಾಶ್ ಅಂ ಚ ಮಾಂ ಕುರು ||೧.೪೯||
ಇತಿ ವಾರಾಹವಚನಂ ಬ್ರಹ್ಮಾಂಡೋಕ್ತಂ ತಥಾ ಪರಮ್ |
ಅಮೋಹಾಯ ಗುಣಾ ವಿಷ್ಣೋರಾಕಾರಶ್ಚಿಚ್ ಛರೀರತಾ ||೧.೫೦||
ನಿರ್ದೋಷತ್ವಂ ತಾರತಮ್ಯಂ ಮುಕ್ತಾನಾಮಪಿ ಚೋಚ್ಯತೇ |
ಏತದ್ವಿರುದ್ಧಂ ಯತ್ ಸರ್ವಂ ತನ್ಮೋಹಾಯೇತಿ ನಿರ್ಣಯಃ ||೧.೫೧||
ಅನುವಾದ
"ಏಲೈ ಮಹಾಬಾಹುವಾದ ರುದ್ರನೇ! ನಾನು ಜನರನ್ನು ಮೋಹಗೊಳಿಸುವಂತಹ ಮೋಹಕಶಾಸ್ತ್ರವನ್ನು ಕೂಡಲೇ ಸೃಷ್ಟಿಸುವೆ; ನೀನು ಸಹ ಇಂತಹ ಮೋಹಕ ಶಾಸ್ತ್ರವನ್ನು ಇತರರಿಂದ ಮಾಡಿಸು ಮತ್ತು ನೀನು ಕೂಡ ಮಾಡು, ಎಲೈ ಮಹಾಭುಜನೇ! ಎಲ್ಲೂ ಇಲ್ಲದಿರುವ ವಿಷಯಗಳನ್ನು, ವಿಪರೀತ ವಿಚಾರಗಳನ್ನು ತೋರಿಸು; ನನ್ನನ್ನು ಮರೆ ಮಾಡು; ನಿನ್ನನ್ನು ಪ್ರಕಾಶಗೊಳಿಸಿಕೊ"
ಹೀಗೆ ವರಾಹಪುರಣದ ವಚನವಿದೆ; ಬ್ರಹ್ಮಾಂಡ ಪುರಾಣದಲ್ಲಿ ಉಕ್ತವಾದ ಶ್ರೇಷ್ಠವಾದ ವಚನವೂ ಹಾಗೆಯೇ ಇದೆ.
"ವಿಷ್ಣುವಿನ ಗುಣಗಳು, ಆಕಾರ, ಜ್ಞಾನಾತ್ಮಕವಾದ ಶರೀರವನ್ನು ಹೊಂದಿರುವಿಕೆ, ನಿರ್ದೋಷತ್ವ, ಮುಕ್ತರಲ್ಲಿಯ ತಾರತಮ್ಯ, ಇವುಗಳಿಗೆ ವಿರುದ್ಧವಾದ ಎಲ್ಲವೂ ಅಸುರ ಮೋಹನಕ್ಕೆಂದೇ ಎಂದು ನಿರ್ಣಯ".ಅಧ್ಯಾಯ - ೧ ಶ್ಲೋಕ - ೫೨
ಸ್ಕಾಂದ ಪುರಾಣದ ಉದಾಹರಣೆ
ಸ್ಕಾಂದೇSಪ್ಯುಕ್ತಂ ಶಿವೇನೈವ ಷಣ್ಮುಖಾಯೈವ ಸಾದರಮ್ |
ಶಿವಶಾಸ್ತ್ರೇSಪಿ ತದ್ಗ್ರಾಹ್ಯಂ ಭಗವಚ್ಛಾಸ್ತ್ರಯೋಗಿ ಯತ್ ||೧.೫೨||
ಅನುವಾದ
ಸ್ಕಾಂದಪುರಾಣದಲ್ಲೂ , ಶಿವನಿಂದಲೇ ಷಣ್ಮುಖನಿಗೆ ಆದರಪೂರ್ವಕವಾಗಿ ಹೇಳಲ್ಪಟ್ಟಿದೆ. ಸ್ಕಾಂದಪುರಾಣವು ಶೈವಪುರಾಣವಾದರ್ ಊ ಭಗವದವತಾರರಾ ದ ವೇದವ್ಯಾಸರ ಶಾಸ್ತ್ರಕ್ಕೆ ಅನುಗುಣವಾದ್ದರಿಂದ ಅದು ಗ್ರಾಹ್ಯವಾಗಿದೆ.
ಮೋಹಕವಿಚಾರಗಳು
ಶ್ಲೋಕ - ೫೩,೫೪,೫೫
ಪರಮೋ ವಿಷ್ಣುರೇವೈಕಃ ತಜ್ಞಾನಂ ಮೋಕ್ಷಸಾಧನಮ್ |
ಶಾಸ್ತ್ರಾಣಾಂ ನಿರ್ಣಯಸ್ತ್ವೇಷಸ್ತದ ನ್ಯನ್ಮೋಹನಾಯ ಹಿ ||೧.೫೩||
ಜ್ಞಾನಂ ವಿನಾ ತು ಯಾ ಮುಕ್ತಿಃ ಸಾಮ್ಯಂ ಚ ಮಮ ವಿಷ್ಣುನಾ |
ತೀರ್ಥಾದಿಮಾತ್ರತೋ ಜ್ಞಾನಂ ಮಮಾಧಿಕ್ಯಂ ಚ ವಿಷ್ಣುತಃ ||೧.೫೪||
ಅಭೇದಶ್ಚಸ್ಮದಾದೀನಾಂ ಮುಕ್ತಾನಾಂ ಹರಿಣಾ ತಥಾ |
ಇತ್ಯಾದಿ ಸರ್ವಂ ಮೋಹಾಯ ಕಥ್ಯತೇ ಪುತ್ರ ನಾನ್ಯಥಾ ||೧.೫೫||
ಅನುವಾದ
"ವಿಷ್ಣು ಒಬ್ಬನೇ ಸರ್ವೋತ್ತಮ; ಅವನ ಜ್ಞಾನವೇ ಮುಕ್ತಿಗೆ ಸಾಧನ; ಇದು ಸಕಲ ಶಾಸ್ತ್ರಗಳ ನಿರ್ಣಯ; ಇದಕ್ಕೆ ಅನುಗುಣವಾಗಿಲ್ಲದ್ದೆಲ್ಲ ಮೋಹಕ್ಕೆಂದೆ ಹೇಳಲ್ಪಟ್ಟಿದೆ; ಜ್ಞಾನವಿಲ್ಲದೆ ಮುಕ್ತಿ, ನನಗೂ ವಿಷ್ಣುವಿಗೂ ಸಾಮ್ಯ, ತೀರ್ಥಯಾತ್ರೆ ಮೊದಲಾದವುಗಳಿಂದಲೇ ಅಪರೋಕ್ಷ ಜ್ಞಾನ; ವಿಷ್ಣುವಿನಿಗಿಂತಲೂ ನನ್ನದೇ ಆಧಿಕ್ಯ, ನಮ್ಮೆಲ್ಲರ ಅಭೇದ ಮತ್ತು ಮುಕ್ತಿಯಲ್ಲಿ ಹರಿಯೊಂದಿಗೆ ಐಕ್ಯ ಇವೆಲ್ಲವೂ, ಎಲೈ ಪುತ್ರನೇ ಮೋಹನಕ್ಕೆಂದು ಹೇಳಲ್ಪಟ್ಟ ವಿಷಯಗಳು; ಬೇರೆ ಉದ್ದೇಶದಿಂದಲ್ಲ"
ಶ್ರೀಮದಾನಂದತೀರ್ಥ ಭಗವತ್ಪಾದ ಪ್ರಣೀತ ಮಹಾಭಾರತತಾತ್ಪ ರ್ಯನಿರ್ಣಯಃ
ಶ್ಲೋಕ - ೫೬ ಪದ್ಮಪುರಾಣದ ಉಲ್ಲೇಖ - ವಿಷ್ಣುಕೃತ ಶಿವಪೂಜೆಯ ರಹಸ್ಯ
ಉಕ್ತಂ ಪದ್ಮಪುರಾಣೇ ಚ ಶೈವ ಏವ ಶಿವೇನ ತು |
ಯದುಕ್ತಂ ಹರಿಣಾ ಪೂರ್ವಮುಮಾಯೈ ಪ್ರಾಹ ತದ್ಧರಃ ||೧.೫೬||
ಅನುವಾದ
ಪದ್ಮಪುರಾಣದ ಶೈವಭಾಗದಲ್ಲೇ, ಶಿವನಿಂದಲೇ ಹೇಳಲ್ಪಟ್ಟಿದೆ. ಹಿಂದೆ ಶ್ರೀಹರಿಯು ತನಗೇ ತಿಳಿಸಿದ್ದನ್ನೇ ಅವರು ಉಮಾದೇವಿಗೆ ಹೀಗೆಂದು ತಿಳಿಸಿದರು.
ಶ್ಲೋಕ - ೫೭ ಶಿವನಿಗೆ ವಿಷ್ಣು ನೀಡಿದ ವರ
ತ್ವಾಮಾರಾಧ್ಯ ತಥಾ ಶಂಭೋ ಗ್ರಹೀಷ್ಯಾಮಿ ವರಂ ಸದಾ |
ದ್ವಾಪರಾದೌ ಯುಗೇ ಭೂತ್ವಾಕಲಯಾ ಮಾನುಷಾದಿಷು ||೧.೫೭||
ಶ್ಲೋಕ - ೫೮
ಸ್ವಾಗಮೈಃ ಕಲ್ಪಿತೈಸ್ತ್ವಂ ಚ ಜನಾನ್ ಮದ್ವಿಮುಖಾನ್ ಕುರು |
ಮಾಂ ಚ ಗೋಪಯ ಯೇನ ಸ್ಯಾತ್ ಸೃಷ್ಟಿರೇಷೋತ್ತರಾದ್ ಹರಾ ||೧.೫೮||
ಅನುವಾದ
"ಎಲೈ ಶಂಭುವೇ! ಕೃತ, ತ್ರೇತಾ ಮತ್ತು ದ್ವಾಪರ ಎಂಬ ಯುಗಗಳಲ್ಲಿ ಮನುಷ್ಯರೇ ಮೊದಲಾದವರಲ್ಲಿ ಒಂದಂಶದಿಂದ ಅವತರಿಸಿ ನಾನು ನಿನ್ನನ್ನು ಸದಾ ಆಧರಿಸಿ ವರವನ್ನು ಸ್ವೀಕರಿಸುವೆ; ಕಲ್ಪಿತವಾದ ನಿನ್ನ ಶಾಸ್ತ್ರಗಳಿಂದ ಜನರನ್ನು ನನಗೆ ವಿಮುಖರನ್ನಾಗಿ ಮಾಡು; ಇದರಿಂದ ಕೃತಾದಿಯುಗಗಳಲ್ಲಿ ಉತ್ತಮಮಾರ್ಗವನ್ನು ಅವಲಂಬಿಸಿದ ದೈತ್ಯರು ಅಧಮ ಮಾರ್ಗಾವಲಂಬಿಗಳಾ ಗಿ ನಾಶಹೊಂದುವರು.
ಶ್ಲೋಕ - ೫೯ ವೈಷ್ಣವ ಶಾಸ್ತ್ರಗಳಲ್ಲಿ ಇತರರ ಸರ್ವೋತ್ತಮತ್ವ ಬಂದಿಲ್ಲ
ನ ಚ ವೈಷ್ಣವಶಾಸ್ತ್ರೇಷ್ ಉ ವೇದೇಷ್ವಪಿ ಹರೇಃ ಪರಃ |
ಕ್ವಚಿದುಕ್ತೋsನ್ಯಶಾಸ್ತ್ರೇಷು ಪರಮೋ ವಿಷ್ಣುರೀರಿತಃ ||೧.೫೯||
ಅನುವಾದ
ಆದರೆ ವೈಷ್ಣವಶಾಸ್ತ್ರಗ ಳಲ್ಲಾಗಲೀ, ವೇದಗಳಲ್ಲಾಗಲೀ, ಶ್ರೀಹರಿಗಿಂತ ಮತ್ತೊಬ್ಬ ಪರನು ಎಲ್ಲೂ ಉಕ್ತವಾಗಿಲ್ಲ; ಆದರೆ ಇತರ ಶಾಸ್ತ್ರಗಳಲ್ಲಿ ಸಹ ಕೆಲವೆಡೆ ವಿಷ್ಣುವೇ ಸರ್ವೋತ್ತಮನೆಂದು ಹೇಳಲ್ಪಟ್ಟಿದೆ.
ಶ್ಲೋಕ - ೬೧ ಶ್ರೀಹರಿಸರ್ವೋತ್ತಮತ್ವ ಸಾರುವ ವೇದವಾಕ್ಯಗಳು (೧/೭)
ಅಸ್ಯ ದೇವಸ್ಯ ಮೀಳ್ಹುಷೋ ವಯಾ ವಿಷ್ಣೋರೇಷಸ್ಯ ಪ್ರಭೃಥೇ ಹವಿರ್ಭಿಃ |
ವಿದೇ ಹಿ ರುದ್ರೋ ರುದ್ರಿಯಂ ಮಹಿತ್ವಂ ಯಾಸಿಷ್ಟಂ ವರ್ತಿರಶ್ವಿನಾವಿರಾ ವತ್ ||೧.೬೧||
ಅನುವಾದ
ಭಕ್ತರು ಅಪೇಕ್ಷಿಸುವ ಸಕಲಪುರುಷಾರ್ಥಗಅಳನ್ನು ನೀಡುವ, ಸರ್ವಾತ್ಮನಾ ಅಪ್ರತಿಹತವಾದ ಸಂಕಲ್ಪವುಳ್ಳ; ಕ್ರೀಡಾದಿಗುಣವಿಶಿಶ್ ಹ್ಟನಾದ; ಸಕಲಜಗತ್ತಿನಿಂದ ಭಿನ್ನನಾದ್ದರಿಂದಾಗ್ ಇ ಆಕಾರವಾಚ್ಯನಾಗಿ ರುವ; ವಿಷ್ಣುವಿಗೆ ಯಜ್ಞಾರ್ಹವಾದ ಹವಿಸ್ಸುಗಳಿಂದ; ಸಂಪೂರ್ಣಪೂಜೆಯನ್ನು ಸಲ್ಲಿಸಿದ್ದರಿಂದಾಗಿ (ಅಹಂಕಾರರೂಪದಿಂದ) ಬಂಧಕರಾದ ರುದ್ರದೇವರು; ರುದ್ರಸಂಬಂಧಿಯಾದ ಮಹಿಮೆಯನ್ನು ಪಡೆದರಲ್ಲವೆ; (ಆದ್ದರಿಂದ) ಎಲೈ ಅಶ್ವಿನೀದೇವತೆಗಳೇ ನೀವಿಬ್ಬರೂ ಸಹ ವಿಷ್ಣುವಿಗೆ ಸಂಪೂರ್ಣಪೂಜೆಯನ್ನು ಸಲ್ಲಿಸಿದ್ದರಿಂದಲೇ (ಯಜ್ಞಾಹುತಿರೂಪ) ಅನ್ನವನ್ನು ಹೊಂದಿರುವ (ಪದವಿ)ಯನ್ನು ಪಡೆದಿರುವಿರಿ.
ಶ್ಲೋಕ - ೬೨ ಶ್ರೀಹರಿಸರ್ವೋತ್ತಮ ತ್ವ ಸಾರುವ ವೇದವಾಕ್ಯಗಳು (೨/೭)
"ಸ್ತುಹಿ ಶ್ರುತಂ ಗರ್ತಸದಂ ಯುವಾನಂ ಮೃಗನ್ನ ಭೀಮಮುಪಹಂತುಮುಗ್ರ್ ಅಮ್" |
"ಯಂ ಕಾಮಯೇ ತಂ ತಮುಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್ ||೧.೬೨||
ಅನುವಾದ
"(ಎಲೈ ರುದ್ರನೇ) ಗರ್ತಸದಂ-( ಹೃದಯ) ಗುಹೆಯಲ್ಲಿ ನೆಲೆಸಿರುವ, ನಿತ್ಯ ತರುಣನಾದ, ಸಿಂಹದಂತೆ ಭಯಂಕರವಾದ ಶತ್ರುಗಳ ಬಳಿಗೆ ಹೋಗಿ ಸಂಹರಿಸುವ ಸ್ವಭಾವವುಳ್ಳ, ಶತ್ರುಭಯಂಕರನಾ ದ, ಶ್ರುತಿಪ್ರತಿಪಾದ್ಯನ ಅದ, ನರಸಿಂಹನನ್ನು ಸ್ತುತಿಸು";
"ನಾನು ಯಾರನ್ನು ರುದ್ರನನ್ನು ಮಾಡಲು ಬಯಸುವೆನೋ ಅವನನ್ನು ರುದ್ರನನ್ನಾಗಿಸುವೆನು ; ಯಾರನ್ನು ಬ್ರಹ್ಮನನ್ನಾಗಿ, ಋಷಿಯನ್ನಾಗಿ, ಉತ್ತಮಮೇಧಾವಿಯನ್ನು ಮಾಡಬಯಸುವೆನೋ, ಅವನನ್ನು ಬ್ರಹ್ಮನನ್ನಾಗಿ, ಋಷಿಯನ್ನಾಗಿ, ಉತ್ತಮಮೇಧಾವಿಯನ್ನ ಅಗಿ ಮಾಡುವೆನು"
ಶ್ಲೋಕ - ೬೩ ಶ್ರೀಹರಿಸರ್ವೋತ್ತಮ ತ್ವ ಸಾರುವ ವೇದವಾಕ್ಯಗಳು (೩/೭)
ಏಕೋ ನಾರಾಯಣ ಆಸೀನ್ನ ಬ್ರಹ್ಮಾ ನ ಚ ಶಂಕರಃ |
ವಾಸುದೇವೋ ವಾ ಇದಮಗ್ರ ಆಸೀನ್ನ ಬ್ರಹ್ಮಾ ನ ಚ ಶಂಕರಃ ||೧.೬೩||
ಅನುವಾದ
ಪ್ರಳಯಕಾಲದಲ್ಲಿ ನಾರಾಯಣನೊಬ್ಬನೇ ಇದ್ದನು; ಚತುರ್ಮುಖ ಬ್ರಹ್ಮನಾಗಲೀ, ಶಿವನಾಗಲೀ ಇರಲಿಲ್ಲ; ವಾಸುದೇವನೊಬ್ಬನೇ ಈ ಸೃಷ್ಟಿಯ ಮೊದಲಲ್ಲಿ ಇದ್ದವನು; ಬ್ರಹ್ಮನಾಗಲೀ, ಶಿವನಾಗಲೀ ಅಲ್ಲ.
ಶ್ಲೋಕ - ೬೪
ಶ್ರೀಹರಿಸರ್ವೋತ್ತಮ ತ್ವ ಸಾರುವ ವೇದವಾಕ್ಯಗಳು (೪/೭)
ಯದಾ ಪಶ್ಯಃ ಪಶ್ಯತೇ ರುಗ್ಮವರ್ಣಂ
ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಮ್ |
ತದಾ ವಿದ್ವಾನ್ ಪುಣ್ಯಪಾಪೇ ವಿಧೂಯ
ನಿರಂಜನಃ ಪರಮಂ ಸಾಮ್ಯಮುಪೈತಿ ||೧.೬೪||
ಅನುವಾದ
ಯಾವಾಗ ಜೀವನು ಹಿರಣ್ಯವರ್ಣನಾದ ಜಗತ್ಕರ್ತೃವಾದ ಸರ್ವೇಶ್ವರನಾದ, ಪೂರ್ಣಷಡ್ಗುಣನಾದ ಚತುರ್ಮುಖಬ್ರಹ್ಮನ ಉತ್ಪತ್ತಿಗೆ ಕಾರಣನಾದ, ಬ್ರಹ್ಮಾದಿದೇವತೆಗಳಿ ಗಿಂತಲೂ ಉತ್ತಮಳಾದ ಮಹಾಲಕ್ಷ್ಮಿಯನ್ನು ತನ್ನ ಪತ್ನಿಯಾಗಿ ಹೊಂದಿರುವ ನಾರಾಯಣನನ್ನು ಕಣ್ಣಾರೆ ಕಾಣುವನೋ ಆಗಲೇ ಅವಿದ್ಯೆಯಿಂದ ರಹಿತನಾಗಿ ಪುಣ್ಯಪಾಪಗಳನ್ನು ತೊರೆದು ನಿರ್ದುಃಖತ್ವ ನಿತ್ಯಾನಂದತ್ವ ನಿರಂಜನತ್ವ ನಿಃಸಂಸಾರತ್ವಾದಿರೊ ಒಪಸಾಮ್ಯವನ್ನು ಹೊಂದುವನು.
ಅಧ್ಯಾಯ - ೧ ಶ್ಲೋಕ - ೬೫
ಶ್ರೀಹರಿಸರ್ವೋತ್ತಮ ತ್ವ ಸಾರುವ ವೇದವಾಕ್ಯಗಳು (೫/೭)
ಯೋ ವೇದ ನಿಹಿತಂ ಗುಹಾಯಾಂ ಪರಮೇ ವ್ಯೋಮನ್ |
ಸೋsಶ್ನುತೇ ಸರ್ವಾನ್ ಕಾಮಾನ್ ಸಹ ಬ್ರಹ್ಮಣಾ ವಿಪಶ್ಚಿತಾ ||೧.೬೫||
ಅನುವಾದ
ಯಾವನು ಹೃದಯಗುಹೆಯಲ್ಲಿನ ಹೃತ್ಪದ್ಮಾಕಾಶದಲ್ ಲಿ ನೆಲೆಸಿರುವ ನಾರಯಣನನ್ನು ಅರಿಯುವನೋ, ಅವನು ಮೋಕ್ಷಾನಂತರದಲ್ಲಿ ಸರ್ವಜ್ಞ್ನನಾದ ಆ ಪರಬ್ರಹ್ಮನೊಂದಿಗೆ ಸ್ವಯೋಗ್ಯವಾದ ಸರ್ವವಿಷಯಗಳನ್ನು ಭುಂಜಿಸುವನು.
ಅಧ್ಯಾಯ - ೧ ಶ್ಲೋಕ - ೬೬
ಶ್ರೀಹರಿಸರ್ವೋತ್ತಮ ತ್ವ ಸಾರುವ ವೇದವಾಕ್ಯಗಳು (೬/೭)
"ಪ್ರ ಘಾ ನ್ವಸ್ಯ ಮಹತೋ ಮಹಾನಿ
ಸತ್ಯಾಸತ್ಯಸ್ಯ ಕರಣಾನಿ ವೋಚಮ್"|
"ಸತ್ಯಮೇನಮನು ವಿಷ್ವೇ ಮದಂತಿ
ರಾತಿಂ ದೇವಸ್ಯ ಗೃಣತೋ ಮಘೋನಃ" ||೧.೬೬||
ಅನುವಾದ
ಪಾರಮಾರ್ಥಿಕಸತ್ಯ ನೂ, ಸರ್ವೋತ್ತಮನೂ, ಆದ ಶ್ರೀಹರಿಯ ಶ್ರೇಷ್ಠವಾದ ಜಗತ್ಸೃಷ್ಟೃತ್ವ ಪಾಲಕತ್ವ ಮೊದಲಾದ ಕರ್ಮಗಳನ್ನು ನಾನು ಸತ್ಯವಾದವುಗಳು ಎಂಬುದಾಗಿಯೇ ಹೇಳಿರುವೆನು, ತನ್ನನ್ನು ಸ್ತುತಿಸುವ ಇಂದ್ರನಿಗೆ ಬಲಿಯನ್ನು ಸೋಲಿಸಿ ಮೂರು ಲೋಕಗಳನ್ನು ನೀಡುವ ಅವನ ಕಾರ್ಯವನ್ನು ಸಕಲದೇವತೆಗಳೂ, ಪಾರಮಾರ್ಥಿಕ ಸತ್ಯವೆಂಬುದಾಗಿಯೇ ತಿಳಿದು ಹರ್ಷಪಡುವರು.
ಅಧ್ಯಾಯ - ೧ ಶ್ಲೋಕ - ೬೭
ಶ್ರೀಹರಿಸರ್ವೋತ್ತಮ ತ್ವ ಸಾರುವ ವೇದವಾಕ್ಯಗಳು (೭/೭)
"ಯಚ್ಚಿಕೇತ ಸತ್ಯಮಿತ್ತನ್ನ ಮೋಘಂ
ವಸುಸ್ಪಾರ್ಹಮುತ ಜೇತೋತ ದಾತಾ" |
"ಸತ್ಯಃ ಸೋ ಅಸ್ಯ ಮಹಿಮಾ
ಗೃಣೇ ಶವೋ ಯಜ್ಞೇಷು ವಿಪ್ರರಾಜ್ಯೇ" ||೧.೬೭||
ಅನುವಾದ
ಅಭಿಲಷಿತವಾದ ಮೂರು ಲೋಕಗಳೇ ಮೊದಲಾದ ವಸ್ತುಗಳನ್ನು ಬಲಿಯಿಂದ ಗೆದ್ದವನೂ, ಅದನ್ನು ಇಂದ್ರನಿಗೆ ಇತ್ತವನೂ, ಆದ ಆ ಭಗವಂತನು ಏನನ್ನು ಮಾಡಿರುವನೋ ಅದೆಲ್ಲಾ ಸತ್ಯವೇ ಆಗಿದೆ; ಎಂದೂ ವ್ಯರ್ಥವಲ್ಲ; ವಿಪ್ರಪ್ರಧಾನವಾದ ಯಜ್ಞಗಳಲ್ಲಿ ಸುಖವನ್ನು ಉದ್ದೇಶಿಸಿ ಅವನ ಮಹಿಮೆಯನ್ನು ನಾನು ಸ್ತುತಿಸುವೆ. ಅವನ ಮಹಿಮೆ ಸತ್ಯವಾದುದು.
ಅಧ್ಯಾಯ - ೧ (ಶ್ಲೋಕ ೬೮)
ಪಂಚಭೇದಗಳ ನಿರೂಪಣೆ
ಸತ್ಯಾ ವಿಷ್ಣೋರ್ಗುಣಾಸ್ಸರ್ವೇ ಸತ್ಯಾ ಜೀವೇಶಯೋರ್ಭಿದಾ|
ಸತ್ಯೋ ಮಿಥೋ ಜೀವಭೇದಃ ಸತ್ಯಂ ಚ ಜಗದೀದೃಶಮ್ ||೬೮||
ಅನುವಾದ
ವಿಷ್ಣುವಿನ ಸಕಲ ಗುಣಗಳು ಸತ್ಯ; ಜೀವೇಶ್ವರರ ಭೇದವು ಸತ್ಯ; ಜೀವಜೀವರ ಪರಸ್ಪರ ಭೇದವೂ ಸತ್ಯ; ಈ ತೆರನಾದ ಜಗತ್ತು ಸಹ ಸತ್ಯ.
ಅಧ್ಯಾಯ - ೧ ಶ್ಲೋಕ ೬೯
ವಿಷ್ಣುವಿನ ಸ್ವಗತಭೇದವಿವರ್ಜಿತ್ ಅತ್ವ
ಅಸತ್ಯಃ ಸ್ವಗತೋ ಭೇದೋ ವಿಷ್ಣೋರ್ನಾನ್ಯದಸತ್ಯ್ ಅಕಮ್ |
ಜಗತ್ಪ್ರವಾಹಃ ಸತ್ಯೋsಯಂ ಪಂಚಭೇದಸಮನ್ವಿತಃ ||೬೯||
ಅನುವಾದ
ವಿಷ್ಣುವಿನಲ್ಲಿರುವ ಸಕಲಭೇದಗಳೂ ಅಸತ್ಯ; ಇತರ ಯಾವುದೂ ಅಸತ್ಯವಲ್ಲ; ಪಂಚಭೇದಗಳಿಂದ ಯುಕ್ತವಾದ ಈ ಜಗತ್ಪ್ರವಾಹವು ಸತ್ಯವೇ ಆಗಿದೆ.
ಅಧ್ಯಾಯ - ೧ (ಶ್ಲೋಕ ೭೦ ಹಾಗೂ ೭೧)
ಪಂಚಭೇದಗಳು
ಜೀವೇಶಯೋರ್ಭಿದಾ ಚೈವ ಜೀವಭೇದಃ ಪರಸ್ಪರಮ್ |
ಜಡೇಶಯೋರ್ಜಡಾನಾಂ ಚ ಜಡಜೀವಭಿದಾ ತಥಾ ||೭೦||
ಪಂಚಭೇದಾ ಇಮೇ ನಿತ್ಯಾಃ ಸರ್ವಾವಸ್ಥಾಸು ಸರ್ವಶಃ |
ಮುಕ್ತಾನಾಂ ಚ ನ ಹೀಯಂತೇ ತಾರತಮ್ಯಂ ಚ ಸರ್ವದಾ ||೭೧||
ಅನುವಾದ
ಜೀವೇಶ್ವರಭೇದ, ಜೀವಜೀವಭೇದ, ಜಡೇಶ್ವರಭೇದ, ಜಡಜಡಭೇದ ಮತ್ತು ಜಡಜೀವಭೇದ ಎಂಬ ಈ ಪಂಚಭೇದಗಳು ನಿತ್ಯವಾಗಿವೆ. ಸಕಲಾವಸ್ಥೆಗಳಲ್ಲ್ ಊ ಸಕಲರೀತಿಯಲ್ಲೂ ಇವು ಸತ್ಯ; ಮುಕ್ತರಾದ ಮೇಲೂ ಸಹ ತಾರತಮ್ಯವು ಎಂದೂ ಇಲ್ಲವಾಗುವದಿಲ್ಲ.
ಅಧ್ಯಾಯ - ೧ (ಶ್ಲೋಕ ೭೨)
ದೇವತಾತಾರತಮ್ಯ
ಕ್ಷಿತಿಪಾ ಮನುಷ್ಯಗಂಧರ್ವಾ ದೇವಾಶ್ಚಪಿತರಶ್ಚಿ ರಾಃ |
ಆಜಾನಜಾಃ ಕರ್ಮಜಾಶ್ಚ ದೇವಾ ಇಂದ್ರಃ ಪುರಂದರಃ |
ರುದ್ರಃ ಸರಸ್ವತೀ ವಾಯುರ್ಮುಕ್ತಾಃ ಶತಗುಣೋತ್ತರಾಃ ||೭೨||
ಅನುವಾದ
’ಮನುಷ್ಯೋತ್ತಮರು, ಚಕ್ರವರ್ತಿಗಳು, ಮನುಷ್ಯಗಂಧರ್ವರು , ದೇವಗಂಧರ್ವರು, ಪಿತೃಗಳು, ಚಿರಪಿತೃಗಳು, ಆಜಾನಜದೇವತೆಗಳು , ಕರ್ಮಜದೇವತೆಗಳು, ದೇವತೆಗಳು, ದಕ್ಷ(ಬೃಹಸ್ಪತಿ) ಮತ್ತು ಇಂದ್ರ, ರುದ್ರ, ಸರಸ್ವತಿ ಮತ್ತು ವಾಯು’ ಈ ಕ್ರಮದಲ್ಲಿ ಮುಕ್ತರು ಕ್ರಮವಾಗಿ ನೂರುಗುಣಗಳಿಂದ ಅಧಿಕರಾಗಿರುವರು;
ಅಧ್ಯಾಯ - ೧ (ಶ್ಲೋಕ ೭೩ ಹಾಗೂ ೭೪)
ಬ್ರಹ್ಮ ವಾಯುಗಳು ಸಮ - ಅದರಂತೆ ಗರುಡ, ಶೇಷ, ರುದ್ರರು ಪರಸ್ಪರ ಸಮರು
ಏಕೋ ಬ್ರಹ್ಮಾ ಚ ವಾಯುಶ್ಚ ವೀಂದ್ರೋ ರುದ್ರಸಮಸ್ತಥಾ |
ಏಕೋ ರುದ್ರಸ್ತಥಾ ಶೇಷೋ ನ ಕಶ್ಚಿದ್ವಾಯುನಾ ಸಮಃ ||೭೩||
ಲಕ್ಷ್ಮೀನಾರಾಯಣರ ಹಿರಿಮೆ(೧/೩)
ಮುಕ್ತೇಷು ಶ್ರೀಸ್ತಥಾ ವಾಯೋಃ ಸಹಸ್ರಗುಣಿತಾ ಗುಣೈಃ |
ತತೋsನಂತಗುಣೋ ವಿಷ್ಣುರ್ನ ಕಶ್ಚಿತ್ ತತ್ಸಮಃ ಸದಾ ||೭೪||
ಅನುವಾದ
ಬ್ರಹ್ಮ ಮತ್ತು ವಾಯು ಒಂದೇ ಆಗಿರುವರು; ಗರುಡ ಶಿವನಿಗೆ ಸಮ; ಶಿವ ಮತ್ತು ಶೇಷರು ಒಂದೇ; ಮುಕ್ತರಲ್ಲಿ ವಾಯುವಿಗೆ ಸಮರಾದವರು ಯಾರೂ ಇಲ್ಲ; ವಾಯುವಿಗಿಂತಲೂ ಮಹಾಲಕ್ಷ್ಮಿಯು ಗುಣಗಳಲ್ಲಿ ಕೋಟಿಪಟ್ಟು ಮಿಗಿಲು; ಅವರಿಗಿಂತಲೂ ವಿಷ್ಣುವು ಅನಂತಪಟ್ಟು ಮಿಗಿಲಾದವನು. ಅವನಿಗೆ ಸಮರು ಎಂದು ಯಾರೂ ಇಲ್ಲ.
ಅಧ್ಯಾಯ - ೧ (ಶ್ಲೋಕ ೭೫)
ಲಕ್ಷ್ಮೀನಾರಾಯಣರ ಹಿರಿಮೆ(೨/೩)
ಇತ್ಯಾದಿವೇದವಾಕ್ಯಂ ವಿಷ್ಣೋರುತ್ಕರ್ಷಮೇವ ವಕ್ತ್ಯುಚ್ಚೈಃ
ತಾತ್ಪರ್ಯಂ ಮಹದತ್ರ್‍ಏತ್ಯುಕ್ತಂ ಯೋ ಮಾಮಿತಿ ಸ್ವಯಂ ತೇನ||೭೫||
ಅನುವಾದ
ಇವೇ ಮೊದಲಾದ ವೇದವಾಕ್ಯಗಳು ವಿಷ್ಣುವಿನ ಸರ್ವೋತ್ತಮತ್ವವನ್ನೇ ಸ್ಫುಟವಾಗಿ ಸಾರುತ್ತಿವೆ; ’ಇದರಲ್ಲೇ ಮಹಾತಾತ್ಪರ್ಯ’ ಎಂಬುದಾಗಿ ’ಯೋ ಮಾಮೇವಂ’ ಇತ್ಯಾದಿ ಮಾತುಗಳಿಂದ ಸ್ವತಃ ಆ ಕೃಷ್ಣರೂಪದ ಭಗವಂತನಿಂದಲೇ ತಿಳಿಸಲ್ಪಟ್ಟಿದೆ.
ಅಧ್ಯಾಯ - ೧ (ಶ್ಲೋಕ ೭೬)
ಲಕ್ಷ್ಮೀನಾರಾಯಣರ ಹಿರಿಮೆ(೩/೩)
ಭೂಮ್ನೋ ಜ್ಯಾಯಸ್ತ್ವಮಿತ್ಯುಕ್ತಂ ಸೂತ್ರೇಷು ನಿರ್ಣಯಾತ್ ತೇನ |
ತತ್ಪ್ರೀತ್ಯೈವ ಚ ಮೋಕ್ಷಃ ಪ್ರಾಪ್ಯಸ್ತೇನೈವ ನಾನ್ಯೇನ ||೭೬||
ಅನುವಾದ
ಬ್ರಹ್ಮಸೂತ್ರಾತ್ಮಕವ ಅದ ಬ್ರಹ್ಮಸೂತ್ರದಲ್ಲೂ ಸ್ವತಃ ಆ ಶ್ರೀಹರಿಯಿಂದ ’ಗುಣಗಳಲ್ಲಿ ಭೂಮಗುಣಕ್ಕೆ ಪ್ರಾಧಾನ್ಯ’ ಎಂಬುದಾಗಿ ನಿರ್ಣಯಿಸಿ ಹೇಳಲ್ಪಟ್ಟಿದೆ; ಅವನ ಪರಮ ಪ್ರೀತಿಯಿಂದಲೇ ಮೋಕ್ಷವು ಹೊಂದಲ್ಪಡಲು ಸಾಧ್ಯ, ಇತರ ಸಾಧನಗಳಿಂದಲ್ಲ.
ಅಧ್ಯಾಯ - ೧ (ಶ್ಲೋಕ ೭೭)
ಶ್ರೀಹರಿ ಪ್ರಸಾದವೇ ಮೋಚಕ
ನಾಯಮಾತ್ಮಾ ಪ್ರವಚನೇನ ಲಭ್ಯೋ
ನ ಮೇಧಯಾ ನ ಬಹುನಾ ಶ್ರುತೇನ |
ಯಮೇವೈಷ ವೃಣುತೇ ತೇನ ಲಭ್ಯ-
ಸ್ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್ ||೭೭||
ಅನುವಾದ
ಈ ಪರಮಾತ್ಮನು ವ್ಯಾಖ್ಯಾನದಿಂದಾಗಲ್ ಈ, ತೀಕ್ಷ್ಣಬುದ್ಧಿಯಿಂದ ಅಗಲೀ ಬಹುತರವಾದ ಶ್ರವಣದಿಂದಾಗಲೀ, ಲಭ್ಯನಾಗುವುದಿಲ್ಲ; ತಾನು ಯಾರಿಗೆ ಒಲಿಯುವನೊ ಅವರಿಗೆ ಲಭಿಸುವನು; ಅಂತಹವನಿಗೆ ತನ್ನ ಸ್ವಾಭಾವಿಕರೂಪವನ್ನ್ ಉ ತೋರಿಸಿಕೊಡುವನು.
ಅಧ್ಯಾಯ - (ಶ್ಲೋಕ ೭೮)
ಮೋಕ್ಷನೀಡುವವನು ವಿಷ್ಣು ಮಾತ್ರ
ವಿಷ್ಣುರ್ಹಿ ದಾತಾ ಮೋಕ್ಷಸ್ಯ ವಾಯುಶ್ಚತದನುಜ್~ ಝಯಾ |
ಮೋಕ್ಷೋ ಜ್ಞಾನಂ ಚ ಕ್ರಮಶೋ ಮುಕ್ತಿಗೋ ಭೋಗ ಏವ ಚ |
ಉತ್ತರೇಷಾಂ ಪ್ರಸಾದೇನ ನೀಚಾನಾಂ ನಾನ್ಯಥಾ ಭವೇತ್ ||೭೮||
ಅನುವಾದ
ವಿಷ್ಣುವೇ ಮೋಕ್ಷವನ್ನು ನೀಡುವವನು; ಅವನ ಅನುಜ್ಞೆಯಿಂದ ವಾಯುವೂ ಮೋಕ್ಷವನ್ನು ನೀಡುವನು; ಮೋಕ್ಷ, ಜ್ಞಾನ, ಮುಕ್ತಿಯಲ್ಲಿನ ಭೋಗ ಮತ್ತು ಭಕ್ತಿ, ವೈರಾಗ್ಯ ಇವೆಲ್ಲವೂ ಕಡಿಮೆಯವರಿಗೆ ಕ್ರಮವಾಗಿ ಅವರಿಗಿಂತ ಉತ್ತಮರಾದವರ ಅನುಗ್ರಹದಿಂದಲೇ ಲಭಿಸುವವು; ಬೇರೆರೀತಿಯಲ್ಲಲ್ಲ.
ಅಧ್ಯಾಯ - ೧ (ಶ್ಲೋಕ ೭೯ ಹಾಗೂ ೮೦)
ಮೋಕ್ಷ ಸಾಧನಗಳು
ಸರ್ವೇಷಾಂ ಚ ಹರಿರ್ನಿತ್ಯಂ ನಿಯಂತಾ ತದ್ವಶಾಃ ಪರೇ ||೭೯||
ತಾರತಮ್ಯಂ ತತೋ ಜ್ಞೇಯಂ ಸರ್ವೋಚ್ಚತ್ವಂ ಹರೇಸ್ತಥಾ |
ಏತದ್ವಿನಾ ನ ಕಸ್ಯಾಪಿ ವಿಮುಕ್ತಿಃ ಸ್ಯಾತ್ಕಥಂಚನ| |೮೦||
ಅನುವಾದ
ಶ್ರೀಹರಿಯೇ ಎಲ್ಲರಿಗೂ ನಿತ್ಯದಲ್ಲೂ ನಿಯಾಮಕ; ಇತರರೆಲ್ಲ ಅವನ ಅಧೀನರು; ದೇವತಾತಾರತಮ್ಯ ಮತ್ತು ಹರಿಯ ಸರ್ವೋತ್ತಮತ್ವಗಳನ್ನ್ ಉ ತಿಳಿಯಲೇಬೇಕು. ಇವುಗಳಿಲ್ಲದೆ ಯಾರಿಗೂ ಯಾವ ರೀತಿಯಲ್ಲೂ ಮುಕ್ತಿ ಆಗದು.
ಅಧ್ಯಾಯ - ೧ (ಶ್ಲೋಕ ೮೧)
ಪಂಚಭೇದಜ್ಞಾನದ ಅಗತ್ಯ
ಪಂಚಭೇದಾಂಶ್ಚ ವಿಜ್ಞಾಯ ವಿಶ್ಣೋಃ ಸ್ವಾಭೇದಮೇವ ಚ |
ನಿರ್ದೋಷತ್ವಂ ಗುಣೋದ್ರೇಕಂ ಜ್ಞಾತ್ವಾ ಮುಕ್ತಿರ್ನ ಚಾನ್ಯಥಾ|| ೮೧||
ಅನುವಾದ
ಪಂಚಭೇದಗಳನ್ನು ತಿಳಿದು, ವಿಷ್ಣುವಿನ ಸ್ವಗತಭೇದಾಭಾವವ್ ಅನ್ನು, ನಿರ್ದೋಷತ್ವವನ್ನು, ಗುಣಪೂರ್ಣತ್ವವನ್ನು ತಿಳಿದರೇ ಮುಕ್ತಿ; ಬೇರೆ ರೀತಿಯಲ್ಲಿ ಅಲ್ಲ.
ಅಧ್ಯಾಯ - ೧ (ಶ್ಲೋಕ ೮೨)
ಶ್ರೀಹರಿಯ ಅವತಾರಗಳ ಬಗ್ಗೆ ಸರಿಯಾದ ಪರಿಜ್ಞಾನದ ಅಗತ್ಯ
ಅವತಾರಾನ್ ಹರೇರ್ಜ್ಞಾತ್ವಾನಾವ ತಾರಾ ಹರೇಶ್ಚಯೇ |
ತದಾವೇಶಾಂಸ್ತಥಾ ಸಮ್ಯಕ್ ಜ್ಞಾತ್ವಾಮುಕ್ತಿರ್ನ ಚಾನ್ಯಥಾ ||೮೨||
ಅನುವಾದ
ಹರಿಯ ಅವತಾರಗಳನ್ನೂ, ಯಾವವು ಹರಿಯ ಅವತಾರಗಳಲ್ಲ ಎಂಬುದನ್ನೂ, ಅದರಂತೆ ಅವನ ಆವೇಶಗಳನ್ನು ಸಹ ಸರಿಯಾಗಿ ತಿಳಿದರೇ ಮೋಕ್ಷ; ಇಲ್ಲವಾದಲ್ಲಿ ಇಲ್ಲ.
ಅಧ್ಯಾಯ - ೧ (ಶ್ಲೋಕ ೮೩)
ಸೃಷ್ಟ್ಯಾದಿ ಸಕಲವೂ ಶ್ರೀಹರಿಯಿಂದಲೇ
ಸೃಷ್ಟಿರಕ್ಷಾಹೃತಿ ಜ್ಞಾನನಿಯತ್ಯಬ ಂಧನಾನ್ |
ಮೋಕ್ಷಂ ಚ ವಿಷ್ಣುತಸ್ತ್ವೇವ ಜ್ಞಾತ್ವಾ ಮುಕ್ತಿರ್ನ ಚಾನ್ಯಥಾ|| ೮೩||
ಅನುವಾದ
ಸೃಷ್ಟಿ, ಸ್ಥಿತಿ, ಸಂಹಾರ, ಜ್ಞಾನ, ನಿಯಮನ, ಅಜ್ಞಾನ, ಬಂಧನ ಮತ್ತು ಮೋಕ್ಷ ಇವುಗಳನ್ನೆಲ್ಲ ವಿಷ್ಣುವಿನಿಂದಲೇ ಎಂದು ತಿಳಿದರೆ ಮೋಕ್ಷ; ಇಲ್ಲವಾದಲ್ಲಿ ಇಲ್ಲ.
ಅಧ್ಯಾಯ - ೧ (ಶ್ಲೋಕ ೮೪)
ವೇದಾದಿ ಸಕಲ ಶಾಸ್ತ್ರಗಳ ಪರಿಜ್ಞಾನವೂ ಅಗತ್ಯ
ವೇದಾಂಶ್ಚ ಪಂಚರಾತ್ರಾಣಿ ಸೇತಿಹಾಸಪುರಾಣಕಾ ನ್ |
ಜ್ಞಾತ್ವಾ ವಿಷ್ಣುಪರಾನೇವ ಮುಚ್ಯತೇ ನಾನ್ಯಥಾ ಕ್ವಚಿತ್||೮೪||
ಅನುವಾದ
ವೇದಗಳನ್ನು ಇತಿಹಾಸಪುರಾಣಸಮೇ ತವಾದ ಪಂಚರಾತ್ರಗಳನ್ನು ’ವಿಷ್ಣುಪರ’ ಎಂದು ತಿಳಿದರೆ ಮಾತ್ರವೇ ಮುಕ್ತನಾಗಲು ಸಾಧ್ಯ; ಇಲ್ಲವಾದರೆ ಇಲ್ಲ.
ಅಧ್ಯಾಯ - ೧ (ಶ್ಲೋಕ ೮೫)
ಭಕ್ತಿಯ ಲಕ್ಷಣ
ಮಾಹಾತ್ಮ್ಯಜ್~ ಝಾನಪೂರ್ವಸ್ತು ಸುಧೃಢಃ ಸರ್ವತೋsಧಿಕಃ |
ಸ್ನೇಹೋ ಭಕ್ತಿರಿತಿ ಪ್ರೋಕ್ತಸ್ತಯಾ ಮುಕ್ತಿರ್ನ ಚಾನ್ಯಥಾ ||೮೫||
ಅನುವಾದ
ಮಾಹಾತ್ಮ್ಯಜ್~ ಝಾನಪೂರ್ವಕವೂ, ಅಚಲವೂ, ಇತರ ಸರ್ವವಿಷಯಗಳಿಗಿಂ ತ ಅಧಿಕವೂ, ಆದ ಪ್ರೇಮವೇ ಭಕ್ತಿ ಎಂದು ಕರೆಯಲ್ಪಟ್ಟಿದೆ; ಇಂತಹ ಭಕ್ತಿಯಿಂದಲೇ ಮೋಕ್ಷ; ಇತರ ಸಾಧನಗಳಿಂದಲ್ಲ.
ಅಧ್ಯಾಯ - ೧ (ಶ್ಲೋಕ ೮೬ ಹಾಗೂ ೮೭)
ಜೀವ ತ್ರೈವಿಧ್ಯದ ವಿವರ
ತ್ರಿವಿಧಾ ಜೀವಸಂಘಾಸ್ತು ದೇವಮಾನುಷದಾನವ ಅಃ |
ತತ್ರ ದೇವಾ ಮುಕ್ತಿಯೋಗ್ಯಾ ಮಾನುಷೇಷೂತ್ತಮಾಸ್ ತಥಾ ||೮೬||
ಮಧ್ಯಮಾ ಮಾನುಷಾ ಯೇ ತು ಸೃತಿಯೋಗ್ಯಾಃ ಸದೈವ ಹಿ |
ಅಧಮಾ ನಿರಯಾಯೈವ ದಾನವಾಸ್ತು ತಮೋಲಯಾಃ ||೮೭||
ಅನುವಾದ
ದೇವತೆಗಳು, ಮನುಷ್ಯರು ಮತ್ತು ದಾನವರು ಎಂಬುದಾಗಿ ಜೀವಸಮೂಹಗಳು ಮೂರು ವಿಧ; ಅವರಲ್ಲಿ ದೇವತೆಗಳು ಮತ್ತು ಮನುಷ್ಯೋತ್ತಮರು ಮುಕ್ತಿಯೋಗ್ಯರು; ಮಧ್ಯಮಮನುಷ್ಯರು ಸರ್ವದಾ ಸಂಸಾರಕ್ಕೆ ಯೋಗ್ಯರು; ಅಧಮಮನುಷ್ಯರು ತಮಸ್ಸಿಗೆ ಯೋಗ್ಯರು; ದಾನವರು ಅಂಧತಮಸ್ಸನ್ನು ಹೊಂದುವರು.
ಅಧ್ಯಾಯ - ೧ (ಶ್ಲೋಕ ೮೮ ಹಾಗೂ ೮೯)
ಜೀವ ತ್ರೈವಿಧ್ಯದ ವಿವರ
ಮುಕ್ತಿರ್ನಿತ್ಯಾ ತಮಶ್ಚೈವ ನಾವೃತ್ತಿಃ ಪುನರೇತಯೋಃ |
ದೇವಾನಾಂ ನಿರಯೋ ನಾಸ್ತಿ ತಮಶ್ಚಾಪಿ ಕಥಂಚನ ||೮೮||
ನಾಸುರಾಣಾಂ ತಥಾ ಮುಕ್ತಿಃ ಕದಾಚಿತ್ ಕೇನಚಿತ್ ಕ್ವಚಿತ್ |
ಮಾನುಷಾಣಾಂ ಮಧ್ಯಮಾನಾಂ ನ ಚೈತದ್ದ್ವಯಮಾಪ್ಯತೇ ||೮೯||
ಅನುವಾದ
ಮುಕ್ತಿಯು ನಿತ್ಯವಾದುದು ಮತ್ತು ತಮಸ್ಸು ಸಹ ನಿತ್ಯವಾದುದು; ಇವೆರಡರಿಂದ ಪುನಃ ಹಿಂದಿರುಗುವಂತಿಲ್ಲ; ದೇವತೆಗಳಿಗೆ ಎಂದೂ ಯಾವ ರೀತಿಯಲ್ಲೂ ನರಕವಾಗಲೀ, ತಮಸ್ಸಾಗಲೀ ಆಗದು; ಅದರಂತೆ ಅಸುರರಿಗೆ ಎಂದೂ ಯಾವ ಕಾರಣದಿಂದಲೂ ಎಲ್ಲೂ ಮುಕ್ತಿಯೂ ಆಗುವದಿಲ್ಲ; ಮಧ್ಯಮಮನುಷ್ಯರಿಗ್ ಎ(ನಿತ್ಯ ಸಂಸಾರಿಗಳಿಗೆ) ಇವೆರೆಡೂ ಲಭಿಸುವದಿಲ್ಲ.
ಅಧ್ಯಾಯ - ೧ (ಶ್ಲೋಕ ೯೦)
ಅಸುರರಿಗೆ ತಮಃಪ್ರಾಪ್ತಿಯ ಖಚಿತ ಲಕ್ಷಣ
ಅಸುರಾಣಾಂ ತಮಃಪ್ರಾಪ್ತಿಸ್ತದಾ ನಿಯಮತೋ ಭವೇತ್ |
ಯದಾ ತು ಜ್ಞಾನಿಸದ್ಭಾವೇ ನೈವ ಗೃಹ್ಣಂತಿ ತತ್ಪರಮ್ ||೯೦||
ಅನುವಾದ
ತಿಳಿಸಿಕೊಡಬಲ್ಲ ಜ್ಞಾನಿಗಳು ಇರುವಾಗಲೂ ಸಹ ಯಾರು ಉತ್ತಮನಾದ ನಾರಾಯಣನೆಂಬ ವಸ್ತುವನ್ನು ತಿಳಿದುಕೊಳ್ಳುವುದೇ ಇಲ್ಲವೋ, ಅಂತಹ ಅಸುರರಿಗೆ ನಿಯಮೇನ ತಮಸ್ಸು ಪ್ರಾಪ್ತವಾಗುವದು.
ಅಧ್ಯಾಯ - ೧ (ಶ್ಲೋಕ ೯೧)
ಬಿಂಬ ರೂಪದ ಉಪಾಸನೆಯಿಂದಲೇ ಅಪರೋಕ್ಷಜ್ಞಾನ
ತದಾ ಮುಕ್ತಿಶ್ಚದೇವಾನಾಂ ಯದಾ ಪ್ರತ್ಯಕ್ಷಗೋ ಹರಿಃ |
ಸ್ವಯೋಗ್ಯಯೋಪಾಸನಯ ಅ ತನ್ವಾ ತದ್ಯೋಗ್ಯಯಾ ತಥಾ ||೯೧||
ಅನುವಾದ
ತಮಗೆ ವಿಹಿತವಾದ ಉಪಾಸನೆಯಿಂದ ಅವರ ಅಪರೋಕ್ಷಜ್ಞಾನಕ್ಕೆ ವಿಹಿತವಾದ ರೂಪದಿಂದ ಯಾವಾಗ ಶ್ರೀಹರಿಯು ಪ್ರತ್ಯಕ್ಷ ಗೋಚರಿಸುವನೋ ಆಗ ದೇವತೆಗಳಿಗೆ ಮುಕ್ತಿಯು ಲಭಿಸುವದು.
ಅಧ್ಯಾಯ - ೧ (ಶ್ಲೋಕ ೯೨)
ಗುಣೋಪಾಸನೆಯಲ್ಲಿ ವೈವಿಧ್ಯ
ಸರ್ವೈರ್ಗುಣೈರ್ಬ್ರಹ್ಮ ಣಾ ತು ಸಮುಪಾಸ್ಯೋ ಹರಿಃ ಸದಾ |
ಆನಂದೋ ಜ್ಞಃ ಸದಾತ್ಮೇತಿ ಹ್ಯುಪಾಸ್ಯೋ ಮಾನುಷೈರ್ಹರಿಃ |
ಯಥಾಕ್ರಮಂ ಗುಣೋದ್ರೇಕಾತ್ ತದನ್ಯೈರಾವಿರಿಂಚತ್ ಅಃ ||೯೨||
ಅನುವಾದ
ಶ್ರೀಹರಿಯು ಸದಾಕಾಲವೂ ಬ್ರಹ್ಮದೇವರಿಂದ ಸರ್ವಗುಣಗಳಿಂದ ಉಪಾಸ್ಯನಾಗಿರುವನು; ಮನುಷ್ಯರಿಂದ ಆನಂದ, ಸರ್ವಜ್ಞ, ಸತ್ ಮತ್ತು ಆತ್ಮ ಎಂಬುದಾಗಿ ಉಪಾಸ್ಯ; ಬ್ರಹ್ಮದೇವರವರೆಗಿನ್ ಅ ಇತರ ದೇವತೆಗಳಿಂದ ಅವರವರ ಯೋಗ್ಯತಾಕ್ರಮಕ್ಕೆ ಅನುಗುಣವಾಗಿ ತಮಗೆ ವಿಹಿತವಾದ ಹೆಚ್ಚಿನ ಗುಣಗಳಿಂದ ಉಪಾಸ್ಯ.
ಅಧ್ಯಾಯ - ೧ (ಶ್ಲೋಕ ೯೩)
ಋಜುಗಳ ಲಕ್ಷಣ
ಬ್ರಹ್ಮತ್ವಯೋಗ್ಯಾ ಋಜವೋ ನಾಮ ದೇವಾಃ ಪೃಥಗ್ಗಣಾಃ |
ತೈರೇವಾಪ್ಯಂ ತತ್ಪದಂ ತು ನೈವಾನ್ಯೈಃ ಸಾಧನೈರಪಿ| |೯೩||
ಅನುವಾದ
ಋಜುಗಳೆಂಬವರು ಬ್ರಹ್ಮಪದವಿಗೆ ಯೋಗ್ಯರಾದ ಪ್ರತ್ಯೇಕಗುಂಪಿನ ದೇವತೆಗಳು; ಆ ಪದವಿ ಅವರಿಂದ ಮಾತ್ರವೇ ಪಡೆಯಲು ಸಾಧ್ಯ; ಇತರ ಜೀವರಿಗೆ ಯಾವ ಸಾಧನಗಳಿಂದಲೂ ಆ ಪದವಿ ದೊರೆಯದು.
ಅಧ್ಯಾಯ - 1 (ಶ್ಲೋಕ ೯೪ ಹಾಗೂ ೯೫)
ಪ್ರತಿಪದವಿಗೂ ಪ್ರತ್ಯೇಕ ಗಣಗಳು - ಅಯೋಗ್ಯ ಕಾಮನೆ ನಿಷಿದ್ಧ
ಏವಂ ಸರ್ವಪದಾನಾಂ ಚ ಯೋಗ್ಯಾಃ ಸಂತಿ ಪೃಥಗ್ಗಣಾಃ |
ತಸ್ಮಾದನಾದ್ಯನಂತ ಂ ಹಿ ತಾರತಮ್ಯಂ ಚಿದಾತ್ಮನಾಮ್ ||೯೪||
ತಚ್ಚ ನೈವಾನ್ಯಥಾ ಕರ್ತುಂ ಶಕ್ಯಂ ಕೇನಾಪಿ ಕುತ್ರಚಿತ್ |
ಅಯೋಗ್ಯಮಿಚ್ಛನ್ ಪುರುಷಃ ಪತತ್ಯೇವ ನ ಸಂಶಯಃ ||೯೫||
ಅನುವಾದ
ಹೀಗೆ ಸಕಲಪದವಿಗಳಿಗೂ ಸಹ ಆಯಾಪದವಿಗೆ ಅರ್ಹರಾದ ಜೀವರ ಸಮೂಹಗಳು ಪ್ರತ್ಯೇಕವಾಗಿಯೇ ಇವೆ; ಆದ್ದರಿಂದ ಜೀವರ ತಾರತಮ್ಯವು ಅನಾದಿ ಮತ್ತು ಅನಂತ; ಅದು ಯಾವನಿಂದಲೂ ಎಲ್ಲೂ ವ್ಯತ್ಯಾಸಗೊಳಿಸಲು ಅಶಕ್ಯ. ತನಗೆ ಯೋಗ್ಯವಲ್ಲದ ಪದವಿಯನ್ನು ಬಯಸುವ ಪುರುಷ ಪತನ ಹೊಂದುವನು; ಸಂಶಯವೇ ಇಲ್ಲ.
ಅಧ್ಯಾಯ - ೧ (ಶ್ಲೋಕ ೯೬)
ಉಪಾಸನೆಯ ಬಗೆ
ತಸ್ಮಾದ್ಯೋಗ್ಯಾನುಸಾರ್ ಏಣ ಸೇವ್ಯೋ ವಿಷ್ಣುಃ ಸದೈವ ಹಿ |
ಅಚ್ಛಿದ್ರಸೇವನಾಚ್ಚೈವ್ ಅ ನಿಷ್ಕಾಮತ್ವಾಚ್ಚ ಯೋಗ್ಯತಃ |
ದ್ರಷ್ಟುಂ ಶಕ್ಯೋ ಹರಿಃ ಸರ್ವೈರ್ನಾನ್ಯಥಾ ತು ಕಥಂಚನ ||೯೬||
ಅನುವಾದ
ಆದ್ದರಿಂದ ತಮ್ಮ ಯೋಗ್ಯತೆಗೆ ಅನುಸಾರವಾಗಿ ಸಕಲರೂ ಸರ್ವದಾ ವಿಷ್ಣುವನ್ನು ಸೇವಿಸಲೇಬೇಕು; ಮಧ್ಯೆ ಮಧ್ಯೆ ವಿಚ್ಛೇದವಿಲ್ಲದ ಧ್ಯಾನದಿಂದಲೂ ಯೋಗ್ಯತೆಗೆ ತಕ್ಕ ನಿಷ್ಕಾಮತ್ವದಿಂದಲೂ ಶ್ರೀಹರಿಯನ್ನು ಅವರವರ ಯೋಗ್ಯತೆಗೆ ತಕ್ಕಂತೆ ಕಾಣಲು ಸಾಧ್ಯ; ಇತರ ಯಾವ ಸಾಧನಗಳಿಂದಲೂ ಅವನ ಅಪರೋಕ್ಷಜ್ಞಾನವು ಸಾಧ್ಯವಾಗದು.
ಅಧ್ಯಾಯ - ೧ (ಶ್ಲೋಕ ೯೭)
ಉಪಾಸನೆಯ ಬಗೆ
ನಿಯಮೋಽಯಂ ಹರೇರ್ಯಸ್ಮಾನ್ನೋಲ್ಲಂಗ್ ಹ್ಯಃ ಸರ್ವಚೇತನೈಃ|
ಸತ್ಯಸಂಕಲ್ಪತೋ ವಿಷ್ಣುರ್ನಾನ್ಯಥಾ ತು ಕರಿಷ್ಯತಿ ||೯೭||
ಅನುವಾದ
ಇದು ಶ್ರೀಹರಿಯ ನಿಯಮವಾಗಿರುವದರಿ ಂದ, ಸಕಲಚೇತನರಿಂದಲೂ ಎಂದೂ ಉಲ್ಲಂಘಿಸಲ್ಪಡಲು ಶಕ್ಯವಿಲ್ಲ; ಆ ವಿಷ್ಣುವಾದರೋ ಸತ್ಯಸಂಕಲ್ಪನಾಗಿರ್ ಉವದರಿಂದ ಇದನ್ನು ಅವನು ಸಹ ಬದಲಾಯಿಸುವದಿಲ್ಲ.
ಅಧ್ಯಾಯ - ೧ (ಶ್ಲೋಕ ೯೮)
ದಾನಾದಿಗಳು ಭಕ್ತಿಗೆ ಸಾಧನಗಳು - ಭಕ್ತಿಯೇ ಮುಕ್ತಿಗೆ ಸಾಧನ
ದಾನತೀರ್ಥತಪೋಯಜ್~ ಜಪೂರ್ವಾಃ ಸರ್ವೇಽಪಿ ಸರ್ವದಾ |
ಅಂಗಾನಿಹರಿಸೇವಾಯಾ ಂ ಭಕ್ತಿಸ್ತ್ವೇಕಾ ವಿಮುಕ್ತಯೇ |
ಭವಿಷ್ಯತ್ಪರ್ವವಚ ನಮಿತ್ಯೇತದಖಿಲ ಂ ಪರಮ್||೯೮||
ಅನುವಾದ
ದಾನ, ತೀರ್ಥಯಾತ್ರೆ, ತಪಸ್ಸು, ಯಜ್ಞ ಮೊದಲಾದ ಇತರ ಸಕಲ ಸಾಧನಗಳು ಸಹ ಶ್ರೀಹರಿಯ ನಿರಂತರ ಧ್ಯಾನ, ಭಕ್ತಿಗಳಿಗೆ ಅಂಗಗಳು; ಭಕ್ತಿಯೊಂದೇ ಮುಕ್ತಿಗೆ ಪ್ರಮುಖ ಸಾಧನ; ಈವರೆಗೆ ಹೇಳಿದ ವಚನಗಳೆಲ್ಲವೂ ಭವಿಷ್ಯತ್ಪರ್ವವೆಂಬ್ ಅ ಗ್ರಂಥದ ಉತ್ತಮ ವಚನಗಳು.
ಅಧ್ಯಾಯ - ೧ (ಶ್ಲೋಕ ೯೯)
ಶ್ರುತಿ ವಾಕ್ಯಗಳ ಉಲ್ಲೇಖ
"ಶೃಣ್ವೇ ವೀರ ಉಗ್ರಮುಗ್ರಂ ದಮಾಯ-
ನ್ನನ್ಯಮನ್ಯಮತಿನೇನೀ ಯಮಾನಃ |
ಏಧಮಾನದ್ವಿಳುಭಯ ಸ್ಯ ರಾಜಾ
ಚೋಷ್ಕೂಯತೇ ವಿಶ ಇಂದ್ರೋ ಮನುಷ್ಯಾನ್" ||೯೯||
ಅನುವಾದ
ವೀರನೂ, ಪರಮೈಶ್ವರ್ಯಶಾಲಿಯೂ ಆದ ನಾರಾಯಣನು ಲೋಕೋಪದ್ರವಕಾರಕವ್ ಆದ ಕ್ರೂರಕಾರ್ಯಗಳನ್ನು ಮಾಡುವ ದೈತ್ಯಜನರನ್ನು ಕ್ರೂರವಾಗಿ ದಂಡಿಸುವವನೂ, ಕ್ರೂರವಲ್ಲದ ಸಾತ್ವಿಕಸ್ವಭಾವದ ಜೀವರನ್ನು ಸಂಸಾರವನ್ನು ದಾಟಿಸಿ, ಅತಿಶಯಿತ ಸ್ಥಾನಕ್ಕೆ ಕರೆದೂಯ್ಯುವವನೂ ಎಂಬುದಾಗಿ ಕೇಳಲ್ಪಟ್ಟಿದೆ; ಅವನು ದೇವ, ದೈತ್ಯ ರೂಪವಾದ ಈ ಎರಡು ವರ್ಗಗಳಿಗೂ ನಿಯಾಮಕನಾಗಿರುವನು; ಉಗ್ರವಾದ ತಪಸ್ಸು ಮೊದಲಾದವುಗಳ ಆಚರಣೆಯಿಂದ ತಮ್ಮ ಯೋಗ್ಯತೆಗೆ ಮೀರಿದ ಪುಣ್ಯವನ್ನು ಸಂಪಾದಿಸುವ ಜನಗಳನ್ನು ಇವನು ಮೆಚ್ಚುವದಿಲ್ಲ; ಕೃಷಿಕರಂತೆ ಕೇವಲ ತಮ್ಮ ಉದರಂಭರಣಾದಿಗಳಿಗೆ ಉಪಯುಕ್ತವಾದ ಮಧ್ಯಮಮಾರ್ಗದಲ್ಲಿ ರತರಾಗುವ ರಾಜಸಜೀವರನ್ನು ಇವನು ನಿತ್ಯಸಂಸಾರದಲ್ಲಿ ಪ್ರವರ್ತನೆ ಮಾಡಿಸುವವನು.
ಅಧ್ಯಾಯ - ೧ (ಶ್ಲೋಕ ೧೦೦)
ಶ್ರುತಿ ವಾಕ್ಯಗಳ ಉಲ್ಲೇಖ
"ಪರಾ ಪೂರ್ವೇಷಾಂ ಸಖ್ಯಾ ವೃಣಕ್ತಿ
ವಿತರ್ತುರಾಣೋ ಅಪರೇಭಿರೇತಿ |
ಅನಾನುಭೂತೀರವಧೂನ್ ವಾನಃ
ಪೂರ್ವೀರಿಂದ್ರಃ ಶರದಸ್ತರ್ತರೀತಿ" ||೧೦೦||
ಅನುವಾದ
ಪರಮೈಶ್ವರ್ಯವಂತನಾದ ಆದ ನಾರಾಯಣನು ಮೊದಲು ಹೇಳಲ್ಪಟ್ಟ ದೈತ್ಯರ ಸ್ನೇಹಭಾವಗಳನ್ನು ದೂರದಿಂದಲೇ ನಾಶಪಡಿಸುವವನು; ಮತ್ತು ವಿಶೇಷ ತ್ವರೆಮಾಡುತ್ತ ಅನಂತರ ಹೇಳಲ್ಪಟ್ಟ ದೇವತೆಗಳಿಂದ ಆರಾಧಿತನಾಗುವನು . ಭಗವದನುಭವರಹಿತರಾದ ತಾಮಸರನ್ನು ಅಧೋಲೋಕವಾದ ತಮಸ್ಸಿನಲ್ಲಿ ಬೀಳಿಸುವನು; ರಾಜಸರನ್ನು ಸಂಸಾರದಲ್ಲಿ ಸುತ್ತಿಸುವನು; ಇವನು ಹಿಂದಿನ ಸಂವತ್ಸರಗಳನ್ನು ಹೀಗೆಯೇ ಕಳೆದಿರುವನು; ಮುಂದಿನ ಸಂವತ್ಸರಗಳನ್ನು ಹೀಗೆಯೇ ಕಳೆಯುವನು(ಈಗಲೂ ಹಾಗೆಯೇ ಮಾಡುತ್ತಿರುವನು ಸಹ)
ಅಧ್ಯಾಯ - ೧ (ಶ್ಲೋಕ ೧೦೧)
ಜ್ಞಾನದಿಂದಲೇ ಮೋಕ್ಷ
"ತಮೇವಂ ವಿದ್ವಾನಮೃತ ಇಹ ಭವತಿ
ನಾನ್ಯಃ ಪಂಥಾ ಅಯನಾಯ ವಿದ್ಯತೇ" |
"ತಮೇವಂ ವಿದಿತ್ವಾಽತಿಮೃತ್ಯುಮೇತಿ
ನಾನ್ಯಃ ಪಂಥಾ ವಿದ್ಯತೇ ಅಯನಾಯ"||೧೦೧||
ಅನುವಾದ
’ಆ ಭಗವಂತನನ್ನು ಹೀಗೆ ತಿಳಿದವನು ಮಾತ್ರವೇ ಮುಕ್ತನಾಗುವನು; ಮುಕ್ತಿಗೆ ಬೇರೊಂದು ಸಾಧನ ಇಲ್ಲವೇ ಇಲ್ಲ’; ’ಅವನನ್ನು ಹೀಗೆ ತಿಳಿದೇ ಮುಕ್ತಿಯನ್ನು ಪಡೆಯುವನು; ಬೇರೊಂದು ಹಾದಿ ಮೋಕ್ಷಕ್ಕೆ ಇಲ್ಲವೇ ಇಲ್ಲ’
ಅಧ್ಯಾಯ - ೧ (ಶ್ಲೋಕ ೧೦೨)
ಹರಿಭಕ್ತಿಯಂತೆ ದೇವತಾಭಕ್ತಿ, ಗುರುಭಕ್ತಿಗಳೂ ತಾರಕ
"ಯಸ್ಯ ದೇವೇ ಪರಾ ಭಕ್ತಿರ್ಯಥಾ ದೇವೇ ತಥಾ ಗುರೌ|
ತಸ್ಮೈತೇ ಕಥಿತಾ ಹ್ಯರ್ಥಾಃ ಪ್ರಕಾಶಂತೇ ಮಹಾತ್ಮನಃ"||೧೦೨||
ಅನುವಾದ
ಯಾವನಿಗೆ ದೇವನಾದ ಶ್ರೀಹರಿಯಲ್ಲಿ ಪರಮ ಭಕ್ತಿಯೂ, ದೇವತೆಗಳಲ್ಲೂ, ಗುರುಗಳಲ್ಲೂ ತಾರತಮ್ಯಪೂರ್ವಕವಾದ ಭಕ್ತಿಯೂ ಇರುವದೋ ಅಂತಹ ಮಹಾತ್ಮನಿಗೆ ಮಾತ್ರವೇ ಶಾಸ್ತ್ರದಲ್ಲಿ ಹೇಳಲ್ಪಟ್ಟ(ಹಾಗೂ ಹೇಳಲ್ಪಡದಿರುವ) ವಿಷಯಗಳು ಸ್ಫುರಿಸುವವು.
ಅಧ್ಯಾಯ - ೧ (ಶ್ಲೋಕ ೧೦೩)
ಭಕ್ತಿಯಿಂದಲೇ ಮೋಕ್ಷ - ಮುಕ್ತಿಯಲ್ಲೂ ಭಕ್ತಿ
ಭಕ್ತ್ಯರ್ಥಾನ್ಯಖಿಲ ಅನ್ಯೇವ ಭಕ್ತಿರ್ಮೋಕ್ಷಾಯ ಕೇವಲಾ |
ಮುಕ್ತಾನಾಮಪಿ ಭಕ್ತಿರ್ಹಿ ನಿತ್ಯಾನಂದಸ್ವರೂಪಿ ಣೀ ||೧೦೩||
ಅನುವಾದ
ಇತರ ಎಲ್ಲವೂ ಭಕ್ತಿಗೋಸ್ಕರ; ಭಕ್ತಿಯು ಕೇವಲ ಮೋಕ್ಷಕ್ಕೆಂದೇ ವಿಹಿತ; ಮುಕ್ತರಿಗೂ ಸಹ ಭಕ್ತಿಯು ನಿತ್ಯಾನಂದಸ್ವರೂಪವಾಗಿ ಇದ್ದೇ ಇರುವದು.
ಅಧ್ಯಾಯ - ೧ (ಶ್ಲೋಕ ೧೦೪)
ವೇದೋಕ್ತ ಭಕ್ತಿಲಕ್ಷಣ
ಜ್ಞಾನಪೂರ್ವಃ ಪರಃ ಸ್ನೇಹೋ ನಿತ್ಯೋ ಭಕ್ತಿರಿತೀರ್ಯತೇ |
ಇತ್ಯಾದಿ ವೇದವಚನಂ ಸಾಧನಪ್ರವಿಧಾಯಕಮ್ ||೧೦೪||
ಅನುವಾದ
ಜ್ಞಾನಪೂರ್ವಕವೂ ತುಂಬಾ ಹೆಚ್ಚಿನದೂ, ಸುಧೃಢವೂ ಆದ ಸ್ನೇಹವೇ ’ಭಕ್ತಿ’ ಎನ್ನಿಸುವದು. ಇವೇ ಮೊದಲಾದ ವೇದವಚನಗಳು ಸಾಧನವನ್ನು ತಿಳಿಸಿಕೊಡುವಂತಹವು
ಅಧ್ಯಾಯ - ೧ (ಶ್ಲೋಕ ೧೦೫)
ಭಕ್ತರ ಲಕ್ಷಣ (೧/೨)
ನಿಃಶೇಷಧರ್ಮಕರ್ತ್ ಆಽಪ್ಯಭಕ್ತಸ್ತೇ ನರಕೇ ಹರೇಃ |
ಸದಾ ತಿಷ್ಠತಿ ಭಕ್ತಶ್ಚೇದ್ ಬ್ರಹ್ಮಹಾಽಪಿ ವಿಮುಚ್ಯತೇ ||೧೦೫||
ಅನುವಾದ
ಏಲೈ ಶ್ರೀಹರಿಯೆ! ನಿನ್ನಲ್ಲಿ ಭಕ್ತನಾಗದವನು ಸಕಲಧರ್ಮಗಳನ್ನು ತಪ್ಪದೆ ಆಚರಿಸಿದರೂ ಸಹ ನರಕದಲ್ಲೆ ಸದಾ ನೆಲೆಸುವನು; ಆದರೆ ನಿನ್ನ ಭಕ್ತನಾದವನು ಬ್ರಹ್ಮಹತ್ಯೆ ಮಾಡಿದರೂ ಸಹ ಮುಕ್ತನೇ ಆಗುವನು.
ಅಧ್ಯಾಯ - ೧ (ಶ್ಲೋಕ ೧೦೬)
ಭಕ್ತರ ಲಕ್ಷಣ (೨/೨)
ಧರ್ಮೋ ಭವತ್ಯಧರ್ಮೋಽಪಿ ಕೃತೋ ಭಕ್ತೈಸ್ತವಾಚ್ಯುತ |
ಪಾಪಂ ಭವತಿ ಧರ್ಮೋಽಪಿ ಯೋ ನ ಭಕ್ತೈಃ ಕೃತೋ ಹರೇ ||೧೦೬||
ಅನುವಾದ
ಅಚ್ಯುತ! ನಿನ್ನ ಭಕ್ತರಿಂದ ಮಾಡಲ್ಪಡುವ ಅಧರ್ಮವೂ ಧರ್ಮವಾಗುವದು; ಶ್ರೀಹರಿ! ನಿನ್ನ ಭಕ್ತರಲ್ಲದವರಿಂದ ಆಚರಿಸಲ್ಪಡುವ ಧರ್ಮವೂ ಸಹ ಅಧರ್ಮವಾಗುವದು.
ಅಧ್ಯಾಯ - ೧ (ಶ್ಲೋಕ ೧೦೭)
ಭಕ್ತಿಯ ಹಿರಿಮೆಗೆ ಗೀತಾವಾಕ್ಯ
ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋಽರ್ಜುನ |
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ ||೧೦೭||
ಅನುವಾದ
ಪರಂತಪ! ಅರ್ಜುನ! ಈ ತೆರನಾದ ನನ್ನನ್ನು ಅನನ್ಯಭಕ್ತಿಯಿಂದ ಮಾತ್ರವೇ ಯಥಾರ್ಥವಾಗಿ ತಿಳಿಯಲು, ಕಾಣಲು ಮತ್ತು ಪ್ರವೇಶಿಸಲು ಸಾಧ್ಯ.
ಅಧ್ಯಾಯ - ೧ (ಶ್ಲೋಕ ೧೦೮)
ದೈತ್ಯರು ಅನಾದಿ ದ್ವೇಷಿಗಳು
ಅನಾದಿದ್ವೇಷಿಣೋ ದೈತ್ಯಾ ವಿಷ್ಣೌ ದ್ವೇಷೋ ವಿವರ್ಧಿತಃ |
ತಮಸ್ಯಂಧೇ ಪಾತಯತಿ ದೈತ್ಯಾನಂತೇ ವಿನಿಶ್ಚಯಾತ್ ||೧೦೮||
ಅನುವಾದ
ದೈತ್ಯರು ಶ್ರೀಹರಿಯ ಅನಾದಿದ್ವೇಷಿಗಳು; ವಿಷ್ಣುವಿನಲ್ಲಿ ವಿಷೇಷವಾಗಿ ಹೆಚ್ಚುತ್ತಾ ಹೋಗುವ ಅಂತಹ ದ್ವೇಷವು ಕೊನೆಗೆ ಆ ದೈತ್ಯರನ್ನು ಅಂಧಂತಮಸ್ಸಿನಲ್ಲಿ ಬೀಳಿಸುವದು.
ಅಧ್ಯಾಯ - ೧ (ಶ್ಲೋಕ ೧೦೯)
ತಮಸ್ಸಿನಲ್ಲೂ ಹರಿದ್ವೇಷ
ಪೂರ್ಣದುಃಖಾತ್ಮಕೋ ದ್ವೇಷಃ ಸೋಽನಂತೋ ಹ್ಯವತಿಷ್ಠತೇ |
ಪತಿತಾನಾಂ ತಮಸ್ಯಂಧೇ ನಿಶ್ಯೇಷಸುಖವರ್ಜಿತ್ ಏ ||೧೦೯||
ಅನುವಾದ
ಸುಖರಹಿತವಾದ ಅಂಧತಮಸ್ಸಿನಲ್ಲಿ ಬಿದ್ದವರಿಗೆ ಪೂರ್ಣದುಃಖಾತ್ಮಕವ ಅದ ಶಾಶ್ವತದ್ವೇಷವು ಶ್ರೀಹರಿಯಲ್ಲಿ ಸದಾ ಇರುವದು.
ಅಧ್ಯಾಯ - ೧ (ಶ್ಲೋಕ ೧೧೦ ಹಾಗೂ ೧೧೧)
ನವವಿಧ ದ್ವೇಷಗಳು
ಜೀವಾಭೇದೋ ನಿರ್ಗುಣತ್ವಮಪೂರ್ಣಗುಣತಾ ತಥಾ |
ಸಾಮ್ಯಾಧಿಕ್ಯೇ ತದನ್ಯೇಷಾಂ ಭೇದಸ್ತದ್ಗತ ಏವ ಚ ||೧೧೦||
ಪ್ರಾದುರ್ಭಾವವಿಪರ್ಯಾಸಸ್ತದ್ಭಕ್ತದ್ವ್ ಏಷ ಏವ ಚ |
ತತ್ಪ್ರಮಾಣಸ್ಯ ನಿಂದಾ ಚ ದ್ವೇಷಾ ಏತೇಽಖಿಲಾ ಮತಾಃ ||೧೧೧||
ಅನುವಾದ
ಪರಮಾತ್ಮನಲ್ಲಿ ಜೀವಾಭೇದಜ್ಞಾನ; ನಿರ್ಗುಣತ್ವಜ್ಞಾನ, ಅಪೂರ್ಣಗುಣಯುಕ್ತತ್ವ ಜ್ಞಾನ, ಬ್ರಹ್ಮಾದಿಗಳೊಂದಿಗೆ ಸಾಮ್ಯಜ್ಞಾನ, ಬ್ರಹ್ಮಾದಿಗಳೇ ಹರಿಗಿಂತ ಅಧಿಕರು ಎಂಬ ಜ್ಞಾನ, ಶ್ರೀಹರಿಯ ರೂಪರೂಪಗಳಲ್ಲೂ ಗುಣಕ್ರಿಯಾದಿಗಳಲ್ಲೂ ಭೇದಜ್ಞಾನ, ಶ್ರೀಹರಿಯ ಅವತಾರಗಳಲ್ಲೂ ಹುಟ್ಟುಸಾವುಗಳನ್ನು ತಿಳಿಯುವ ಮಿಥ್ಯಾಜ್ಞಾನ, ವಿಷ್ಣುಭಕ್ತರ ದ್ವೇಷ; ವಿಷ್ಣುಸರ್ವೋತ್ತಮತ್ವ ಅದಿ ಪ್ರಮೇಯಗಳನ್ನು ತಿಳಿಸುವ ವೇದಾದಿಪ್ರಮಾಣಗಳ ನಿಂದನೆ, ಎಂಬ ಈ ಒಂಭತ್ತು ಸಹ ’ದ್ವೇಷಗಳು’ ಎಂದು ಜ್ಞಾನಿಗಳ ಮತ.
ಅಧ್ಯಾಯ - ೧ (ಶ್ಲೋಕ ೧೧೨ ಹಾಗೂ ೧೧೩)
ನಿರ್ಮಲ ಭಕ್ತಿಯ ಹಿರಿಮೆ
ಏತೈರ್ವಿಹೀನಾ ಯಾ ಭಕ್ತಿಃ ಸಾ ಭಕ್ತಿರಿತಿ ನಿಸ್ಚಿತಾ |
ಅನಾದಿಭಕ್ತಿರ್ದೇವಾನ್ ಆಂ ಕ್ರಮಾದ್ವೃದ್ಧಿಂ ಗತೈವ ಸಾ ||೧೧೨||
ಅಪರೋಕ್ಷದೃಶೇರ್ಹೇತ್ ಉರ್ಮುಕ್ತಿಹೇತುಶ್ಚ ಸಾ ಪುನಃ |
ಸೈವಾನಂದಸ್ವರೂಪೇಣ ನಿತ್ಯಾ ಮುಕ್ತೇಷು ತಿಷ್ಠತಿ ||೧೧೩||
ಅನುವಾದ
ಈ ನವವಿಧದ್ವೇಷಗಳಿಂದ ರಹಿತವಾದ ಭಕ್ತಿಯೇ ನಿಜವಾದ ’ಭಕ್ತಿ’ ಎಂಬುದು ನಿಶ್ಚಿತ; ದೇವತೆಗಳಿಗೆ( ಸಾತ್ವಿಕಚೇತನರಿಗೆ) ಇಂತಹ ಭಕ್ತಿಯು ಅನಾದಿಕಾಲದಿಂದಲೂ ಇರುತ್ತದೆ; ಅದು ಕ್ರಮವಾಗಿ ಹೆಚ್ಚುತ್ತಾ ಅಪರೋಕ್ಷಜ್ಞಾನಕ್ಕೂ , ಅನಂತರ ಇನ್ನೂ ಹೆಚ್ಚಿನ ಮುಕ್ತಿಗೂ ಕಾರಣವಾಗುವದು; ಮುಕ್ತರಲ್ಲಿ ಆ ಭಕ್ತಿಯು ಆನಂದರೂಪದಿಂದ ಸದಾ ಇರುವದು.
ಅಧ್ಯಾಯ - ೧ (ಶ್ಲೋಕ ೧೧೪)
ಭಕ್ತಿಯು ಸ್ವಭಾವದ ಗುಣ
ಯಥಾ ಶೌಕ್ಲ್ಯಾದಿಕಂ ರೂಪಂ ಗೋರ್ಭತ್ಯೇವ ಸರ್ವದಾ |
ಸುಖಜ್ಞಾನಾದಿಕಂ ರೂಪಮೇವಂ ಭಕ್ತೇರ್ನ ಚಾನ್ಯಥಾ ||೧೧೪||
ಅನುವಾದ
ಶುಕ್ಲತ್ವ ಮೊದಲಾದವುಗಳು ಗೋವಿಗೆ ಹೇಗೆ ಸರ್ವದಾ ಅದರ ಸ್ವರೂಪವೇ ಆಗಿವೆಯೋ ಹಾಗೆ ಸುಖ, ಜ್ಞಾನಾದಿಗಳು ಸರ್ವದಾ ಭಕ್ತಿಯ ಸ್ವರೂಪವೇ ಆಗಿವೆ; ಬೇರೆ ತೆರನಾಗಿ ಅಲ್ಲ.
ಅಧ್ಯಾಯ - ೧ (ಶ್ಲೋಕ ೧೧೫ ಹಾಗೂ ೧೧೬)
ಭಕ್ತಿಯಿಂದಲೇ ಹರಿತುಷ್ಟಿ - ಭಕ್ತಿಯಲ್ಲೂ ತಾರತಮ್ಯ
ಭಕ್ತೈವ ತುಷ್ಟಿಮಭ್ಯೇತಿ ವಿಷ್ಣುರ್ನಾನ್ಯೇನ ಕೇನಚಿತ್ |
ಸ ಏವ ಮುಕ್ತಿದಾತಾ ಚ ಭಕ್ತಿಸ್ತತ್ರೈವ ಕಾರಣಮ್ ||೧೧೫||
ಬ್ರಹ್ಮಾದೀನಾಂ ಚ ಮುಕ್ತಾನಾಂ ತಾರತಮ್ಯೇ ತು ಕಾರಣಮ್ |
ತಾರತಮ್ಯಸ್ಥಿತಾಽನಾದಿರ್ನಿತ್ಯಾ ಭಕ್ತಿರ್ನಚೇತರತ್ ||೧೧೬||
ಅನುವಾದ
ವಿಷ್ಣುವು ಪ್ರಸನ್ನವಾಗುವದು ಭಕ್ತಿಯಿಂದಲೇ ಹೊರತು ಬೇರೆ ಯಾವುದರಿಂದಲೂ ಅಲ್ಲ; ಅವನೇ ಮುಕ್ತಿದಾತನು; ಮತ್ತು ಅವನಲ್ಲಿ ಮಾಡುವ ಭಕ್ತಿಯೇ ಮುಕ್ತಿಗೆ ಮುಖ್ಯಸಾಧನ.
ಈ ಭಕ್ತಿಯು ಬ್ರಹ್ಮಾದಿಗಳ ಮತ್ತು ಮುಕ್ತರ ತಾರತಮ್ಯಕ್ಕೂ ಕಾರಣವಾಗಿದೆ; ಇದು ತಾರತಮ್ಯ ಕ್ರಮದಲ್ಲಿ ಇದ್ದು, ಅನಾದಿಯು ನಿತ್ಯವು ಆಗಿದೆ; ತಾರತಮ್ಯಕ್ಕೆ ಕಾರಣವಾದುದು ಇಂತಹ ಭಕ್ತಿಯೇ ಹೊರತು ಇತರ ಯಾವುದು ಅಲ್ಲ.
ಅಧ್ಯಾಯ - ೧ (ಶ್ಲೋಕ ೧೧೭)
ದ್ವೇಷದಲ್ಲೂ ಬಹುಬಗೆ
ಮಾನುಷೇಷ್ವಧಮಾಃ ಕಿಂಚಿದ್ ದ್ವೇಷಯುಕ್ತಾಃ ಸದಾ ಹರೌ |
ದುಃಖನಿಷ್ಠಾಸ್ತತ ಸ್ತೇಽಪಿ ನಿತ್ಯಮೇವ ನ ಸಂಶಯಃ ||೧೧೭||
ಅನುವಾದ
ಮನುಷ್ಯರಲ್ಲಿ ಅಧಮರಾದವರು ಶ್ರೀಹರಿಯಲ್ಲಿ ಸದಾ ಸ್ವಲ್ಪವಾದರು ದ್ವೇಷವನ್ನು ಹೊಂದಿಯೇ ಇರುವರು; ಆದ್ದರಿಂದ ಅವರೆಲ್ಲ ದುಃಖಿಗಳೇ ಆಗಿರುವರು; ಸಂಶಯವಿಲ್ಲ.
ಅಧ್ಯಾಯ - ೧ (ಶ್ಲೋಕ ೧೧೮ ಹಾಗೂ ೧೧೯)
ಭಕ್ತಿಯ ಪ್ರಭೇದಗಳು
ಮಧ್ಯಮಾ ಮಿಶ್ರಭೂತತ್ವಾನ್ನಿ ತ್ಯಂ ಮಿಶ್ರಫಲಾಃ ಸ್ಮೃತಾಃ |
ಕಿಂಚಿದ್ಭಾಕ್ತಿಯುತಾ ನಿತ್ಯಮುತ್ತಮಾಸ್ತೇನ ಮೋಕ್ಷಿಣಃ ||೧೧೮||
ಬ್ರಹ್ಮಣಃ ಪರಮಾ ಭಕ್ತಿಃ ಸರ್ವೇಭ್ಯಃ ಪರಮಸ್ತತಃ |
ಇತ್ಯಾದೀನಿ ಚ ವಾಕ್ಯಾನಿ ಪುರಾಣೇಷು ಪೃಥಕ್ ಪೃಥಕ್ ||೧೧೯||
ಅನುವಾದ
ಮನುಷ್ಯಮಧ್ಯಮರು (ರಾಜಸರು) ವಿಷ್ಣುಸರ್ವೋತ್ತಮತ್ವ ಅದಿ ತತ್ವಗಳಲ್ಲಿ ಸದಾ ಸಂದೇಹಯುಕ್ತರಾದ ಕಾರಣದಿಂದಾಗಿ ಅವರು ಸುಖದುಃಖಮಿಶ್ರಿತವ್ ಆದ ಫಲವನ್ನೇ ಹೊಂದುವರು; ಮುಕ್ತಿಯೋಗ್ಯರಾದ ಮನುಷ್ಯೋತ್ತಮರು (ಸಾತ್ವಿಕರು) ಮಾತ್ರವೇ ಶ್ರೀಹರಿಯಲ್ಲಿ ಸದಾ ಸ್ವಲ್ಪವಾದರೂ ಭಕ್ತಿಯನ್ನು ಹೊಂದಿರುವವರಾಗಿದ್ದು ಮೋಕ್ಷ ಹೊಂದಿರುವವರಾಗಿರುವರು. ಬ್ರಹ್ಮದೇವರ ಭಕ್ತಿಯು ಮಾತ್ರ ಇತರ ಸಕಲ ಜೀವರಿಗಿಂತಲೂ ಸದಾ ಉತ್ಕೃಷ್ಟರಾಗಿರುವದು ಇವೇ ಮೊದಲಾದ ವಾಕ್ಯಗಳು ಪುರಾಣಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಬಂದಿವೆ.
ಅಧ್ಯಾಯ - ೧ (ಶ್ಲೋಕ ೧೨೦ ಹಾಗೂ ೧೨೧)
ದ್ವಾತ್ರಿಂಶಲಕ್ಷಣ ಗಳು, ಗುರುಲಕ್ಷಣ - ಬ್ರಹ್ಮದೇವರೇ ಮುಖ್ಯಗುರು
ಷಣ್ಣವತ್ಯಂಗುಲೋ ಯಸ್ತು ನ್ಯಗ್ರೋಧಪರಿಮಂಡಲ್ ಅಃ |
ಸಪ್ತಪಾದಶ್ಚತುರ್ಹ ಸ್ತೋ ದ್ವಾತ್ರಿಂಶಲ್ಲಕ್ಷಣ್ ಐರ್ಯುತಃ ||೧೨೦||
ಅಸಂಶಯಃ ಸಂಶಯಚ್ಛಿದ್ ಗುರುರುಕ್ತೋ ಮನೀಷಿಭಿಃ |
ತಸ್ಮಾದ್ಬ್ರಹ್ಮಾ ಗುರುರ್ಮುಖ್ಯಃ ಸರ್ವೇಷಾಮೇವ ಸರ್ವದಾ |
ಅನ್ಯೇಪಿ ಸ್ವಾತ್ಮನೋ ಮುಖ್ಯಾಃ ಕ್ರಮಾದ್ಗುರವ ಈರಿತಾಃ ||೧೨೧||
ಅನುವಾದ
ತೊಂಬತ್ತಾರು ಅಂಗುಲದಷ್ಟು ಎತ್ತರವನ್ನು ನಲವತ್ತೆಂಟು ಅಂಗುಲದಷ್ಟು ಉದರದ ಸುತ್ತಳತೆಯನ್ನೂ ಏಳು ಹೆಜ್ಜೆಗಳಷ್ಟು ಎತ್ತರವನ್ನೂ ಮತ್ತು ಮೂವತ್ತೆರಡು ಲಕ್ಷಣಗಳನ್ನೂ ಹೊಂದಿರುವವನೂ, ತತ್ತ್ವದಲ್ಲಿ ಯಾವುದೇರೀತಿಯ ಸಂಶಯರಹಿತನೂ, ಜಿಜ್ಞಾಸುಗಳ ಸಂಶಯವನ್ನು ಪರಿಹರಿಸಬಲ್ಲವನೂ ಆದವನು ’ಗುರು’ ಎಂಬುದಾಗಿ ಜ್ಞಾನಿಗಳು ಹೇಳುವರು; ಆದ್ದರಿಂದ(ಇಂತಹ ಸಕಲಲಕ್ಷಣಗಳನ್ನು ಪೂರ್ಣವಾಗಿ ಹೊಂದಿರುವ) ಬ್ರಹ್ಮದೇವರೇ ಸರ್ವದಾ ಸರ್ವರಿಗೂ ಮುಖ್ಯ ’ಗುರು’ಗಳಾಗಿರುವರು. ಅದರಂತೆ ತನಗಿಂತ(ಜ್ಞಾನಭಕ್ತ್ಯಾದಿ- ಗುಣಗಳಲ್ಲಿ) ಉತ್ತಮರಾದ ಇತರರೆಲ್ಲರೂ ಸಹ ಗುರುಗಳೆಂದೇ ಕರೆಯಲ್ಪಟ್ಟಿರುವರು.
ಅಧ್ಯಾಯ - ೧ (ಶ್ಲೋಕ ೧೨೨)
ಕಲಿಯು ಸಮಗ್ರ ದುರ್ಲಕ್ಷಣೋಪೇತ
ಕ್ರಮಾಲ್ಲಕ್ಷಣಹೀನ ಅಶ್ಚ ಲಕ್ಷಣಾಲಕ್ಷಣೈಃ ಸಮಾಃ |
ಮಾನುಷಾ ಮಧ್ಯಮಾಃ ಸಮ್ಯಕ್ ದುರ್ಲಕ್ಷಣಯುತಃ ಕಲಿಃ ||೧೨೨||
ಅನುವಾದ
ಕ್ರಮವಾಗಿ ಕಡಿಮೆಲಕ್ಷಣಗಳ ನು ಹೊಂದಿರುವವರು ಸಹ ಗುರುಗಳೆನ್ನಿಸುವರು. ಆದರೆ ರಾಜಸರು(ಮನುಷ್ಯಮಧ್ಯಮರು) ಲಕ್ಷಣ ಮತ್ತು ದುರ್ಲಕ್ಷಣಗಳನ್ನು ಸಮಸಮನಾಗಿ ಹೊಂದಿರುವರು; ಕಲಿಯು ಸಲ್ಲಕ್ಷಣಗಳಲ್ಲಿ ಒಂದನ್ನೂ ಹೊಂದದೆ ಕೇವಲ ದುರ್ಲಕ್ಷಣಗಳನ್ನೇ ಹೊಂದಿರುವನು.
ಅಧ್ಯಾಯ - ೧ (ಶ್ಲೋಕ ೧೨೩ ಹಾಗೂ ೧೨೪)
ಗುರುಲಕ್ಷಣ - ಗುರುಪ್ರಸಾದದ ಮಹಿಮೆ
ಸಮ್ಯಗ್ಲಕ್ಷಣಸಂಪ ನ್ನೋ ಯದ್ದದ್ಯಾತ್ ಸುಪ್ರಸನ್ನಧೀಃ ||೧೨೩||
ಶಿಷ್ಯಾಯ ಸತ್ಯಂ ಭವತಿ ತತ್ ಸರ್ವಂ ನಾತ್ರ ಸಂಶಯಃ |
ಅಗಮ್ಯತ್ವಾದ್ಧರಿಸ್ತ ಸ್ಮಿನ್ನಾವಿಷ್ಟೋ ಮುಕ್ತಿದೋ ಭವೇತ್||೧೨೪| |
ಅನುವಾದ
ಸಲ್ಲಕ್ಷಣಭರಿತನಾದ ಗುರು ಶಿಷ್ಯನಿಗೆ ಪ್ರಸನ್ನಮನಸ್ಕನಾಗಿ ನೀಡುವದೆಲ್ಲ ಸಫಲವಾಗುವದು; ಈ ವಿಷಯದಲ್ಲಿ ಸಂದೇಹವೇ ಬೇಡ; ತಾನು ಸಾಕ್ಷಾತ್ ಅಗಮ್ಯನಾದ್ದರಿಂದ ಶ್ರೀಹರಿಯು ಗುರುವಿನಲ್ಲಿ ಅವೇಶಿಸಿ ಮುಕ್ತಿಯನ್ನು ನೀಡುವನು.
ಅಧ್ಯಾಯ - ೧ (ಶ್ಲೋಕ ೧೨೬)
ಸ್ವಾವರರಿಗೂ ಗುರುತ್ವ
ಸ್ವಾವರಣಾಂ ಗುರುತ್ವಂ ತು ಭವೇತ್ ಕಾರಣತಃ ಕ್ವಚಿತ್ |
ಮರ್ಯಾದಾರ್ಥಂ ತೇಽಪಿ ಪೂಜ್ಯಾ ನ ತು ಯದ್ವತ್ ಪರೋ ಗುರುಃ |
ಇತ್ಯೇತತ್ ಪಂಚರಾತ್ರೋಕ್ತಂ ಪುರಾಣೇಷ್ವನುಮೋದಿತ ಮ್ ||೧೨೬||
ಅನುವಾದ
ಕಾರಣಾಂತರದಿಂದಾ ಗಿ ತನಗಿಂತ ಕಡಿಮೆಯವರಿಗೂ ಒಮ್ಮೊಮ್ಮೆ ಗುರುತ್ವವು ಬರಬಹುದು. ಆಗ ಶಾಸ್ತ್ರಮರ್ಯಾದೆಗೋಸ್ಕರ ಅವರನ್ನು ಸಹ ಪೂಜಿಸಲೇಬೇಕು; ಆದರೆ ಅವರನ್ನು ಸ್ವೋತ್ತಮಗುರುಗಳಂತೆ ಪೂಜಿಸಬೇಕಿಲ್ಲ. ಇದೆಲ್ಲ ’ಪಂಚರಾತ್ರ’ದಲ್ಲಿ ಉಕ್ತವಾಗಿದೆ; ಪುರಾಣಗಳಲ್ಲಿ ಅನುಮೋದಿತವಾಗಿದೆ.
ಅಧ್ಯಾಯ - ೧ (ಶ್ಲೋಕ ೧೨೫)
ಗುರ್ವನುಗ್ರಹವಲ್ಲದ ವಿದ್ಯೆ ಫಲಿಸದು
ನಾತಿಪ್ರಸನ್ನಹೃದಯ್ ಓ ಯದ್ದದ್ಯಾದ್ ಗುರುರಪ್ಯಸೌ |
ನ ತತ್ ಸತ್ಯಂ ಭವೇತ್ ತಸ್ಮಾದರ್ಚನೀಯೋ ಗುರುಃ ಸದಾ ||೧೨೫||
ಅನುವಾದ
ಸಾಕ್ಷಾತ್ ಗುರುವೇ ಅಗಿದ್ದರೂ ಪ್ರಸನ್ನಮನಸ್ಸಿನಿಂದ ನೀಡದಿದ್ದಲ್ಲಿ ಅಂತಹ ಉಪದೇಷವು ಫಲಕಾರಿಯಾಗಲಾರದು; ಆದ್ದರಿಂದ ಗುರುಗಳನ್ನು ಸದಾ ಆರಾಧಿಸಲೇಬೇಕು.
ಅಧ್ಯಾಯ - ೧ (ಶ್ಲೋಕ ೧೨೭)
ಬಿಂಬರೂಪದ ದರ್ಶನದಿಂದ ಮುಕ್ತಿ - ಕರ್ಮಕ್ಷಯ
ಯದಾ ಮುಕ್ತಿಪ್ರದಾನಾಯ ಸ್ವಯೋಗ್ಯಂ ಪಶ್ಯತಿ ಧ್ರುವಮ್ |
ರೂಪಂ ಹರೇಸ್ತದಾ ತಸ್ಯ ಸರ್ವಪಾಪಾನಿ ಭಸ್ಮಸಾತ್ |
ಯಾಂತಿ ಪೂರ್ವಾಣ್ಯುತ್ತರಾಣಿ ನ ಶ್ಲೇಷಂ ಯಾಂತಿ ಕಾನಿಚಿತ್ ||೧೨೭||
ಅನುವಾದ
ತನಗೆ ಮುಕ್ತಿನೀಡಲು ಯೋಗ್ಯವಾದ ಹರಿಯ ರೂಪವನ್ನು ಯಾವಾಗ ಸಾಕ್ಷಾತ್ಕರಿಸಿಕೊಳ್ಳುವನೋ ಆಗ ಅವನ ಹಿಂದಿನ ಸಕಲಪಾಪಗಳು ಭಸ್ಮವಾಗುವವು; ಮುಂದಿನ ಕೆಲವು ಪಾಪಗಳು ಲೇಪವಾಗವು.
ಅಧ್ಯಾಯ - ೧ (ಶ್ಲೋಕ ೧೨೮)
ಜ್ಞಾನಿಗೆ ಮೋಕ್ಷ ನಿಶ್ಚಿತ
ಮೋಕ್ಷಶ್ಚ ನಿಯತಸ್ತಸ್ಮಾತ್ ಸ್ವಯೋಗ್ಯಹರಿದರ್ಶನೇ |
ಭವಿಷ್ಯತ್ಪವಚನಮ್ ಇತ್ಯೇತತ್ ಸೂತ್ರಗಂ ತಥಾ |
ಶ್ರುತಿಶ್ಚತತ್ಪರಾ ತದ್ವತ್ ತದ್ಯಥೇತ್ಯವದತ್ ಸ್ಪುಟಮ್ ||೧೨೮||
ಅನುವಾದ
ಆದ್ದರಿಂದ ಸ್ವಯೋಗ್ಯವಾದ ಬಿಂಬರೂಪಿ ಶ್ರೀಹರಿಯ ದರ್ಶನವಾದ ಮೇಲೆ ಮೋಕ್ಷವು ಲಭಿಸುವದು ಖಚಿತ ಎಂದು ಭವಿಷತ್ಪರ್ವವಚನ; ಈ ಪ್ರಮೇಯವು ಬ್ರಹ್ಮಸೂತ್ರದಲ್ಲೂ ಇದೆ. ’ತದ್ಯಥಾ’ ಎಂದು ಸ್ಫುಟವಾಗಿ ಹೇಳಿರುವದರಿಂದ ಶ್ರುತಿಯೂ ಸಹ ಇದನ್ನೇ ತಿಳಿಸುವದು.
ಅಧ್ಯಾಯ - ೧ (ಶ್ಲೋಕ ೧೨೯)
ಮಾರ್ಗನಿರೂಪಣೆ
ಮುಕ್ತಾಸ್ತು ಮಾನುಷಾ ದೇವಾನ್ ದೇವಾ ಇಂದ್ರಂ ಸ ಶಂಕರಮ್ |
ಸ ಬ್ರಹ್ಮಾಣಂ ಕ್ರಮೇಣೈವ ತೇನ ಯಾಂತ್ಯಖಿಲಾ ಹರಿಮ್ ||೧೨೯||
ಅನುವಾದ
ಮುಕ್ತರಾಗುವ ಮನುಷ್ಯರು ದೇವತೆಗಳನ್ನೂ, ದೇವತೆಗಳು ಇಂದ್ರನನ್ನೂ, ಇಂದ್ರನು ಗರುಡನನ್ನೂ ಹೊಂದುವರು. ಅನಂತರ ಶೇಷನು ಬ್ರಹ್ಮದೇವರನ್ನು ಹೊಂದುವನು. ಆ ಬ್ರಹ್ಮದೇವರೊಂದಿಗೆ ಕೂಡಿಕೊಂಡು ಅವರ ನೇತೃತ್ವದಲ್ಲಿ ಇವರೆಲ್ಲರೂ ಶ್ರೀಹರಿಯನ್ನು ಹೊಂದುವರು.
ಅಧ್ಯಾಯ - ೧ (ಶ್ಲೋಕ ೧೩೦)
ಮುಕ್ತಿಯಲ್ಲೂ ಆಧೀನ್ಯ
ಉತ್ತರೋತ್ತರವಶ್ಯಾಶ್ಚ ಮುಕ್ತಾ ರುದ್ರಪುರಃಸರಾಃ |
ನಿರ್ದೋಷಾ ನಿತ್ಯಸುಖಿನಃ ಪುನರಾವರ್ತಿವರ್ಜಿತ ಅಃ |
ಸ್ವೇಚ್ಛಯೈವ ರಮಂತೇsತ್ರ ನಾನಿಷ್ಟಂ ತೇಷು ಕಿಂಚನ ||೧೩೦||
ಅನುವಾದ
ಶೇಷದೇವರೇ ಮೊದಲಾದ ಮುಕ್ತರುಗಳೆಲ್ಲ ತಮಗಿಂತ ಉತ್ತಮರಾಗಿರುವವರಿಗೆ ಅಧೀನರಾಗಿರುವರು; ದೋಷರಹಿತರಾಗಿರುವರು, ಸದಾ ಸುಖಿಗಳಾಗಿರುವರು; ಅಲ್ಲಿಂದ ಅವರೆಂದೂ ಮರಳುವದೇ ಇಲ್ಲ; ಅವರು ಯಥೇಷ್ಟವಾಗಿ ಅಲ್ಲಿ ವಿಹರಿಸುವರು; ಅವರಲ್ಲಿ ಯಾವುದೇ ಅನಿಷ್ಟವೂ ಅಲ್ಲಿ ಇರುವದಿಲ್ಲ.
ಅಧ್ಯಾಯ - ೧ (ಶ್ಲೋಕ ೧೩೧)
ಅಸುರರಲ್ಲೂ ಪ್ರತ್ಯೇಕ ಗಣಗಳು
ಅಸುರಾಃ ಕಲಿಪರ್ಯಂತಾ ಏವಂ ದುಃಖೋತ್ತರೋತ್ತರಾಃ |
ಕಲಿರ್ದುಃಖಧಿಕಸ್ತೇಷು ತೇಽಪ್ಯೇವಂ ಬ್ರಹ್ಮವದ್ಗಣಾಃ |
ತಥಾಽನ್ಯೇಽಪ್ಯಸುರಾಃ ಸರ್ವೇ ಗಣಾ ಯೋಗ್ಯತಯಾ ಸದಾ ||೧೩೧||
ಅನುವಾದ
’ಕಲಿ’ಯವರೆಗಿನ ಅಸುರರು ಹೀಗೆಯೇ ಕ್ರಮವಾಗಿ ಹೆಚ್ಚು ಹೆಚ್ಚಾಗಿ ದುಃಖಿಗಳಾಗಿರುವರು; ಅವರಲ್ಲೆಲ್ಲಾ ಕಲಿಯೇ ಹೆಚ್ಚು ದುಃಖಿಯು; ಕಲಿಪದವಿಗೆ ಯೋಗ್ಯರಾದ ಜೀವರು ಸಹ ಬ್ರಹ್ಮಪದವಿಗೆ ಯೋಗ್ಯರಾದ ಜೀವರಂತೆ ಪ್ರತ್ಯೇಕ ಗಣದವರಾಗಿರುವರು ಅದರಂತೆ ಇತರ ಗಣಗಳಿಗೆ ಯೋಗ್ಯರಾದ ಅಸುರಜೀವರು ಸಹ ಪ್ರತ್ಯೇಕವಾಗಿಯೇ ಇರುವರು.
ಅಧ್ಯಾಯ - ೧ (ಶ್ಲೋಕ ೧೩೨)
ಬ್ರಹ್ಮದೇವರ ಜೀವೋತ್ತಮತ್ವ
ಬ್ರಹ್ಮೈವ ಸರ್ವಜೀವೇಭ್ಯಃ ಸದಾ ಸರ್ವಗುಣಾಧಿಕಃ |
ಮುಕ್ತೋಽಪಿ ಸರ್ವಮುಕ್ತಾನಾಮಾಧ್ ಇಪತ್ಯೇ ಸ್ಥಿತಃ ಸದಾ |
ಆಶ್ರಯಸ್ತಸ್ಯ ಭಗವಾನ್ ಸದಾ ನಾರಾಯಣಃ ಪ್ರಭುಃ ||೧೩೨||
ಅನುವಾದ
ಬ್ರಹ್ಮದೇವರು ಸರ್ವಜೀವರಿಗಿಂತಲೂ ಸದಾ ಸರ್ವಗುಣಗಳಲ್ಲೂ ಶ್ರೇಷ್ಠರಾಗಿರುವರು; ಹಾಗೆಯೇ ಮುಕ್ತಬ್ರಹ್ಮರು ಇತರ ಎಲ್ಲ ಮುಕ್ತರ ಒಡೆತನವನ್ನು ಸದಾ ಹೊಂದಿರುವರು. ಈ ಬ್ರಹ್ಮದೇವರಿಗೆ ಸದಾ ಭಗವಂತನೂ ಸರ್ವಸ್ವಾಮಿಯೂ ಆದ ನಾರಾಯಣನೇ ಸದಾ ಆಶ್ರಯ.
ಅಧ್ಯಾಯ - ೧ (ಶ್ಲೋಕ ೧೩೩, ೧೩೪ ಹಾಗೂ ೧೩೫)
ಅಧ್ಯಾಯೋಪಸಂಹಾರ, ಗ್ರಂಥಕಾರರು, ಗ್ರಂಥಮಹಿಮೆ
ಇತ್ಯೃಗ್ಯಜುಃಸಾಮಾಥ್ ಅರ್ವಪಂಚರಾತ್ರೇತ್ ಇಹಾಸತಃ |
ಪುರಾಣೇಭ್ಯಸ್ತಥಾಽನ್ಯೇಭ್ಯಃ ಶಾಸ್ತ್ರೇಭ್ಯೋ ನಿರ್ಣಯಃ ಕೃತಃ ||೧೩೩||
ವಿಷ್ಣ್ವಾಜ್ಞಯೈವ ವಿದುಷಾ ತತ್ಪ್ರಸಾದಬಲೋನ್ನತ್ ಏಃ |
ಆನಂದತೀರ್ಥಮುನಿನ್ ಆ ಪೂರ್ಣಪ್ರಜ್ಞಾಭಿಧ್ ಆಯುಜಾ ||೧೩೪||
ತಾತ್ಪರ್ಯಂ ಶಾಸ್ತ್ರಾಣಾಂ ಸರ್ವೇಷಾಮುತ್ತಮಂ ಮಯಾ ಪ್ರೋಕ್ತಮ್ |
ಪ್ರಾಪ್ಯಾನುಜ್ಞಾಂ ವಿಷ್ಣೋರೇತಜ್ಞಾತ್ವೈವ ವಿಷ್ಣುರಾಪ್ಯೋಽಸೌ ||೧೩೫||
|| ಇತಿ ಶ್ರೀಮದಾನಂದತೀರ್ಥಭಗವತ್ಪಾದ ಅಚಾರ್ಯವಿರಚಿತೇ ಮಹಾಭಾರತತಾತ್ಪರ್ಯನಿರ್ಣಯೇ ಸರ್ವಶಾಸ್ತ್ರಾರ್ಥನಿರ್ಣಯೋನಾಮ ಪ್ರಥಮೋಽಧ್ಯಾಯಃ ||
ಅನುವಾದ
’ಪೂರ್ಣಪ್ರಜ್ಞ’ ಎಂಬ ಹೆಸರಿನ ’ಆನಂದತೀರ್ಥ’ ಎಂಬ ಜ್ಞಾನಿಗಳಿಂದ ಮಹಾವಿಷ್ಣುವಿನ ಆಜ್ಞೆಯಿಂದಾಗಿ, ಅವನ ಅನುಗ್ರಹಬಲದ ಹಿರಿಮೆಯಿಂದಲೇ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ, ಪಂಚರಾತ್ರವೆಂಬ ಇತಿಹಾಸ ಇವೆಲ್ಲವುಗಳಿಂದಲೂ, ಪುರಾಣಗಳಿಂದಲೂ, ಇತರ ಶಾಸ್ತ್ರಗಳಿಂದಲೂ ಈ ತೆರನಾಗಿ ನಿರ್ಣಯವು ಮಾಡಲ್ಪಟ್ಟಿತು.
ಆ ಮಹಾವಿಶ್ಣುವಿನ ಅನುಜ್ಞೆಯನ್ನು ಪಡೆದೇ ಸಕಲಶಾಸ್ತ್ರಗಳ ಉತ್ತಮವಾದ ನಿರ್ಣಯವನ್ನು ನಾವು ತಿಳಿಸಿರುವೆವು; ಇದನ್ನು ತಿಳಿದಾಗಲೆ ಭಗವಂತನಾದ ಈ ವಿಷ್ಣುವನ್ನು ಹೊಂದಲು ಸಾಧ್ಯ.
|| ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯಪ್ರಣೀತ ಮಹಾಭಾರತತಾತ್ಪರ್ಯನಿರ್ಣಯದಲ್ಲಿ ಸರ್ವಶಾಸ್ತ್ರಾರ್ಥನಿರ್ಣಯವೆಂಬ ಮೊದಲನೆಯ ಅಧ್ಯಾಯ ಮುಗಿಯಿತು ||
||ಶ್ರೀಕೃಷ್ಣಾರ್ಪಣಮಸ್ತು||
About Me
- Madhwa Vallabha
- Hari Sarvottama Vayu Jeevottama
A very warm welcome to the blog of Madhwa Brahmins community.
We, Madhwa Brahmins are followers of Jagadguru Sriman Madhwacharya. We originally hail from places in Karnataka and the neighboring states of Maharashtra, Andhra Pradesh, Tamil Nadu and Kerala. Our main dialects are Kannada, Tulu, Marathi, Telugu and Konkani.
A brief background of Jagadguru Sri Madhwacharya:
prathamO hanumAn nAma dviteeyO bheema Eva cha |
pUrNaprajna tRuteeyastu bhagavat kAryasAdhakaH ||
As the above shloka from khila vAyustuti explains, Sri Madhwacharya (also known by the names Poornaprajna and Anandateertha) is the third incarnation of Lord MukhyaprAna Vaayu, after Lord Hanuman and Lord Bheemasena. He is the chief proponent of TattvavAda, popularly known as Dvaita. He was born on Vijayadashami day of 1238 CE at Paajaka Kshetra, a small village near Udupi. He is the 22nd commentator on the Brahma sutras of Lord Sri Veda Vyasa.
Kindly note that this blog contains important topics discussed in our Orkut community and some articles on tattvavAda philosophy. All the topics can be found in the BLOG ARCHIVE (right side)
Subscribe to:
Post Comments (Atom)
No comments:
Post a Comment