ಮಹಾಭಾರತತಾತ್ಪರ್ಯನಿರ್ಣಯಃ - ಎರಡನೆಯ ಅಧ್ಯಾಯ
Author:
Sriman Madhwacharya
Translator:
Dr. Vyasanakere Prabhanjanacharya, Sri VyasaMadhwa Samshodhana PratishThAna, Bengaluru
Courtesy:
Sri Govind Kulkarni and Sri Harish D Rao of Madhwa Yuva Parishat (MYP) Yahoo group
ಶ್ರೀಮದಾನಂದತೀರ್ಥಭಗವತ್ಪಾದ ಪ್ರಣೀತ
ಮಹಾಭಾರತತಾತ್ಪರ್ಯನಿರ್ಣಯಃ
||ಶ್ರೀಮದ್ಧನುಮದ್ಭೀಮಮಧ್ವಾಂರ್ಗತರಾಮಕೃಷ್ಣವೇದವ್ಯಾಸಾತ್ಮಕಶ್ರೀಲಕ್ಷ್ಮೀಹಯಗ್ರೀವಾಯ ನಮಃ||
ಅಧ್ಯಾಯ ೨ - ಭಾರತವಾಕ್ಯೋದ್ಧಾರಃ
ಶ್ಲೋಕ ೧ - ಮಂಗಳಾಚರಣೆ
ಜಯತಿ ಹರಿರಚಿಂತ್ಯಃ ಸರ್ವದೇವೈಕವಂದ್ಯಃ ಪರಮಗುರುರಭೀಷ್ಟ ಅವಾಪ್ತಿದಃ ಸಜ್ಜನಾನಾಮ್ |
ನಿಖಿಲಗುಣಗಣಾರ್ಣೋ ನಿತ್ಯನಿರ್ಮುಕ್ತದೋಷಃ ಸರಸಿಜನಯನೋಽಸೌ ಶ್ರೀಪತಿರ್ಮಾನದೋ ನಃ ||೧||
ಅನುವಾದ
ಚಿಂತನೆಗೆ ಎಟುಕದವನೂ, ಸಕಲ ದೇವತೆಗಳಿಂದಲೂ ಸರ್ವೋತ್ತಮತ್ವೇನ ವಂದ್ಯನೂ, ಬ್ರಹ್ಮದೇವರು ಮೊದಲಾದ ಉತ್ತಮದೇವತೆಗಳಿಗೆ ಗುರುವೂ, ಸಜ್ಜನರ ಅಭೀಷ್ಟವನ್ನು ಈಡೇರಿಸುವವನೂ, ಗುಣಗಣಗಳ ಸಾಗರನೂ, ಸದಾ ಸಕಲದೋಷದೂರನೂ, ಪುಂಡರೀಕಾಕ್ಷನೂ, ಲಕ್ಷ್ಮೀಪತಿಯೂ, ನಮ್ಮೆಲ್ಲರಿಗೂ ಜ್ಞಾನಪ್ರದನೂ ಆದ ಶ್ರೀಹರಿಯು ಸರ್ವೋತ್ಕೃಷ್ಟನಾಗಿರುವನು.
ಶ್ಲೋಕ ೨ - ಅಧ್ಯಾಯದ ವಿಷಯ
ಉಕ್ತಃ ಪೂರ್ವಾಧ್ಯಾಯೇ ಶಾಸ್ತ್ರಾಣಾಂ ನಿರ್ಣಯಃ ಪರೋ ದಿವ್ಯಃ |
ಅಥ ಭಾರತವಾಕ್ಯಾನ್ಯೇತ್ ಐರೇವಾಧ್ಯವಸ್ಯಂತೇ ||೨||
ಅನುವಾದ
ಹಿಂದಿನ ಅಧ್ಯಾಯದಲ್ಲಿ ಶಾಸ್ತ್ರಗಳ ವಿಷ್ಣುಸರ್ವೋತ್ತಮತ್ವ ಪ್ರತಿಪಾದಕವಾದ ನಿರ್ಣಯ ಹೇಳಲ್ಪಟ್ಟಿತು; ಈಗ ಮಹಾಭಾರತದ ವಾಕ್ಯಗಳು ಈ ಉತ್ತಮವಾದ ವಾಕ್ಯಗಳಿಂದಲೇ ನಿರ್ಣಯಿಸಲ್ಪಡುವವು.
ಶ್ಲೋಕ ೩ - ಗ್ರಂಥವಿಪ್ಲವಕ್ಕೆ ಕಾರಣಗಳು (೧/೨)
ಕ್ವಚಿದ್ ಗ್ರಂಥಾನ್ ಪ್ರಕ್ಷಿಪಂತಿ ಕ್ವಚಿದಂತರಿತಾನಪಿ |
ಕುರ್ಯಃ ಕ್ವಚಿಚ್ಚವ್ಯತ್ಯಾಸಂ ಪ್ರಮಾದಾತ್ ಕ್ವಚಿದನ್ಯಥಾ ||೩||
ಅನುವಾದ
ಕೆಲವೆಡೆಗಳಲ್ಲಿ ಶ್ಲೋಕಗಳನ್ನು ಸೇರಿಸುವರು; ಮತ್ತೆ ಕೆಲವೆಡೆ ಅಲ್ಲಿರುವ ತಮ್ಮ ಮತಕ್ಕೆ ಪ್ರತಿಕೂಲವಾದ ಶ್ಲೋಕಗಳನ್ನು ತೆಗೆದುಹಾಕುವರು; ಕೆಲವೆಡೆಗಳಲ್ಲಿ ಶ್ಲೋಕಗಳನ್ನು ಸ್ಥಳಪಲ್ಲಟ ಮಾಡುವರು; ಇದರೊಂದಿಗೆ ಅಜ್ಞಾನ ಅಥವಾ ಭ್ರಾಂತಿಗಳಿಂದಾಗಿ ಸಹ ಕೆಲವೊಮ್ಮೆ ಗ್ರಂಥದ ಸ್ವರೂಪ ಕೆಡುವದುಂಟು.
ಶ್ಲೋಕ ೪ - ಗ್ರಂಥವಿಪ್ಲವಕ್ಕೆ ಕಾರಣಗಳು (೨/೨)
ಅನುತ್ಸನ್ನಾ ಅಪಿ ಗ್ರಂಥಾ ವ್ಯಾಕುಲಾ ಇತಿ ಸರ್ವಶಃ |
ಉತ್ಸನ್ನಾಃ ಪ್ರಾಯಶಃ ಸರ್ವೇ ಕೋಟ್ಯಂಶೋಽಪಿ ನ ವರ್ತತೇ ||೪||
ಅನುವಾದ
ನಾಶವಾಗದೆ ಉಳಿದಿರುವ ಗ್ರಂಥಗಳು ಸಹ ಹೀಗೆ ಅಸ್ತವ್ಯಸ್ತವಾಗಿವೆ; ಗ್ರಂಥಗಳೆಲ್ಲ ನಾಶವಾಗಿರುವದೇ ಹೆಚ್ಚು; ಕೋಟಿಯ ಒಂದು ಪಾಲಿನಷ್ಟು ಗ್ರಂಥಗಳು ಸಹ ಈಗ ಉಳಿದಿಲ್ಲ.
ಶ್ಲೋಕ ೫ ಹಾಗೂ ೬ - ನಿರ್ಣಯರಚನೆಗೆ ಕಾರಣ - ರಚನೆಗೆ ಅರ್ಹತೆ (೧/೨)
ಗ್ರಂಥೋsಪ್ಯೇವಂ ವಿಲುಳಿತಃ ಕಿಮ್ವರ್ಥೋ ದೇವದುರ್ಗಮಃ |
ಕಲಾವೇವಂ ವ್ಯಾಕುಲಿತೇ ನಿರ್ಣಯಾಯ ಪ್ರಚೋದಿತಃ ||೫||
ಹರಿಣಾ ನಿರ್ಣಯಾನ್ ವಚ್ಮಿ ವಿಜಾನಂಸ್ತತ್ಪ್ರಸಾದ್ ಅತಃ |
ಶಾಸ್ತ್ರಾಂತರಾಣಿ ಸಂಜಾನನ್ ವೇದಾಂಶ್ಚಾಸ್ಯ ಪ್ರಸಾದತಃ ||೬||
ಅನುವಾದ
ಗ್ರಂಥಗಳೇ ಹೀಗೆ ಉಚ್ಚಿನ್ನವಾಗಿರುವಾಗ ಇನ್ನು ದೇವತೆಗಳಿಗೂ ಸಾಕಲ್ಯೇನ ತಿಳಿಯಲಾಗದ ಅರ್ಥಗಳ ಬಗ್ಗೆ ಹೇಳುವದೇನು? ಕಲಿಯುಗದಲ್ಲಿ ಹೀಗೆ ಗ್ರಂಥಗಳು ವ್ಯಾಕುಲಿತವಾದಾಗ ಇವುಗಳ ನಿರ್ಣಯಕ್ಕೆಂದು ಶ್ರೀಹರಿಯಿಂದ ಪ್ರೇರಿತನಾಗಿ ನಾನು ಅವನ ಅನುಗ್ರಹದಿಂದಲೇ ಎಲ್ಲವನ್ನು ಬಲ್ಲವನಾಗಿ ನಿರ್ಣಯಗಳನ್ನು ತಿಳಿಸುವೆನು. ನಾನು ಅವನ ಅನುಗ್ರಹದಿಂದಲೇ ಇತರ ಶಾಸ್ತ್ರಗಳನ್ನೂ ವೇದಗಳನ್ನೂ ಅರಿತವನು.
ಶ್ಲೋಕ ೭ ಹಾಗೂ ೮ - ನಿರ್ಣಯರಚನೆಗೆ ಕಾರಣ - ರಚನೆಗೆ ಅರ್ಹತೆ (೨/೨)
ದೇಶೇ ದೇಶೇ ತಥಾ ಗ್ರಂಥಾನ್ ದೃಷ್ಟ್ವಾಚೈವ ಪೃಥಗ್ವಿಧಾನ್ |
ಯಥಾ ಸ ಭಗವಾನ್ ವ್ಯಾಸಃ ಸಾಕ್ಷಾನ್ನಾರಾಯಣ ಃ ಪ್ರಭುಃ ||೭||
ಜಗಾದ ಭಾರತಾದ್ಯೇಷು ತಥಾ ವಕ್ಷ್ಯೇ ತದೀಕ್ಷಯಾ |
ಸಂಕ್ಷೇಪಾತ್ ಸರ್ವಶಾಸ್ತ್ರಾರ್ಥಂ ಭಾರತಾರ್ಥಾನುಸಾ ರತಃ ||೮||
ಅನುವಾದ
ಪ್ರತ್ಯಕ್ಷವಾಗಿಯೂ ಬೇರೆ ಬೇರೆ ದೇಶಗಳಲ್ಲಿರುವ ಅನೇಕತೆರನಾದ ನಿರ್ಣಯ ಪ್ರತಿಪಾದಕ ಗ್ರಂಥಗಳನ್ನು ಸಹ ಆ ಶ್ರೀಹರಿಯ ಅನುಗ್ರಹದಿಂದಲೇ ತಿಳಿದು, ಸಮರ್ಥರೂ ಷಡ್ಗುಣೈಶ್ವರ್ಯಸಂ ಪನ್ನನಾದ ಸಾಕ್ಷಾತ್ ನಾರಾಯಣಾವತಾರರೂ ಆದ ಶ್ರೀವೇದವ್ಯಾಸರು ಮಹಾಭಾರತಾದಿ ಗ್ರಂಥಗಳಲ್ಲಿ ಹೇಗೇ ತಿಳಿಸಿಕೊಟ್ಟಿರುವರೋ ಹಾಗೆ ಅವರ ಕರುಣೆಯಿಂದಲೇ ಭಾರತಾರ್ಥಕ್ಕೆ ಅನುಸಾರವಾಗಿ ಸಕಲ ಶಾಸ್ತ್ರಾರ್ಥವನ್ನು ಸಂಕ್ಷೇಪವಾಗಿ ಹೇಳುವೆನು.
ಶ್ಲೋಕ ೯ ಹಾಗೂ ೧೦ - ಮಹಾಭಾರತವು ಸಕಲ ಶಾಸ್ತ್ರಗಳ ನಿರ್ಣಯ - ಮಹಾಭಾರತದ ತುಲಾಭಾರ
ನಿರ್ಣಯಃ ಸರ್ವಶಾಸ್ತ್ರಾಣಾಂ ಭಾರತಂ ಪರಿಚಕ್ಷತೇ |
ಭಾರತಂ ಸರ್ವವೇದಾಶ್ಚ ತುಲಾಮಾರೋಪಿತಾಃ ಪುರಾ ||೯||
ದೇವೈರ್ಬ್ರಹ್ಮಾದಿಭಿಃ ಸರ್ವೈಃ ಋಷಿಭಿಶ್ಚ ಸಮನ್ವಿತೈಃ |
ವ್ಯಾಸಸ್ಯೈವಾಜ್ಞಯಾ ತತ್ರ ತ್ವತ್ಯರಿಚ್ಯತ ಭಾರತಮ್ ||೧೦||
ಅನುವಾದ
ಸರ್ವಶಾಸ್ತ್ರರ್ಥಗಳಿಗೂ ಮಹಾಭಾರತವೇ ನಿರ್ಣಾಯಕವೆಂಬುದಾಗಿ ಹೇಳುವರು; ಹಿಂದೆ ಮಹಾಭಾರತ ಮತ್ತು ಸಕಲ ವೇದಗಳು ಶ್ರೀವೇದವ್ಯಾಸರ ಆದೇಶದಂತೆಯೇ, ಬ್ರಹ್ಮಾದಿ ದೇವತೆಗಳಿಂದಲೂ, ಸಕಲ ಋಷಿಗಳಿಂದಲೂ, ಒಂದು ತಕ್ಕಡಿಯಲ್ಲಿ ಇರಿಸಿ ತೂಗಲ್ಪಟ್ಟವು; ಆಗ ಮಹಾಭಾರತವು ವೇದಾದಿ ಇತರ ಸಕಲ ಶಾಸ್ತ್ರಗಳನ್ನು ಮೀರಿಸಿತು.
ಶ್ಲೋಕ ೧೧ - ಮಹಭಾರತದ ನಿರ್ವಚನ
ಮಹತ್ವಾದ್ಭಾರವತ್ವಾಚ್ಚ ಮಹಾಭಾರತಮುಚ್ಯತೇ |
ನಿರುಕ್ತಸ್ಯ ಯೋ ವೇದ ಸರ್ವಪಾಪೈಃ ಪ್ರಮುಚ್ಯತೇ ||೧೧||
ಅನುವಾದ
ಮಹತ್ತರವಾದ್ದರಿಂದಲೂ, ಭಾರವಾದದ್ದರಿಂದಲೂ ’ಮಹಾಭಾರತ’ ಎಂಬುದಾಗಿ ಮಹಾಭಾರತ ತಿಳಿಸಿದೆ; ಅದರ ನಿರ್ವಚನವನ್ನು ಯಾವನು ತಿಳಿಯುವನೋ ಅವನು ಸರ್ವಪಾಪಗಳಿಂದಲೂ ಬಿಡುಗಡೆ ಹೊಂದುವನು.
ಶ್ಲೋಕ ೧೨ - ಮಹಾಭಾರತದದಿಂದ ತತ್ತ್ವನಿರ್ಣಯದ ಕ್ರಮ
ನಿರ್ಣಯಃ ಸರ್ವಶಾಸ್ತ್ರಾಣಾಂ ಸದೃಷ್ಟಾಂತೋ ಹಿ ಭಾರತೇ |
ಕೃತೋ ವಿಷ್ಣುವಶತ್ವಂ ಹಿ ಬ್ರಹ್ಮಾದೀನಾಂ ಪ್ರಕಾಶಿತಮ್ |
ಯತಃ ಕೃಷ್ಣವಶೇ ಸರ್ವೇ ಭೀಮಾದ್ಯಾಃ ಸಮ್ಯಗೀರಿತಾಃ ||೧೧||
ಅನುವಾದ
ಭಾರತದಲ್ಲಿ ನಿದರ್ಶನಪೂರ್ವಕವಾಗಿ ಸರ್ವಶಾಸ್ತ್ರಗಳ ನಿರ್ಣಯವುಮಾಡಲ್ಪಟ್ಟಿದೆ; ಅಲ್ಲಿ ಭೀಮಾದಿ ಸರ್ವರೂ ಶ್ರೀಕೃಷ್ಣನ ಅಧೀನರು ಎಂದು ಸ್ಫುಟವಾಗಿ ನಿರೂಪಿತವಾಗಿರುವದರಿಂದ, ಬ್ರಹ್ಮಾದಿಗಳ ವಿಷ್ಣುವಶತ್ವವು ಅದರಲ್ಲಿ ಸ್ಪಷ್ಟವಾಗಿ ಪ್ರತಿಪಾದಿತವಾಗಿದೆ .
ಶ್ಲೋಕ ೧೩ ಹಾಗೂ ೧೪ - ವಿಷ್ಣುವೇ ಸಕಲರಿಗೂ ಜ್ಞಾನಪ್ರದಾತ
ಸರ್ವೇಷಾಂ ಜ್ಞಾನದೋ ವಿಷ್ಣುಃ ಯಶೋದಾತೇತಿ ಚೋದಿತಃ ||೧೩||
ಯಸ್ಮಾತ್ ವ್ಯಾಸಾತ್ಮನಾ ತೇಷಾಂ ಭಾರತೇ ಉಶ ಊಚಿವಾನ್ |
ಜ್ಞಾನದಶ್ಚ ಶುಕಾದೀನಾಂ ಬ್ರಹ್ಮರುದ್ರಾದಿರೂಪಿಣಾಮ್ ||೧೪||
ಅನುವಾದ
ಸಕಲರಿಗೂ ವಿಷ್ಣುವೇ ಜ್ಞಾನಪ್ರದ, ಯಶಃಪ್ರದ ಎಂಬುದಾಗಿ ಹೇಳಲ್ಪಟ್ಟಿರುವನು; ಹೇಗೆಂದರೆ ವ್ಯಾಸರೂಪದಿಂದ ಭಾರತದಲ್ಲಿ ಭೀಮಾದಿಗಳ ಹಿರಿಮೆಯನ್ನು ತಿಳಿಸಿ ಯಶಃಪ್ರದರಾಗಿರುವರು; ಮತ್ತು ಬ್ರಹ್ಮರುದ್ರಾದಿಗಳ ಅವತಾರರಾದ ಶುಕಾಚಾರ್ಯರು ಮೊದಲಾದವರಿಗೆ ತತ್ತ್ವೋಪದೇಶವನ್ನು ಮಾಡಿ ಜ್ಞಾನಪ್ರದರಾಗಿರುವರು.
ಶ್ಲೋಕ ೧೫ - ಭೀಮನಿಂದ ತಿಳಿಯುವ ತತ್ತ್ವ
ಬ್ರಹ್ಮಾsಧಿಕಶ್ಚ ದೇವೇಭ್ಯಃ ಶೇಷಾದ್ರುದ್ರಾದಪೀರಿತಃ |
ಪ್ರಿಯಶ್ಚ ವಿಷ್ಣೋಃ ಸರ್ವೇಭ್ಯ ಇತಿ ಭೀಮನಿದರ್ಶನಾತ್ ||೧೫||
ಅನುವಾದ
ಬ್ರಹ್ಮದೇವರು ಇತರ ಸಕಲದೇವತೆಗಳಿಗಿಂತಲೂ, ಶೇಷನಿಗಿಂತಲೂ, ರುದ್ರನಿಗಿಂತಲೂ ಶ್ರೇಷ್ಠರು; ಮತ್ತು ಇತರ ಎಲ್ಲರಿಗಿಂತಲೂ ಮಹಾವಿಷ್ಣುವಿಗೆ ಅವರೇ ಹೆಚ್ಚುಪ್ರಿಯರು ಎಂಬ ಪ್ರಮೇಯವು ಭೀಮಸೇನನ ನಿದರ್ಶನದಿಂದ ತಿಳಿಸಲ್ಪಟ್ಟಿದೆ.
ಶ್ಲೋಕ ೧೬ - ವಾಯುದೇವರು ಶ್ರೀಹರಿಯ ಪ್ರಧಾನ ಅಂಗ
ಭೂಭಾರಹಾರಿಣೋ ವಿಷ್ಣೋಃ ಪ್ರಧಾನಾಂಗಂ ಹಿ ಮಾರುತಿಃ |
ಮಾಗಧಾದಿವಧಾದೇವ ದುರ್ಯೋಧನವಧಾದಪಿ ||೧೬||
ಅನುವಾದ
ಜರಾಸಂಧ ಮೊದಲಾದವರ ಸಂಹಾರ ಮತ್ತು ದುರ್ಯೋಧನಸಂಹಾರ ಇವುಗಳಿಂದ ಭೀಮಸೇನನು ವಿಷ್ಣುವಿನ ಭೂಭಾರಹರಣಕಾರ್ಯದಲ್ಲಿ ಪ್ರಧಾನಾಂಗ ಎಂದು ತಿಳಿಯುವದು.
ಶ್ಲೋಕ ೧೭ - ಕ್ಷತ್ರಿಯರಲ್ಲಿ ಬಲವೇ ನಿರ್ಣಾಯಕ
ಯೋ ಯ ಏವ ಬಲಜ್ಯೇಷ್ಠಃ ಕ್ಷತ್ರಿಯೇಷು ಸ ಉತ್ತಮಃ |
ಅಂಗಂ ಚೇದ್ವಿಷ್ಣುಕಾರ್ಯೇಷು ತದ್ಭಕ್ತೈವ ನ ಚಾನ್ಯಥಾ ||೧೭||
ಅನುವಾದ
ಕ್ಶತ್ರಿಯರಲ್ಲಿ ಯಾವನು ಬಲದಲ್ಲಿ ಮಿಗಿಲೋ ಅವನೇ ಉತ್ತಮ; ಆದರೆ ಅಂತಹ ಬಲವು ಭಗವತ್ಕಾರ್ಯಕ್ಕೆ ಅಂಗವಾಗಿರಬೇಕು; ವಿಷ್ಣುಭಕ್ತಿಯಿಂದ ಕೂಡಿರಬೇಕು; ಇಲ್ಲವಾದಲ್ಲಿ ಅದು ಉತ್ತಮತ್ವಕ್ಕೆ ಸಾಧಕವಾಗದು.
ಶ್ಲೋಕ ೧೮ - ನೈಸರ್ಗಿಕ ಬಲವೇ ಪ್ರಧಾನ
ಬಲಂ ನೈಸರ್ಗಿಕಂ ತಚ್ಚೇದ್ವರಾಸ್ತ್ರಾದೇಸ್ತದನ್ಯಥಾ |
ಅನ್ಯಾವೇಶನಿಮಿತ್ತಂ ಚೇದ್ಬಲಮನ್ಯಾತ್ಮಕಂ ಹಿ ತತ್ ||೧೮||
ಅನುವಾದ
ಅಂತಹ ಬಲವು ಸ್ವಾಭಾವಿಕವಾಗಿದ್ದಲ್ಲಿ ಮಾತ್ರ ಅದು ಉತ್ತಮತ್ವಕ್ಕೆ ಗಮಕ; ವರ ಅಸ್ತ್ರ ಮೊದಲಾದವುಗಳಿಂದ ಉಂಟಾಗಿದ್ದ ಬಲವಾಗಿದ್ದಲ್ಲಿ ಅದು ಉತ್ತಮತ್ವಕ್ಕೆ ಸಾಧಕವಾಗದೆ ಅಧಮತ್ವಕ್ಕೇ ದ್ಯೋತಕ, ಇತರರ ಆವೇಶದ ನಿಮಿತ್ತ ಉಂಟಾಗಿದ್ದ ಬಲವಂತು ಆವೇಶಮಾಡಿದವರ ಬಲವೇ ಆಗುವದು.
ಶ್ಲೋಕ ೧೯ - ದೇವತೆಗಳಲ್ಲೂ ಬಲವೇ ನಿರ್ಣಾಯಕ
ದೇವೇಷು ಬಲಿನಾಮೇವ ಭಕ್ತಿಜ್ಞಾನೇ ನ ಚಾನ್ಯಥಾ |
ಸ ಏವ ಚ ಪ್ರಿಯೋ ವಿಷ್ಣೋರ್ನಾನ್ಯಥಾ ತು ಕಥಂಚನ ||೧೯||
ಅನುವಾದ
ದೇವತೆಗಳಲ್ಲಿ ಬಲವಿದ್ದವರಿಗೇ ಭಕ್ತಿ ಮತ್ತು ಜ್ಞಾನಗಳು, ಇಲ್ಲವಾದಲ್ಲಿ ಇಲ್ಲ; ಮತ್ತು ಹಾಗೆ ಬಲಶಾಲಿಯಾದನೇ ಶ್ರೀಹರಿಗೆ ಪ್ರಿಯ; ಇಲ್ಲವಾದಲ್ಲಿ ಅವನಿಗೆ ಪ್ರಿಯನಾಗಲಾರ.
ಶ್ಲೋಕ ೨೦ - ಬಲದ ಹಿರಿಮೆಗೆ ಕಾರಣ (೧/೨)
ತಸ್ಮಾದ್ಯೋ ಯೋ ಬಲಜ್ಯೇಷ್ಠಃ ಸ ಗುಣಜ್ಯೇಷ್ಠ ಏವ ಚ |
ಬಲಂ ಹಿ ಕ್ಷತ್ರಿಯೇ ವ್ಯಕ್ತಂ ಜ್ಞಾಯತೇ ಸ್ಥೂಲದೃಷ್ಟಿಭಿಃ ||೨೦||
ಅನುವಾದ
ಆದ್ದರಿಂದ ಯಾವನು ಬಲದಲ್ಲಿ ಶ್ರೇಷ್ಠನೋ ಅವನು ಗುಣದಲ್ಲಿಯೂ ಶ್ರೇಷ್ಠನೇ ಆಗಿರುವನು; ಸ್ಥೂಲದೃಷ್ಟಿಯವರಿಗೆ ಕ್ಷತ್ರಿಯರಲ್ಲಿ ಸ್ಪಷ್ಟವಾಗಿ ಗೋಚರಿಸುವದು ಬಲವೇ ಅಲ್ಲವೇ!
ಶ್ಲೋಕ ೨೧ - ಬಲದ ಹಿರಿಮೆಗೆ ಕಾರಣ (೨/೨)
ಜ್ಞಾನಾದಯೋ ಗುಣಾ ಯಸ್ಮಾತ್ ಜ್ಞಾಯಂತೇ ಸೂಕ್ಷ್ಮದೃಷ್ಟಿಭಿಃ |
ತಸ್ಮಾದ್ಯತ್ರ ಬಲಂ ತತ್ರ ವಿಜ್ಞಾತವ್ಯಾ ಗುಣಾಃ ಪರೇ ||೨೧||
ಅನುವಾದ
ಜ್ಞಾನ ಮೊದಲಾದ ಗುಣಗಳು ಸೂಕ್ಷ್ಮದೃಷ್ಟಿಗಳಿಂದ ಮಾತ್ರವೇ ತಿಳಿಯಲ್ಪಡುವಂತಹವುಗಳಾಗಿವೆ; ಆದ್ದರಿಂದ ಬಲವಿರುವಲ್ಲಿ ಶ್ರೇಷ್ಠವಾದ ಜ್ಞಾನಾದಿಗುಣಗಳು ಸಹ ಇರುವವು ಎಂದು ತಿಳಿಯಬೇಕು.
ಶ್ಲೋಕ ೨೨ - ಹರಿಪ್ರೀತಿಗೆ ಕಾರಣವಾಗುವ ಬಲವೇ ನಿರ್ಣಾಯಕ
ದೇವೇಷ್ವೇವ ನ ಚಾನ್ಯೇಷು ವಾಸುದೇವಪ್ರತೀಪತಃ |
ಕ್ಷತ್ರಾದನ್ಯೇಷ್ವಪಿ ಬಲಂ ಪ್ರಮಾಣಂ ಯತ್ರ ಕೇಶವಃ |
ಪ್ರವೃತ್ತೋ ದುಷ್ಟನಿಧನೇ ಜ್ಞಾನಕಾರ್ಯೇ ತದೈವ ಚ ||೨೨||
ಅನುವಾದ
ಬಲಾಧಿಕ್ಯವಿರುವಲ್ಲಿ ಜ್ಞಾನಾದಿ ಗುಣಾಧಿಕ್ಯವೆಂಬ ನಿಯಮವು ದೇವತೆಗಳಲ್ಲೇ ಹೊರತು ಇತರರಲ್ಲಲ್ಲ. ಅವರು ವಿಷ್ಣುವಿನ ವಿರೋಧಿಗಳಾದ್ದರಿಂದ ಅವರಿಗೆ ಈ ನಿಯಮವು ಅನ್ವಯಿಸುವದಿಲ್ಲ; ಶ್ರೀಹರಿಯು ದುಷ್ಟಶಿಕ್ಷಣಕಾರ್ಯ ಮತ್ತು ತದುಪಯುಕ್ತ ಜ್ಞಾನಕಾರ್ಯಗಳಿಗೆಂದು ಅವತಾರಮಾಡಿದಾಗ ಕ್ಷತ್ರಿಯರಿಗೆ ಮಾತ್ರವಲ್ಲದೆ ಬ್ರಾಹ್ಮಣಾದಿ ಇತರ ವರ್ಣದವರ ತಾರತಮ್ಯಕ್ಕೂ ಅವರವರ ಬಲವೇ ಆಧಾರವಾಗುತ್ತದೆ.
ಶ್ಲೋಕ ೨೩ - ಬ್ರಾಹ್ಮಣರಿಗೆ ಜ್ಞಾನವೇ ಪ್ರಧಾನ
ಅನ್ಯತ್ರ ಬ್ರಾಹ್ಮಣಾನಾಂ ತು ಪ್ರಮಾಣಂ ಜ್ಞಾನಮೇವ ಹಿ |
ಕ್ಷತ್ರಿಯಾಣಾಂ ಬಲಂ ಚೈವ ಸರ್ವೇಷಾಂ ವಿಷ್ಣುಕಾರ್ಯತಾ ||೨೩||
ಅನುವಾದ
ಇತರ ಪ್ರಸಂಗಗಳಲ್ಲಿ ಬ್ರಾಹ್ಮಣರ ಹಿರಿಮೆಗೆ ಜ್ಞಾನವೂ, ಕ್ಷತ್ರಿಯರಿಗೆ ಬಲವೂ ಮುಖ್ಯ ಆಧಾರ; ಬ್ರಾಹ್ಮಣಾದಿ ಸಕಲರಿಗೂ ಮೂಲತಃ ಯೋಗ್ಯತಾ ನಿರ್ಣಾಯಕವಾದ ಮುಖ್ಯ ಆಧಾರವೆಂದರೆ ಭಗವತ್ಕಾರ್ಯಸಾಧನೆಯೇ.
ಶ್ಲೋಕ ೨೪ - ಶ್ರೀಹರಿಯ ಬಲಕಾರ್ಯ ಜ್ಞಾನಕಾರ್ಯದ ರೂಪಗಳು
ಕೃಷ್ಣರಾಮಾದಿರೂಪೇಷು ಬಲಕಾರ್ಯೋ ಜನಾರ್ದನಃ |
ದತ್ತವ್ಯಾಸಾದಿರೂಪೇಷು ಜ್ಞಾನಕಾರ್ಯಸ್ತಥಾ ಪ್ರಭುಃ ||೨೪||
ಅನುವಾದ
ಪ್ರಭುವಾದ ಶ್ರೀಹರಿಯು ಕೃಷ್ಣ ರಾಮ ಮೊದಲಾದ ರೂಪಗಳಲ್ಲಿ ಬಲಕಾರ್ಯವನ್ನೂ; ದತ್ತಾತ್ರೇಯ, ವೇದವ್ಯಾಸ ಮೊದಲಾದ ರೂಪಗಳಿಂದ ಜ್ಞಾನಕಾರ್ಯವನ್ನು ಮಾಡುವನು.
ಶ್ಲೋಕ ೨೫, ೨೬, ೨೭ ಹಾಗೂ ೨೮ - ಶ್ರೀಹರಿಯ ಸಾಕ್ಷಾದವತಾರಗಳು
ಮತ್ಸ್ಯಕೂರ್ಮವರಾಹಶ್ಚ ಸಿಂಹವಾಮನಭಾರ್ಗವಾಃ |
ರಾಘವಃ ಕೃಷ್ಣಬುದ್ಧೌ ಚ ಕೃಷ್ಣದ್ವೈಪಾಯನಸ್ತಥಾ ||೨೫||
ಕಪಿಲೋ ದತ್ತವೃಷಭೌ ಶಿಂಶುಮಾರೋ ರುಚೇಃ ಸುತಃ |
ನಾರಯಣೋ ಹರಿಃ ಕೃಷ್ಣಸ್ತಾಪಸೋ ಮನುರೇವಚ ||೨೬||
ಮಹಿದಾಸಸ್ತಥಾ ಹಂಸಃ ಸ್ತ್ರೀರೂಪೋ ಹಯಶೀರ್ಷವಾನ್ |
ತಥೈವ ಬಡಬಾವಕ್ತ್ರಃ ಕಲ್ಕೀ ಧನ್ವಂತರಿಃ ಪ್ರಭುಃ ||೨೭||
ಇತ್ಯಾದ್ಯಾಃ ಕೇವಲೋ ವಿಷ್ಣುರ್ನೈಷಾಂ ಭೇದಃ ಕಥಂಚನ |
ನ ವಿಶೇಷೋ ಗುಣೈಃ ಸರ್ವೈರ್ಬಲಜ್ಞಾನಾದಿಭಿಃ ಕ್ವಚಿತ್ ||೨೮||
ಅನುವಾದ
ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಯಾದವಕೃಷ್ಣ, ಬುದ್ಧ, ವೇದವ್ಯಾಸ (ವಾಸಿಷ್ಠಕೃಷ್ಣ) , ಕಪಿಲ, ದತ್ತಾತ್ರೇಯ, ವೃಷಭ, ಶಿಂಶುಮಾರ, ಯಜ್ಞ, ನಾರಯಣ, ಹರಿ, ಕೃಷ್ಣ, ತಾಪಸಮನು, ಮಹಿದಾಸ (ಐತರೇಯ), ಹಂಸ, ನಾರಾಯಣೀ (ಮೋಹಿನೀ) , ಹಯಗ್ರೀವ, ಬಡವಾನಲ, ಕಲ್ಕೀ, ಧನ್ವಂತರೀ ಇವೇ ಮೊದಲಾದವುಗಳು ಸಾಕ್ಷಾತ್ ವಿಷ್ಣುರೂಪಗಳು. ಇವುಗಳಲ್ಲಿ ಯಾವರೀತಿಯಲ್ಲೂ ಭೇದ ಇಲ್ಲವೇ ಇಲ್ಲ; ಬಲ, ಜ್ಞಾನ ಮೊದಲಾದ ಸಕಲ ಗುಣಗಳಲ್ಲೂ ಇವುಗಳಲ್ಲಿ ಯಾವುದೇ ವ್ಯತ್ಯಾಸ ಎಲ್ಲೂ ಇರುವದಿಲ್ಲ.
To be continued ......
shreemadaanaMdateerthabhagavatpaada praNeeta
mahaabhaaratataatparyanirNayaH
||shreemaddhanumadbhImamadhwaaMrgataraamakRuShNavEdavyaasaatmakashreelakShmIhayagreevaaya namaH||
adhyaaya 2 - bhaaratavaakyOddhaaraH
shlOka 1 - maMgaLaacharaNe
jayati hariraciMtyaH sarvadEvaikavaMdyaH paramagururabhIShTa avaaptidaH sajjanaanaam |
nikhilaguNagaNaarNO nityanirmuktadOShaH sarasijanayanO&sau shreepatirmaanadO naH ||1||
anuvaada
chiMtanege eTukadavanU, sakala dEvategaLiMdalU sarvOttamatwEna vaMdyanU, brahmadEvaru modalaada uttamadEvategaLige guruvU, sajjanara abhIShTavannu IDErisuvavanU, guNagaNagaLa saagaranU, sadaa sakaladOShadooranU, puMDarIkaakShanU, lakShmIpatiyU, nammellarigU j~jaanapradanU aada shreehariyu sarvOtkRuShTanaagiruvanu.
shlOka 2 - adhyaayada viShaya
uktaH poorvaadhyaayE shaastraaNaaM nirNayaH parO divyaH |
atha bhaaratavaakyaanyEt airEvaadhyavasyaMtE ||2||
anuvaada
hiMdina adhyaayadalli shaastragaLa viShNusarvOttamatwa pratipaadakavaada nirNaya hELalpaTTitu; eega mahaabhaaratada vaakyagaLu ee uttamavaada vaakyagaLiMdalE nirNayisalpaDuvavu.
shlOka 3 - graMthaviplavakke kaaraNagaLu (1/2)
kwacid graMthaan prakShipaMti kwacidaMtaritaanapi |
kuryaH kwaciccavyatyaasaM pramaadaat kwacidanyathaa ||3||
anuvaada
kelaveDegaLalli shlOkagaLannu sErisuvaru; matte kelaveDe alliruva tamma matakke pratikoolavaada shlOkagaLannu tegeduhaakuvaru; kelaveDegaLalli shlOkagaLannu sthaLapallaTa maaDuvaru; idaroMdige aj~jaana athavaa bhraaMtigaLiMdaagi saha kelavomme graMthada swaroopa keDuvaduMTu.
shlOka 4 - graMthaviplavakke kaaraNagaLu (2/2)
anutsannaa api graMthaa vyaakulaa iti sarvashaH |
utsannaaH praayashaH sarvE kOTyaMshO&pi na vartatE ||4||
anuvaada
naashavaagade uLidiruva graMthagaLu saha hIge astavyastavaagive; graMthagaLella naashavaagiruvadE heccu; kOTiya oMdu paalinaShTu graMthagaLu saha eega uLidilla.
shlOka 5 haagU 6 - nirNayaracanege kaaraNa - rachanege arhate (1/2)
graMthO&pyEvaM viluLitaH kimvarthO dEvadurgamaH |
kalaavEvaM vyaakulitE nirNayaaya pracOditaH ||5||
hariNaa nirNayaan vacmi vijaanaMstatprasaad ataH |
shaastraaMtaraaNi saMjaanan vEdAMshcaasya prasaadataH ||6||
anuvaada
graMthagaLE hIge uccinnavaagiruvaaga innu dEvategaLigU saakalyEna tiLiyalaagada arthagaLa bagge hELuvadEnu? kaliyugadalli hIge graMthagaLu vyaakulitavaadaaga ivugaLa nirNayakkeMdu shreehariyiMda prEritanaagi naanu avana anugrahadiMdalE ellavannu ballavanaagi nirNayagaLannu tiLisuvenu. naanu avana anugrahadiMdalE itara shaastragaLannU vEdagaLannU aritavanu.
shlOka 7 haagU 8 - nirNayaracanege kaaraNa - rachanege arhate (2/2)
dEshE dEshE tathaa graMthaan dRuShTvaacaiva pRuthagvidhaan |
yathaa sa bhagavaan vyaasaH saakShaannaaraaYaNa H prabhuH ||7||
jagaada bhaarataadyEShu tathaa vakShyE tadIkShayaa |
saMkShEpaat sarvashaastraarthaM bhaarataarthaanusaa rataH ||8||
anuvaada
pratyakShavaagiyU bEre bEre dEshagaLalliruva anEkateranaada nirNaya pratipaadaka graMthagaLannu saha aa shreehariya anugrahadiMdalE tiLidu, samartharU ShaDguNaishwaryasaM pannanaada saakShaat naaraayaNaavataararU aada shreevEdavyaasaru mahaabhaarataadi graMthagaLalli hEgE tiLisikoTTiruvarO haage avara karuNeyiMdalE bhaarataarthakke anusaaravaagi sakala shaastraarthavannu saMkShEpavaagi hELuvenu.
shlOka 9 haagU 10 - mahaabhaaratavu sakala shaastragaLa nirNaya - mahaabhaaratada tulaabhaara
nirNayaH sarvashaastraaNaaM bhaarataM parichakShatE |
bhaarataM sarvavEdaaSca tulaamaarOpitaaH puraa ||9||
dEvairbrahmaadibhiH sarvaiH RuShibhiSca samanvitaiH |
vyaasasyaivaaj~jayaa tatra twatyarichyata bhaaratam ||10||
anuvaada
sarvashaastrarthagaLigU mahaabhaaratavE nirNaayakaveMbudaagi hELuvaru; hiMde mahaabhaarata mattu sakala vEdagaLu shreevEdavyaasara aadEshadaMteyE, brahmaadi dEvategaLiMdalU, sakala RuShigaLiMdalU, oMdu takkaDiyalli irisi toogalpaTTavu; aaga mahaabhaaratavu vEdaadi itara sakala shaastragaLannu mIrisitu.
shlOka 11 - mahabhaaratada nirvacana
mahatwaadbhaaravatwaacca mahaabhaaratamucyatE |
niruktasya yO vEda sarvapaapaiH pramucyatE ||11||
anuvaada
mahattaravaaddariMdalU, bhaaravaadaddariMdalU 'mahaabhaarata' eMbudaagi mahaabhaarata tiLiside; adara nirvacanavannu yaavanu tiLiyuvanO avanu sarvapaapagaLiMdalU biDugaDe hoMduvanu.
shlOka 12 - mahaabhaaratadadiMda tattwanirNayada krama
nirNayaH sarvashaastraaNaaM sadRuShTaaMtO hi bhaaratE |
kRutO viShNuvashatwaM hi brahmaadInaaM prakaashitam |
yataH kRuShNavashE sarvE bheemaadyaaH samyagIritaaH ||11||
anuvaada
bhaaratadalli nidarshanapoorvakavaagi sarvashaastragaLa nirNayavumaaDalpaTTide; alli bheemaadi sarvarU shreekRuShNana adhInaru eMdu sphuTavaagi nirUpitavaagiruvadariMda, brahmaadigaLa viShNuvashatwavu adaralli spaShTavaagi pratipaaditavaagide .
shlOka 13 haagU 14 - viShNuvE sakalarigU j~Jaanapradaata
sarvEShaaM j~JaanadO viShNuH yashOdaatEti chOditaH ||13||
yasmaat vyaasaatmanaa tEShaaM bhaaratE usha Ucivaan |
j~Jaanadashca shukaadInaaM brahmarudraadiroopiNaam ||14||
anuvaada
sakalarigU viShNuvE j~Jaanaprada, yashaHprada eMbudaagi hELalpaTTiruvanu; hEgeMdare vyaasaroopadiMda bhaaratadalli bheemaadigaLa hirimeyannu tiLisi yashaHpradaraagiruvaru; mattu brahmarudraadigaLa avataararaada shukaacaaryaru modalaadavarige tattvOpadEshavannu maaDi j~Jaanapradaraagiruvaru.
shlOka 15 - bheemaniMda tiLiyuva tattwa
brahmaa&dhikashca dEvEbhyaH shEShaadrudraadapIritaH |
priyashca viShNOH sarvEbhya iti bhImanidarshanaat ||15||
anuvaada
brahmadEvaru itara sakaladEvategaLigiMtalU, SEShanigiMtalU, rudranigiMtalU shrEShTharu; mattu itara ellarigiMtalU mahaaviShNuvige avarE heccupriyaru eMba pramEyavu bheemasEnana nidarshanadiMda tiLisalpaTTide.
shlOka 16 - vaayudEvaru shreehariya pradhaana aMga
bhUbhaarahaariNO viShNOH pradhaanaaMgaM hi maarutiH |
maagadhaadivadhaadEva duryOdhanavadhaadapi ||16||
anuvaada
jaraasaMdha modalaadavara saMhaara mattu duryOdhanasaMhaara ivugaLiMda bhImasEnanu viShNuvina bhUbhaaraharaNakaaryadalli pradhaanaaMga eMdu tiLiyuvadu.
shlOka 17 - kShatriyaralli balavE nirNaayaka
yO ya Eva balajYEShThaH kShatriyEShu sa uttamaH |
aMgaM cEdwiShNukaaryEShu tadbhaktaiva na chaanyathaa ||17||
anuvaada
kshatriyaralli yaavanu baladalli migilO avanE uttama; aadare aMtaha balavu bhagavatkaaryakke aMgavaagirabEku; viShNubhaktiyiMda kooDirabEku; illavaadalli adu uttamatwakke saadhakavaagadu.
shlOka 18 - naisargika balavE pradhaana
balaM naisargikaM taccEdwaraastraadEstadanyathaa |
anyaavEshanimittaM cEdbalamanyaatmakaM hi tat ||18||
anuvaada
aMtaha balavu swaabhaavikavaagiddalli maatra adu uttamatwakke gamaka; vara astra modalaadavugaLiMda uMTaagidda balavaagiddalli adu uttamatwakke saadhakavaagade adhamatwakkE dyOtaka, itarara aavEshada nimitta uMTaagidda balavaMtu aavEshamaaDidavara balavE aaguvadu.
shlOka 19 - dEvategaLallU balavE nirNaayaka
dEvEShu balinaamEva bhaktij~jaanE na caanyathaa |
sa Eva ca priyO viShNOrnaanyathaa tu kathaMcana ||19||
anuvaada
dEvategaLalli balaviddavarigE bhakti mattu j~jaanagaLu, illavaadalli illa; mattu haage balashaaliyaadanE shreeharige priya; illavaadalli avanige priyanaagalaara.
shlOka 20 - balada hirimege kaaraNa (1/2)
tasmaadyO yO balajyEShThaH sa guNajyEShTha Eva ca |
balaM hi kShatriyE vyaktaM j~jaayatE sthooladRuShTibhiH ||20||
anuvaada
aaddariMda yaavanu baladalli shrEShThanO avanu guNadalliyU shrEShThanE aagiruvanu; sthooladRuShTiyavarige kShatriyaralli spaShTavaagi gOcarisuvadu balavE allavE!
shlOka 21 - balada hirimege kaaraNa (2/2)
j~jaanaadayO guNaa yasmaat j~JaayaMtE sookShmadRuShTibhiH |
tasmaadyatra balaM tatra vij~Jaatavyaa guNaaH parE ||21||
anuvaada
j~jaana modalaada guNagaLu sookShmadRuShTigaLiMda maatravE tiLiyalpaDuvaMtahavugaLaagive; aaddariMda balaviruvalli shrEShThavaada j~jaanaadiguNagaLu saha iruvavu eMdu tiLiyabEku.
shlOka 22 - haripreetige kaaraNavaaguva balavE nirNaayaka
dEvEShvEva na chaanyEShu vaasudEvapratIpataH |
kShatraadanyEShwapi balaM pramaaNaM yatra kEshavaH |
pravRuttO duShTanidhanE j~jaanakaaryE tadaiva ca ||22||
anuvaada
balaadhikyaviruvalli j~jaanaadi guNaadhikyaveMba niyamavu dEvategaLallE horatu itararallalla. avaru viShNuvina virOdhigaLaaddariMda avarige ee niyamavu anwayisuvadilla; shreehariyu duShTashikShaNakaarya mattu tadupayukta j~jaanakaaryagaLigeMdu avataaramaaDidaaga kShatriyarige maatravallade braahmaNaadi itara varNadavara taaratamyakkU avaravara balavE aadhaaravaaguttade.
shlOka 23 - braahmaNarige j~jaanavE pradhaana
anyatra braahmaNaanaaM tu pramaaNaM j~jaanamEva hi |
kShatriyaaNaaM balaM caiva sarvEShaaM viShNukaaryataa ||23||
anuvaada
itara prasaMgagaLalli braahmaNara hirimege j~JaanavU, kShatriyarige balavU mukhya aadhaara; braahmaNaadi sakalarigU moolataH yOgyataa nirNaayakavaada mukhya aadhaaraveMdare bhagavatkaaryasaadhaneyE.
shlOka 24 - shreehariya balakaarya j~jaanakaaryada roopagaLu
kRuShNaraamaadiroopEShu balakaaryO janaardanaH |
dattavyaasaadiroopEShu j~jaanakaaryastathaa prabhuH ||24||
anuvaada
prabhuvaada shreehariyu kRuShNa raama modalaada roopagaLalli balakaaryavannU; dattaatrEya, vEdavyaasa modalaada roopagaLiMda j~jaanakaaryavannu maaDuvanu.
shlOka 25, 26, 27 haagU 28 - shreehariya saakShaadavataaragaLu
matsyakoormavaraahashca siMhavaamanabhaargavaaH |
raaghavaH kRuShNabuddhau ca kRuShNadwaipaayanastathaa ||25||
kapilO dattavRuShabhau shiMshumaarO ruchEH sutaH |
naarayaNO hariH kRuShNastaapasO manurEvaca ||26||
mahidaasastathaa haMsaH streeroopO hayasheerShavaan |
tathaiva baDabaavaktraH kalkI dhanwaMtariH prabhuH ||27||
ityaadyaaH kEvalO viShNurnaiShaaM bhEdaH kathaMcana |
na vishEShO guNaiH sarvairbalaj~jaanaadibhiH kwacit ||28||
anuvaada
matsya, koorma, varaaha, narasiMha, vaamana, parashuraama, raama, yaadavakRuShNa, buddha, vEdavyaasa (vaasiShThakRuShNa) , kapila, dattaatrEya, vRuShabha, shiMshumaara, yaj~ja, naarayaNa, hari, kRuShNa, taapasamanu, mahidaasa (aitarEya), haMsa, naaraayaNI (mOhinI) , hayagrIva, baDavaanala, kalkI, dhanwaMtarI ivE modalaadavugaLu saakShaat viShNuroopagaLu. ivugaLalli yaavarItiyallU bhEda illavE illa; bala, j~jaana modalaada sakala guNagaLallU ivugaLalli yaavudE vyatyaasa ellU iruvadilla.
To be continued ....
About Me
- Madhwa Vallabha
- Hari Sarvottama Vayu Jeevottama
A very warm welcome to the blog of Madhwa Brahmins community.
We, Madhwa Brahmins are followers of Jagadguru Sriman Madhwacharya. We originally hail from places in Karnataka and the neighboring states of Maharashtra, Andhra Pradesh, Tamil Nadu and Kerala. Our main dialects are Kannada, Tulu, Marathi, Telugu and Konkani.
A brief background of Jagadguru Sri Madhwacharya:
prathamO hanumAn nAma dviteeyO bheema Eva cha |
pUrNaprajna tRuteeyastu bhagavat kAryasAdhakaH ||
As the above shloka from khila vAyustuti explains, Sri Madhwacharya (also known by the names Poornaprajna and Anandateertha) is the third incarnation of Lord MukhyaprAna Vaayu, after Lord Hanuman and Lord Bheemasena. He is the chief proponent of TattvavAda, popularly known as Dvaita. He was born on Vijayadashami day of 1238 CE at Paajaka Kshetra, a small village near Udupi. He is the 22nd commentator on the Brahma sutras of Lord Sri Veda Vyasa.
Kindly note that this blog contains important topics discussed in our Orkut community and some articles on tattvavAda philosophy. All the topics can be found in the BLOG ARCHIVE (right side)
Subscribe to:
Post Comments (Atom)
No comments:
Post a Comment